ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳ...

Post on 12-Nov-2014

151 Views

Category:

Documents

11 Downloads

Preview:

Click to see full reader

DESCRIPTION

ಕನ್ನಡ ಪ್ರಭ, ಜನವರಿ 7, 2005, ಪು. 6.ಸಾರಾಂಶ: ಅಪಾರ ಮಾಹಿತಿಯ ಕಣಜವಾದ ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳ ವಿವರ ಮತ್ತು ಪೂರ್ಣಪಠ್ಯಗಳು ಅಲ್ಲಲ್ಲಿ ಲಭ್ಯವಿವೆಯಾದರೂ ಒಂದಕ್ಕೊಂದು ಸಮನ್ವಯವಿಲ್ಲ. ಇಂಟರ್ನೆಟ್ನ ೨೦ ದಶಲಕ್ಷ ಮಾಹಿತಿ ತಾಣಗಳಲ್ಲಿ ಕೆಲವು ತಾತ್ಕಾಲಿಕವಾಗಿದ್ದು ಶೇ ೪೫ರಷ್ಟು ಮಾಹಿತಿ ಪುಕ್ಕಟೆ ಲಭ್ಯವಿದೆ. ಈ ಎಲ್ಲಾ ಮಾಹಿತಿಗಳು ಬಹುಪಾಲು ಆಂಗ್ಲ ಭಾಷೆಯಲ್ಲಿದ್ದು ಉಳಿದದ್ದರಲ್ಲಿ ಹೆಚ್ಚಿನಂಶ ಜರ್ಮನ್ ಹಾಗು ಜಪಾನಿ ಭಾಷೆಯಲ್ಲಿದೆ. ಕನ್ನಡವೂ ಸೇರಿದಂತೆ ಉಳಿದೆಲ್ಲ ಭಾಷೆಗಳೂ ಬಹು ಅಲ್ಪಸಂಖ್ಯಾತವಾಗಿವೆ. ಅನೇಕ ಶೋಧಯಂತ್ರಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿ ಕನ್ನಡ ಪುಸ್ತಕಗಳನ್ನು ಹುಡುಕಬಹುದಾಗಿದ್ದು ಂ೯, ಗೂಗಲ್ ಮುಂತಾದವು ಕೃತಿಗಳ ವಿವರಗಳನ್ನು ಚಿತ್ರ ಸಮೇತ ಮುಂದಿರಿಸುತ್ತವೆ. ಕೆಲವು ಆನ್ಲೈನ್ ಪುಸ್ತಕ ಮಳಿಗೆಗಳೂ ಕನ್ನಡ ಪುಸ್ತಕಗಳ ವಿವರಗಳನ್ನು ದೊರಕಿಸುತ್ತವೆಯಾದರೂ, ಕನ್ನಡದ ಪ್ರತಿಷ್ಠಿತ ಪ್ರಕಾಶಕರು ಹಾಗೂ ಮಾರಾಟಗಾರರ ತಾಣಗಳು ನಿರಾಸೆ ಮೂಡಿಸುತ್ತವೆ. ಪ್ರಕಾಶಕರು, ವಿಶ್ವವಿದ್ಯಾಲಯಗಳು, ವಿವಿ ಗ್ರಂಥಾಲಯಗಳು, ಇತರ ಕನ್ನಡಪರ ಸಂಘಸಂಸ್ಥೆಗಳು ಇಂತಹ ಯಾವುದೇ ಪ್ರಯತ್ನವನ್ನೂ ಪರಿಣಾಮಕಾರಿಯಾಗಿ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಹೊರಗಿನ ಗ್ರಂಥಾಲಯಗಳ ಕಾರ್ಯ ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ವಿಶ್ವ ವಿದ್ಯಾಲಯಗಳು ಮಾಡದ ಕೆಲಸವನ್ನು ಕನ್ನಡ ಗಣಕ ಪರಿಷತ್ತು ಕೈಗೆತ್ತಿಕೊಂಡು ಗ್ರಂಥಸಂಪದವನ್ನು ಅಭಿವೃದ್ಧಿಪಡಿಸಿದೆ. ಇದು ಒಂದು ಉತ್ತಮ ಪ್ರಯತ್ನವಾದರೂ ಕೆಲವು ಲೋಪದೋಷಗಳು ಹಾಗೂ ತಾಂತ್ರಿಕ ತೊಡಕುಗಳು ಬಳಕೆಯನ್ನು ನಿರ್ಬಂಧಿಸುತ್ತವೆ. ಸಂಘಸಂಸ್ಥೆಗಳು ಕಾಲಕಾಲಕ್ಕೆ ಪರಿಷ್ಕರಿಸಿದ ಪ್ರಕಟಣೆಗಳ ವಿವರಗಳನ್ನು ಶೋಧಯಂತ್ರದ ಗಾಳಕ್ಕೆ ಸಿಕ್ಕುವಂತೆ ಸೂಚಿಪದಗಳನ್ನು ನೀಡಿ ದೊರಕಿಸಿದಲ್ಲಿ ಹೆಚ್ಚಿನ ಪ್ರಚಾರ ಸಾಧ್ಯವಾಗುತ್ತದೆ. ಅನೇಕ ಸಣ್ಣ ಪುಟ್ಟ ಒಳ್ಳೆಯ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಕೂಡ ಬಾಧ್ಯತೆಯಿರುವ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ಕನ್ನಡ ಪುಸ್ತಕೋದ್ಯಮದ ವತಿಯಿಂದ ಏಕಗವಾಕ್ಷಿ ಮೂಲಕ ಕನ್ನಡ ಪುಸ್ತಕಗಳ ವಿವರಗಳನ್ನು ದೊರಕಿಸಿದಲ್ಲಿ ಪ್ರಚಾರ, ವಿತರಣೆ ಹಾಗೂ ಓದುಗರನ್ನು ತಲುಪಲು ನೆರವಾಗುತ್ತದೆ.

TRANSCRIPT

Invalid document format

top related