kanaja.inkanaja.in/ebook/images/text/535.docx · web view457ಕನ್ನಡ...

859
457 ಕಕಕಕಕ ಕಕಕಕಕಕಕಕ ಕಕಕಕಕ 335 ಕಕ. ಕಕಕ .ಕಕ. ಕಕಕಕಕಕಕ ಕಕಕಕಕ ಕಕಕಕಕಕಕಕ ಕಕಕಕಕಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕ ಕಕಕಕಕಕಕ ಕಕಕಕಕ ಕಕಕಕಕ ಕಕಕಕ ಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕ ಕಕಕಕಕಕ ಕಕಕಕಕ ಕಕಕಕಕಕ ಕಕಕಕಕಕಕಕಕಕ ಕಕಕಕಕಕ ಕಕಕಕಕಕಕಕಕಕಕ ಕಕಕಕಕಕಕಕಕಕಕಕಕಕಕಕ ಕಕಕಕಕಕಕಕಕಕಕಕ. ಕಕಕಕಕಕಕಕಕಕ ಕಕಕಕಕಕಕಕಕಕ ಕಕಕಕಕಕ, ಕಕಕಕಕಕಕಕಕಕಕಕ ಕಕಕಕಕಕಕಕಕ ಕಕಕಕಕಕಕಕಕಕಕಕಕಕಕ ಕಕಕಕಕಕಕಕಕಕಕ ಕಕಕಕಕಕ ಕಕಕಕಕಕ ಕಕಕಕಕಕಕಕ ಕ ಕಕಕಕಕಕಕಕಕಕ ಕಕಕಕಕಕ. ಕಕಕಕಕಕಕಕಕಕಕ ಕಕಕಕಕ ಕಕಕಕಕಕಕಕಕಕಕಕಕಕಕಕಕ ಕಕಕಕಕಕಕಕ, ಕಕಕಕ ಕಕಕಕಕಕಕ ಕಕಕಕಕಕಕಕ, ಕಕಕಕಕಕಕಕ, ಕಕಕಕಕಕಕ, ಕಕಕಕಕಕಕಕಕಕಕಕ, ಕಕಕಕಕ, ಕಕಕಕಕಕಕಕ, ಕಕಕಕಕ, ಕಕಕಕಕ ಕಕಕಕಕಕ, ಕಕಕಕಕಕಕಕ- ಕಕಕಕಕ ಕಕಕಕಕ ಕಕಕಕಕಕ ಕಕಕಕಕಕಕಕಕಕ ಕಕಕಕ ಕಕಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕಕಕಕ ಕ ಕಕಕಕಕಕಕಕಕಕಕ ಕಕಕಕಕಕಕಕಕಕ ಕಕಕಕಕಕಕಕಕಕಕಕ. - ಕಕಕಕ ಕಕಕಕಕಕಕ, ಕಕಕಕಕಕ ಕಕಕಕಕಕಕ, ಕಕಕಕಕಕ (ಕಕಕಕಕಕಕ)ಕಕಕಕಕಕಕ ಕಕಕಕ ಕಕಕಕಕಕಕಕಕಕಕ ಕಕಕಕಕಕ ಕಕಕ ಕಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕಕ ಕಕಕಕಕ ಕಕಕಕಕಕಕಕಕಕಕ ಕಕಕಕಕಕಕಕಕಕಕ ಕಕಕಕಕಕಕಕಕ ಕಕಕ ಕಕಕಕಕಕಕಕಕಕಕಕಕಕಕ

Upload: others

Post on 13-Jan-2020

85 views

Category:

Documents


0 download

TRANSCRIPT

457ಕನ್ನಡ ರಂಗಭೂಮಿಯ ವಿಕಾಸ335

ಡಾ. ಎಚ್.ಕೆ. ರಾಮನಾಥ್

ಅರಿಕೆ

ಕರ್ನಾಟಕದ ಸಾಂಪ್ರದಾಯಿಕ ರಂಗಭೂಮಿಯ ಪ್ರಕಾರಗಳಾದ ಯಕ್ಷಗಾನ ಮತ್ತು ಬಯಲಾಟ ಹಾಗೂ ಆಧುನಿಕ ರಂಗಭೂಮಿಯ ಪ್ರಕಾರಗಳಾದ ವೃತ್ತಿ ಮತ್ತು ವಿಲಾಸಿ ರಂಗಭೂಮಿಗಳು ಆಧುನಿಕ ಪ್ರಭಾವಗಳಿಂದ ವಿಕಾಸಗೊಂಡಿರುವುದು ಕಂಡುಬರುತ್ತದೆ. ಈ ವಿಕಾಸವನ್ನು ಸ್ಪಷ್ಟವಾಗಿ ಅರಿಯಲು, ಪ್ರದರ್ಶನಕ್ಕೆ ಸಂಬಂಧಿಸಿದ ಪ್ರಯೋಗಾಂಗಗಳನ್ನು ವಿಶಿಷ್ಟವಾಗಿ ಗಮನಿಸಿ ಅಧ್ಯಯನ ಮಾಡುವುದು ಈ ಮಹಾಪ್ರಬಂಧದ ಉದ್ದೇಶ. ಪ್ರೇಕ್ಷಾಗೃಹ ಮತ್ತು ರಂಗಮಂಚಗಳನ್ನೊಳಗೊಂಡ ನಾಟಕಶಾಲೆ, ನಾಟಕ ಮಂಡಲಿಗಳ ವ್ಯವಸ್ಥೆ, ರಂಗಸಜ್ಜು, ಪ್ರಸಾಧನ, ವಸ್ತ್ರಾಲಂಕಾರ, ಬೆಳಕು, ರಂಗಸಂಗೀತ, ನೃತ್ಯ, ಧ್ವನಿ ಪ್ರಯೋಗ, ನಿರ್ದೆಶನ-ಇವುಗಳ ಬಗೆಗೆ ಆಗಿರುವ ವಿಕಾಸವನ್ನು ಹಾಗೂ ರಂಗಭೂಮಿಯ ತಾಂತ್ರಿಕ ಬೆಳವಣಿಗೆಯನ್ನು ಈ ಪ್ರಬಂಧದಲ್ಲಿ ಪರಿಶೀಲಿಸಲು ಪ್ರಯತ್ನಿಸಿದೆ.

- ಜನಪದ ರಂಗಭೂಮಿ, ವೃತ್ತಿ ರಂಗಭೂಮಿ, ವಿಲಾಸಿ (ಹವ್ಯಾಸಿ)ರಂಗಭೂಮಿ ಹೀಗೆ ತ್ರಿಮುಖವಾಗಿ ಬೆಳೆದು ಬಂದ ಕರ್ನಾಟಕ ರಂಗಭೂಮಿಯ ತಾಂತ್ರಿಕತೆಯ ಸಮಗ್ರ ಚಿತ್ರಣವನ್ನು ಪಡೆಯಬೇಕಾದರೆ ಮುಖ್ಯವಾಗಿ ರಂಗ ಪ್ರಯೋಗಾಂಗಗಳನ್ನು ಪರಿಗಾಣಿಸುವುದು ಅಗತ್ಯ. ರಂಗಭೂಮಿಯ ತಾಂತ್ರಿಕತೆಯ ಬಗೆಗೆ ಕನ್ನಡದಲ್ಲಿ ಗ್ರಂಥಗಳು ವಿರಳ. ರಂಗಮಂಚಕೆ ಸಂಬಂಧಿಸಿದ ಎಲ್ಲ ಪ್ರಯೋಗಾಂಗಗಳ ಹಾಗೂ ಪ್ರಯೋಗ ವಿಧಾನಗಳ ಬಗ್ಗೆ ಅಧ್ಯಯನ ನಡೆಸಬೇಕೆಂಬ ಉತ್ಸಾಹವೇ ನನ್ನ ಈ ಮಹಾ ಪ್ರಬಂಧಕ್ಕೆ ಮೂಲಪ್ರೇರಣೆ. ನಾನು ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ, ಹೊಂದಿದನು. ರಂಗಭೂಮಿಯ ಅನುಭವಿ ಕಲಾವಿದರ ಅಭಿನಯ ಹಾಗೂ ನಾಟಕ ಪ್ರಯೋಗವಿಧಾನಗಳನ್ನು ವಿದ್ಯಾರ್ಥಿಯಂತೆ ಗಮನಿಸಿ ಅವರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಹಂಬಲ ನನ್ನದು. ಅಲ್ಲದೆ ಸುಮಾರು ಹತ್ತು ವರ್ಷಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಲಲಿತಕಲಾ ಕಾಲೇಜಿನಲ್ಲಿ ನಾಟಕ ಕಲೆಯನ್ನು ಒಪೋತಿನ ಉಪನ್ಯಾಸಕನಾಗಿ ಬೋಧಿಸಿರುವ ನಾನು, ಅಧ್ಯಯನಕ್ಕೆ ಆರಿಸಿಕೊಂಡ ಕನ್ನಡ ರಂಗಭೂಮಿಯ ವಿಕಾಸ (ಪ್ರಯೋಗಾಂಗಗಳನ್ನು ದೃಷ್ಟಿಯಲಿಟ್ಟುಕೊಂಡು)' ಎಂಬ ವಿಷಯವನ್ನು ಲಲಿತಕಲಾ ಕಾಲೇಜಿನ ಪ್ರಿನ್ಸಿಪಾಲರೂ ಹಾಗೂ ನಾಟಕಶಾಸ್ತ್ರದ ಪ್ರಾಧ್ಯಾಪಕರೂ ಆದ ಡಾ. ಸಿಂಧುವಳ್ಳಿ ಅನಂತಮೂರ್ತಿಯವರ ಮುಂದಿಟ್ಟಾಗ ಈ ಅಧ್ಯಯನವು ರಂಗಭೂಮಿ ಕ್ಷೇತ್ರಕ್ಕೆ ಉಪಯುಕ್ತವಾದದ್ದು ನನ್ನನ್ನು ಪೊತಾಹಿಸಿದುದಲ್ಲದೆ, ಸಂಶೋಧನೆ ಹಾಗೂ ಮಹಾಪ್ರಬಂಧದ ರಚನೆಯಲ್ಲಿ ನನಗೆ ಮಾರ್ಗದರ್ಶಕರಾಗಿರಲು ಉದಾರ ಮನಸ್ಸಿನಿಂದ ಒಪ್ಪಿದರು.

ಈ ಅಧ್ಯಯನದಲ್ಲಿ ನಾನು ಬಳಸಿಕೊಂಡಿರುವ ಮೂಲಾಧಾರಗಳು

1) ಶಾಸನಗಳು ಹಾಗೂ ದೇಶೀಯ ಮತ್ತು ಪಾಶ್ಚಾತ್ಯ ಗ್ರಂಥಗಳು.

2) ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳು ಹಾಗೂ ವಿಮರ್ಶೆಗಳು

3) ನಾಟಕಕಾರರು, ನಿರ್ದೇಶಕರು, ನಟರು, ರಂಗತಜ್ಞರು ಹಾಗೂ ರಂಗ ಕರ್ಮಿಗಳಿಂದ ಸಂಗ್ರಹಿಸಿದ ಮಾಹಿತಿಗಳು ಮತ್ತು ಅವರ ಅನುಭವಗಳು.

4) ಪ್ರಶ್ನಾವಳಿಯ ಮೂಲಕ ಕಲಾವಿದರಿಂದ ಹಾಗೂ ರಂಗತಜ್ಞರಿಂದ ಸಂಗ್ರಹಿಸಿದ ಮಾಹಿತಿಗಳು.

5) ನಾಟಕ ಪ್ರದರ್ಶನ ಕಾಲದಲ್ಲಿ ಬಳಸಿದ ಪ್ರಯೋಗಾಂಗಗಳನ್ನು ವೀಕ್ಷಿಸಿ ಸಂಗ್ರಹಿಸಿಕೊಂಡ ಟಿಪ್ಪಣಿಗಳು.

ಹಿಂದೆ, ಕರ್ನಾಟಕವು ಹರಿದುಹಂಚಿಹೋಗಿದ್ದ ಕಾಲದಲ್ಲಿ ರಂಗಭೂಮಿಯ ಬಗ್ಗೆ ಪ್ರಾಂತೀಯತೆ ಮತ್ತು ಪ್ರತ್ಯೇಕತೆ ಇದ್ದು, ನಾಟಕದ ಮಾಧ್ಯಮ ಕನ್ನಡ ಭಾಷೆಯಾಗಿದ್ದರೂ ಸಹ, ಮೈಸೂರು ಕಂಪನಿ ನಾಟಕಗಳು, ಧಾರವಾಡದ ನಾಟಕ ಮಂಡಲಿಗಳು, ಬಳ್ಳಾರಿಯ ವೃತ್ತಿ ರಂಗಭೂಮಿ, ಕರಾವಳಿಯ ಯಕ್ಷಗಾನ, ಬಯಲು ಸೀಮೆಯ ಬಯಲಾಟ-ಹೀಗೆ ಪ್ರಾದೇಶಿಕ ಭಿನ್ನತೆಗಳು ಕಾಣುತ್ತಿದ್ದವು. ಈ ಭಿನ್ನತೆಗಳು ಈಗ ಹೋಗಿ ಆಧುನಿಕ ವಿಲಾಸಿ ನಾಟಕ ಸಂಘಗಳ ಪ್ರಯತ್ನಗಳಿಂದ ರಂಗಕಲೆ ತನ್ನ ಕನ್ನಡತನವನ್ನು ಉಳಿಸಿಕೊಂಡು ಪ್ರಗತಿಪಥದಲ್ಲಿ ಸಾಗಲು ಸಾಧ್ಯವಾಗಿದೆ.

ಆಧುನಿಕ ರಂಗಭೂಮಿಯ ಒಂದು ಆಯಾಮವಾದ ವೃತ್ತಿ ರಂಗ ಒಂದು ಕಾಲದಲ್ಲಿ ವೈಭವದಿಂದ ಮೆರೆದು ಈ ಹೊತ್ತು ನಶಿಸಿಹೋಗುತ್ತಿದೆ. ಇಂದು ವಿಲಾಸಿ ರಂಗದ ಪಾತ್ರ ಪ್ರಧಾನವಾಗಿದ್ದು ಕರ್ನಾಟಕದಲ್ಲಿ ನಾಟಕ ಕಲೆ ಈ ರೂಪದಲ್ಲಿ ಉಳಿದು ಬರುವ ಸೂಚನೆಗಳು ಕಾಣುತ್ತಿವೆ. ಜನಪದ ರಂಗಭೂಮಿಯ ಬಗ್ಗೆ ಈಗಾಗಲೆ ಸಂಶೋಧನೆಗಳು ನಡೆದಿವೆ; ಆಧುನಿಕ ರಂಗಭೂಮಿಯನ್ನು ಕುರಿತು ಹಲವು ಕೃತಿಗಳೂ ಹೊರಬಂದಿವೆ. ಆದಕಾರಣ ಮುಖ್ಯವಾಗಿ ರಂಗಭೂಮಿಯ ಪ್ರಯೋಗಾಂಗ ಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಹಾಪ್ರಬಂಧವನ್ನು ಸಿದ್ದಪಡಿಸಲಾಗಿದೆ. ಈ ಸಂದರ್ಭದಲ್ಲಿ ನಾಟಕದ ಬೇರೆ ಬೇರೆ ಪ್ರಕಾರಗಳಾದ ಗೀತ ನಾಟಕ, ನೃತ್ಯ ನಾಟಕ, ಆಶುನಾಟಕ, ನೆರಳು ನಾಟಕ, ರೇಡಿಯೋ ನಾಟಕ, ಮೂಕ ನಾಟಕ ಇವುಗಳ ಬಗೆಗೆ ಇಲ್ಲಿ ವಿವೇಚಿಸಿಲ್ಲ.

ವಿಶೇಷವಾಗಿ, ಆಧುನಿಕ ರಂಗಭೂಮಿಯ ಪ್ರಯೋಗಾಂಗಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಹಿರಿಯ ನಾಟಕಕಾರರು, ರಂಗತಜ್ಞರು ಮತ್ತು ಕಲಾವಿದರಾದ ಹಾರೊನಿಯಂ ಶೇಷಗಿರಿರಾವ್, ಜಿ. ವಿ. ಅಯ್ಯರ್, ಎಸ್. ಕೆ. ಪದ್ಮಾದೇವಿ, ಏಣಗಿ ಬಾಳಪ್ಪ, ಶ್ರೀರಂಗ, ಚಂದ್ರಶೇಖರ ಕಂಬಾರ, ದಾಶರಥಿ ದೀಕ್ಷಿತ್, ಪರ್ವತವಾಣಿ, ಬಿ. ಚಂದ್ರಶೇಖರ್, ಜಿ.ವಿ. ಶಿವಾನಂದ್, ಎಚ್.ವಿ. ವೆಂಕಟಸುಬ್ಬಯ್ಯ, ಹೊಸಮನಿ ಸಹೋದರರು, ಪ್ರೇಮಾ ಕಾರಂತ, ಬಿ. ಎಸ್. ನಾರಾಯಣರಾವ್, ಸಿ.ಆರ್. ಸಿಂಹ, ನಾಣಿ, ಸಿಜಿಕೆ, ಬಿ. ವಿ. ರಾಜಾರಾವ ಇನ್ನೂ ಇತರರನ್ನು ಸ್ವತಃ ಭೇಟಿಮಾಡಿ ಅವರು ನೀಡಿದ ಮಾಹಿತಿಗಳನ್ನು ಪಡೆದಿದ್ದೇನೆ. ಅಷ್ಟೇ ಅಲ್ಲದೆ ಪ್ರಯೋಗಾಂಗಗಳಿಗೆ ಸಂಬಂಧಿಸಿದಂತೆ ಹಲವು ಕಲಾವಿದರಿಗೆ, ಪಶ್ನಾವಳಿಯನ್ನು ಕಳುಹಿಸಿ ಉತ್ತರಗಳನ್ನು ಪಡೆಯಲಾಗಿದೆ. ಹೀಗೆ, ನಾಟಕ ಸಂಘಗಳ ಆಡಳಿತ, ರಂಗಮಂದಿರ ನಿರ್ಮಾಣ, ರಂಗಪರಿಕರಗಳು, ರಂಗಸಜ್ಜಿಕೆ, ರಂಗತಂತ್ರ ಬೆಳಕು, ಪ್ರಸಾಧನ, ಉಡುಗೆತೊಡುಗೆ, ನಿರ್ದೆಶನ-ಇವುಗಳ ಬಗೆಗೆ ಅವರು ನೀಡಿರುವ ವಿವರಗಳ ಸಹಾಯದಿಂದ ಕರ್ನಾಟಕ ರಂಗಭೂಮಿಯ ವಿಕಾಸವನ್ನು ಅದರ ಪ್ರಾರಂಭ ದೆಸೆಯಿಂದ ಪ್ರಸ್ತುತ ಅಧ್ಯಯನವನ್ನು ಪ್ರಾರಂಭಿಸಿದ 1982ರವರೆಗೆ ಗ್ರಹಿಸಲು ಸಾಧ್ಯವಾಯಿತು. ಈ ಕಾರಣದಿಂದಲೇ ಈ ಕೃತಿ 'ನನ್ನದು' ಎಂಬುದು ಕೇವಲ ಔಪಚಾರಿಕವಾಗುತ್ತದೆ. ಈ ಎಲ್ಲ ರಂಗಕಲಾವಿದರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ.

ನಾಟಕಶಾಸ್ತ್ರದ ಪ್ರಾಧ್ಯಾಪಕರೂ ನನ್ನ ವಿದ್ಯಾಗುರುಗಳೂ ಆದ ಆರ್. ಗುರುರಾಜಾರಾವ್ ಅವರು ಈ ಶಾಸ್ತ್ರದ ಬಗ್ಗೆ ನನ್ನಲ್ಲಿ ಆಸಕ್ತಿ ಮೂಡಿಸಿದವರು. ನಾನು ಸಿದ್ದಪಡಿಸಿದ ಪ್ರಬಂಧದ ಸಂಬಂಧದಲ್ಲಿ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ; ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ; ಮಾಹಿತಿಯ ಅನ್ವೇಷಣೆಗೆ ದಿಕ್ಕು ತೋರಿದ್ದಾರೆ. ಶ್ರೀಯುತರಿಗೆ ನಾನು ಋಣಿಯಾಗಿದ್ದೇನೆ.

ಅನೇಕ ರಂಗಕಲಾವಿದರನ್ನು ಪರಿಚಯಿಸಿ, ನಾಟಕಶಾಸ್ತ್ರದ ಬಗ್ಗೆ ಕೆಲವು ಕೃತಿಗಳನ್ನು ಸೂಚಿಸಿ, ಹವ್ಯಾಸಿ ರಂಗದ ಬಗ್ಗೆ ಅತ್ಯುತ್ತಮ ವಿಚಾರಗಳನ್ನು ನೀಡಿದ ಅನುಭವಿ ರಂಗತಜ್ಞರಾದ ಎ. ಟಿ. ಪದ್ಮನಾಭ (ಪದ್ದಣ್ಣ),

ವಿಶೇಷವಾಗಿ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗದ ಬಗೆಗೆ ಬಹಳಷ್ಟು ಮಾಹಿತಿಗಳನ್ನು ಒದಗಿಸಿ ಉಪಕರಿಸಿದ ಹಿರಿಯ ನಾಟಕಕಾರರಾದ ವಿ. ಜಿ. ಕೃಷ್ಣಮೂರ್ತಿ,

ಪ್ರಾರಂಭದಿಂದಲೂ ನನ್ನ ಸಂಶೋಧನೆಯ ಬಗ್ಗೆ ಹಾಗೂ ಕೃತಿ ರಚನೆ ಬಗ್ಗೆ ಆಸ್ಥೆವಹಿಸಿ ಪ್ರೋತ್ಸಾಹಿಸುತ್ತ ಸಮಯೋಚಿತ ಸೂಚನೆಗಳನ್ನು ನೀಡಿದ ನನ್ನ ಹಿತೈಷಿ ಆರ್. ಎಲ್. ಅನಂತರಾಮಯ್ಯ,

ರಂಗಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ನೀಡಿ, ನನಗೆ ಪದೇ ಪದೇ ಉತ್ಸಾಹ ತುಂಬುತ್ತ ನನ್ನ ಈ ಪ್ರಬಂಧ ಪೂರ್ಣವಾಗಲು ನೆರವು ನೀಡಿದ ನನ್ನ ಪ್ರಿಯ ಮಿತ್ರ ಜಿ. ಜಿ. ಮಂಜುನಾಥನ್,

ಹೀಗೆ ಅನೇಕ ರಂಗ ಕಲಾವಿದರು ನಾನಾ ಸಂದರ್ಭಗಳಲ್ಲಿ ಈ ಕೃತಿ ಪೂರ್ಣವಾಗಲು ಒಂದಲ್ಲ ಒಂದು ರೀತಿಯಲ್ಲಿ ನೆರವು ನೀಡಿದ್ದಾರೆ. ಎಲ್ಲರಿಗೂ ನನ್ನ ನಮನಗಳು.

ಅತ್ಯಂತ ಉಚಿತವೂ, ಅಮೂಲ್ಯವೂ ಆದ ಮುನ್ನುಡಿಯನ್ನು ಬರೆದು ಕೊಟ್ಟ ಹಿರಿಯ ವಿಮರ್ಶಕರೂ, ನನ್ನ ವಿದ್ಯಾಗುರುಗಳೂ ಆದ ಡಾ. ಹಾ. ಮಾ. ನಾಯಕರು ನನ್ನಲ್ಲಿ ಅಪಾರ ವಾತ್ಸಲ್ಯ ತೋರಿಸಿದ್ದಾರೆ. ನನ್ನಲ್ಲಿ ಹಾಗೂ ನನ್ನ ಈ ಅಧ್ಯಯನದಲ್ಲಿ ಆಸಕ್ತಿ, ಕಾಳಜಿಗಳನ್ನು ಉದ್ದಕ್ಕೂ ವ್ಯಕ್ತಪಡಿಸಿದ್ದಾರೆ. ಕೃತಿಯ ಪ್ರಕಟಣೆಯ ವಿಷಯದಲ್ಲಿ ಅಮೂಲ್ಯ ಸಲಹೆ ಸೂಚನೆ ಕೊಟ್ಟಿದ್ದಾರೆ. ಪೂಜ್ಯ ಡಾ. ನಾಯಕ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಪ್ರಬಂಧಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಎರಡು ವರ್ಷಗಳ ಅಧ್ಯಯನ ರಜೆ'ಯನ್ನು ಮಂಜೂರು ಮಾಡಿ, ಆರ್ಥಿಕ ನೆರವು ನೀಡಿದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಲಿಯ ಅಧಿಕಾರ ವರ್ಗದವರಿಗೆ ನಾನು ಕೃತಜ್ಞ.

ಡಾ. ಸಿಂಧುವಳ್ಳಿಯವರ ಒತ್ತಾಸೆ ಮಾರ್ಗದರ್ಶನ ಇಲ್ಲದೆ ಹೋಗಿದ್ದರೆ ಈ ರೂಪದಲ್ಲಿ ಕೃತಿ ಹೊರಬರುತ್ತಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಶ್ರೀಯುತರಿಗೆ ನಾನು ನಿಜಕ್ಕೂ ಆಭಾರಿಯಾಗಿದ್ದೇನೆ. ಈ ಗ್ರಂಥಕ್ಕೆ ಸಂಬಂಧಿಸಿದಂತೆ ಕೆಲವು ರೇಖಾ ಚಿತ್ರಗಳನ್ನು ವಿಶ್ವಾಸದಿಂದ ಬರೆದುಕೊಟ್ಟ ಕೆ. ಜೆ. ನಾರಾಯಣ ಶೆಟ್ಟಿ, ಕೆ. ಎಲ್. ವೆಂಕಟೇಶ್ ಮತ್ತು ಶ್ರೀಕಂಠಮೂರ್ತಿ ಅವರಿಗೂ, ಸಹನೆಯಿಂದ ಸಕಾಲಕ್ಕೆ ಬೆರಳಚ್ಚು ಮಾಡಿ ಕೊಟ್ಟ ದಾಸೇಗೌಡ ಮತ್ತು ಶ್ರೀಮತಿ ಶಾರದಾಂಬ ಅವರಿಗೂ, ಕರಡು ಅಚ್ಚು ತಿದ್ದಲು ಸಹಕರಿಸಿದ ಎನ್. ಎಸ್. ಶಾರದಾ ಪ್ರಸಾದ್ ಅವರಿಗೂ, ಅನುಬಂಧಗಳನ್ನು ಸಿದ್ಧಪಡಿಸಲು ಸಹಕರಿಸಿದ ರಂಗಕಲಾವಿದ ಎನ್. ನಾಗ ಚಂದ್ರ ಅವರಿಗೂ, ಎಷ್ಟೇ ತೊಂದರೆ ಕೊಟ್ಟರೂ ತಾಳ್ಮೆವಹಿಸಿ ಅಲ್ಪ ಕಾಲದಲ್ಲಿ ಅಚ್ಚು ಕಟ್ಟಾಗಿ ಮುದ್ರಿಸಿದ ಸದ್ಗುರು ಪ್ರಿಂಟರ್ಸ್ನ ಆರ್. ಎಸ್. ವಾಸುದೇವಮೂರ್ತಿ (ವಾಸು) ಮತ್ತು ಅವರ ಸಿಬ್ಬಂದಿ ವರ್ಗಕ್ಕೂ ಕೃತಜ್ಞತೆಗಳು ಸಲ್ಲುತ್ತವೆ.

ನನ್ನ ಸಂಶೋಧನಾ ಅವಧಿಯಲ್ಲಿ ಆನಂತರ ಈ ಕೃತಿ ಹೊರಬರುವಲ್ಲಿ ನನ್ನ ಮಡದಿ ಸೌಮ್ಯ ಹಾಗು ಮಕ್ಕಳ ಸಹಕಾರ ನೆನೆಯುವುದೂ ನನ್ನ ಕರ್ತವ್ಯ.

ವಾಸ್ತವವಾಗಿ ನಾನು ಆಭಾರಮನ್ನಿಸಬೇಕಾದ ಮಿತ್ರರ, ಹಿರಿಯರ, ಹಿತೈಷಿಗಳ ಪಟ್ಟಿ ಬಹಳ ದೊಡ್ಡದು, ಬಹಳ ವಿಸ್ತಾರವಾದದ್ದು. ಹೆಸರು ಹೇಳದಿದ್ದರೇನು, ನನ್ನ ಹೃದಯ ತುಂಬಿದ ವಂದನೆಗಳನ್ನು ಈ ಎಲ್ಲ ಹಿರಿಯರಿಗೆ, ಮಿತ್ರರಿಗೆ ಅರ್ಪಿಸುತ್ತೇನೆ. ಕೃತಿಯ ಒಡಲಲ್ಲಿ ಹಲವು ತಜ್ಞರ, ನಟರ, ನಟಿಯರ, ತಂತ್ರಜ್ಞರ ಹೆಸರು ಉಲ್ಲೇಖವಾಗದೆ ಬಿಟ್ಟು ಹೋಗಿರಬಹುದು. ಅದು ಕೇವಲ ಆಕಸ್ಮಿಕವಾಗಿ ಹಾಗಾಗಿರುತ್ತದೆಯೇ ಹೊರತು ಉದ್ದೇಶಪೂರ್ವಕ ಅಲ್ಲ ಎಂದು ವಿನಂತಿಸಿಕೊಳ್ಳುತ್ತೇನೆ.

ಶ್ರೀಮಂತವಾದ ಕನ್ನಡ ರಂಗಭೂಮಿಯ ವರ್ಣರಂಜಿತ ವೈಭವವನ್ನು ಕಾಣಲು ಈ ಕೃತಿಯು ಒಂದು ಸಣ್ಣ ದೀಪದ ಕುಡಿಯಾಗಿ ಬೆಳಕು ಬೀರಿದರೆ ಸಾಕು, ನನ್ನ ಪ್ರಯತ್ನ ಸಫಲವಾಯಿತೆಂದು ಭಾವಿಸುತ್ತೇನೆ.

ಎಚ್. ಕೆ. ರಾನುನಾಥ್

ಸೆಪ್ಟೆಂಬರ್ 15, 1990

474, 'ಅಭಿನಯ'

ಕುವೆಂಪುನಗರ, ಮೈಸೂರು-570 023

________________

ಪ್ರವೇಶ

ಅರಿಸ್ಟಾಟಲನ ಪ್ರಸಿದ್ದವಾದ ಹೇಳಿಕೆಯಂತೆ 'ನಾಟಕ' ಎನ್ನುವುದು ಒಂದು ಕ್ರಿಯೆಯ ಅನುಕರಣ.” ಸಂಸ್ಕೃತದ 'ನಾಟಕ'ವಾದರೂ 'ನೃತ್' ಧಾತುವಿನಿಂದ ರೂಪ ತಾಳಿದ್ದು, ಅದರ ಮೂಲ ಅರ್ಥ 'ಕುಣಿತ'. ಕುಣಿತವೂ ಒಂದು ಬಗೆಯ ಅನುಕರಣವೇ. ನಾಟಕದ ಚರಿತ್ರೆ ಬಹಳ ದೀರ್ಘವಾದದ್ದು. ಅದು ಕಂಡ ಕಾಲ ದೇಶಗಳಾದರೂ ಹಲವು. ಆದ್ದರಿಂದ ನಾಟಕ ತನ್ನ ಮೂಲಸ್ವರೂಪದ ವಿವರಗಳಲ್ಲಿ ಬೇಕಾದಷ್ಟು ಬದಲಾವಣೆಗಳನ್ನು ಕಂಡಿದೆ. ಒಂದು ಸಂಕೀರ್ಣಕಲೆಯಾದ ನಾಟಕದಲ್ಲಿ ಈಗ ಸಂಕೀರ್ಣತೆ ಹರಳುಗಟ್ಟಿಕೊಂಡಿದೆ. ನಟನ ನಾಟಕ, ನಾಟಕಕಾರನ ನಾಟಕ, ನಿರ್ದೇಶಕನ ನಾಟಕವಾಗಿ ಮಾರ್ಪಡುವುದರ ಮೂಲಕ ಇದು ಸ್ಪಷ್ಟವಾಗಿದೆ.

ಜಾನ್ ಡಿಟ್ರಚ್ ಎಂಬ ಈ ಕಾಲದ ಒಬ್ಬ ರಂಗತಜ್ಞ ಲೇಖಕನ ಪ್ರಕಾರನಾಟಕ ಒಂದು ಕಥೆ; ಅದು ಸಂಭಾಷಣೆಯ ರೂಪದಲ್ಲಿರುತ್ತದೆ; ಮಾನವನ ಒಳ ತೋಟಿಗೆ ಸಂಬಂಧಿಸಿರುತ್ತದೆ; ಮಾತು ಮತ್ತು ಅಭಿನಯಗಳಲ್ಲಿ ಹೊರ ಹೊಮ್ಮುತ್ತದೆ; ರಂಗದ ಮೇಲೆ ನಡೆಯುತ್ತದೆ; ಪ್ರೇಕ್ಷಕರನ್ನು ಉದ್ದೇಶಿಸಿರುತ್ತದೆ. ಇದೆಲ್ಲವೂ ಸಮರ್ಥವಾಗಿ, ಸಮರ್ಪಕವಾಗಿ ನಡೆಯಬೇಕಾದರೆ ಒಂದು ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಈ ಮಾರ್ಗದರ್ಶನ ನೀಡುವವನೇ ನಿರ್ದೇಶಕನಾಗಿರುತ್ತಾನೆ. ಅವನು ತನ್ನ ಕೆಲಸದಲ್ಲಿ ಯಶಸ್ಸು ಪಡೆದಾಗಲೇ, ಒಂದು ನಾಟಕ ರಂಗದ ಮೇಲೆ ಯಶಸ್ಸು ಪಡೆಯಿತು ಎಂದು ಹೇಳಬಹುದು. ಹೀಗಾಗಿ ಈಗ ನಾಟಕ ಎನ್ನುವುದು ಸಂಪೂರ್ಣವಾಗಿ ನಿರ್ದೇಶಕನ ಕೃತಿಯೇ ಆಗಿದೆ!

ನಾಟಕದ ವಿವಿಧ ವಿಭಾಗಗಳ ನಡುವೆ, ಯಾವ ವಿಧವಾದ ಪ್ರಭಾವವೂ ಇಲ್ಲದೆ ಕೊಂಡಿಯಾಗಿ ಉಳಿದಿದ್ದ ವ್ಯಕ್ತಿ ನಿರ್ದೇಶಕನೆನ್ನಿಸಿಕೊಂಡು ಪ್ರಬಲನಾದದ್ದು ಬಹುಶಃ ಮಾಸ್ಕೋದ ಆರ್ಟ್ ಥಿಯೇಟರ್ನಲ್ಲಿ ಎಂದು ತೋರುತ್ತದೆ. ಸುಮಾರು ಒಂದು ಒಂದೂವರೆ ಶತಮಾನದ ಹಿಂದೆ ಈ ನಿರ್ದೇಶಕನೆಂಬುವವನೇ ಇರಲಿಲ್ಲ! ನಿರ್ಮಾಪಕರೆನ್ನಿಸಿಕೊಂಡವರಿದ್ದರು, ನಿರ್ವಾಹಕರೆನ್ನಿಸಿಕೊಂಡವರಿದ್ದರು, ನಟ ನಟಿಯರಿದ್ದರು. ಇವರೆಲ್ಲರೂ ತಮತಮಗೆ ತೋರಿದ ರೀತಿಯಲ್ಲಿ ಒಂದು ನಾಟಕದ 'ಸೃಷ್ಟಿ'ಯಲ್ಲಿ ಭಾಗವಹಿಸುತ್ತಿದ್ದರು. ಅವರಲ್ಲಿ ನಟನ ಪಾತ್ರವೇ ಪ್ರಧಾನವಾದುದಾಗಿರುತ್ತಿತ್ತು. ಇಂದಿಗೂ ಅನೇಕ ವಾಣಿಜ್ಯ ಪ್ರಧಾನ ನಾಟಕಗಳಲ್ಲಿ ಅವನೇ ಮುಖ್ಯನಾಗಿರುವುದನ್ನು ನೋಡಬಹುದಾಗಿದೆ. ಉಳಿದುದೆಲ್ಲ ಅವನ ಸುತ್ತಲೂ ಸುತ್ತುತ್ತಿರುತ್ತದೆ. ಆದ್ದರಿಂದಲೇ ಹಿಂದಿನ ನಾಟಕಗಳು ಒಂದು ಕಟ್ಟಿಗೆ ಒಳಗಾಗಿ ಬದ್ದ ರೂಪವನ್ನು ತಾಳಿರುತ್ತಿದ್ದವು.

ಇಂಥ ಸಂದರ್ಭದಲ್ಲಿ ಕಾನ್ಸ್ಟಾಂಟಿನ್ ಸ್ಟಾನಿಸ್ಲಾವ್ಸ್ಕಿ ಮತ್ತು ಮಾಸೆ ಆರ್ಟ್ ಥಿಯೇಟರ್ನ ನಟರು, ಈಗ ನನಗೆ ಪರಿಚಿತನಾಗಿರುವ 'ನಿರ್ದೇಶಕ'ನನ್ನು ಸೃಷ್ಟಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದರು. ಒಬ್ಬ ನಟ' ತತ್ವವನ್ನು ಬದಿಗೆ ಸರಿಸಿ 'ಇಡೀ ಗುಂಪು' ಭಾಗವಹಿಸುವಂತೆ ಮಾಡಿದರು. ಯಾವ ಪಾತ್ರವೂ ದೊಡ್ಡದಲ್ಲ; ಯಾವ ಪಾತ್ರವೂ ಸಣ್ಣದಲ್ಲ. ಒಂದು ನಾಟಕ ಯಶಸ್ವಿಯಾಗಬೇಕಾದರೆ ಪ್ರತಿಯೊಂದು ಪಾತ್ರವೂ ಸಮಾನ ಯಶಸ್ಸು ಗಳಿಸಬೇಕು ಎಂಬದು ಇಲ್ಲಿನ ತತ್ವ. ಆದ್ದರಿಂದಲೇ ಸ್ಟಾನಿಸ್ಲಾವ್ಸ್ಕಿಯಂಥ ಮಹಾನಟನೂ ಅತ್ಯಂತ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡು, ತನ್ನ ಸಹನಟರಿಗೆ ದೊಡ್ಡ ದೊಡ್ಡ ಪಾತ್ರಗಳನ್ನು ಬಿಟ್ಟು ಕೊಡುವಂತಾಯಿತು.

ನಾಟಕದ ಯಶಸ್ಸು ಎನ್ನುವುದು ಸಮಗ್ರ ನಾಟಕಕ್ಕೆ ಸಂಬಂಧಿಸಿದ್ದು, ಪ್ರತಿಯೊಂದು ಅಂಶವನ್ನೂ, ಅದು ಎಷ್ಟೇ ಚಿಕ್ಕದಾದುದಾಗಿರಲಿ, ಎಚ್ಚರಿಕೆಯಿಂದ ಗಮನಿಸುವಂತಾಯಿತು. ಈ ಯೋಜನೆಯ ಯಶಸ್ಸಿಗಾಗಿ ‘ನಿರ್ದೇಶಕ' ಕಾಣಿಸಿ ಕೊಂಡ ಇದು ಬಹು ಬೇಗನೆ ಅಮೆರಿಕೆಯನ್ನು ಮುಟ್ಟಿತು. 1920ರ ಹೊತ್ತಿಗೆ ಎಲ್ಲ ನಾಟಕ ಗುಂಪುಗಳನ್ನೂ ಆಕರ್ಷಿಸಿತು. ನಿರ್ದೇಶಕನಿಂದಾಗುವ ಲಾಭಗಳೇನು ಎಂಬುದನ್ನು ಎಲ್ಲರೂ ಸುಲಭವಾಗಿ ಗ್ರಹಿಸಿದರು. ನಾಟಕಕಾರರು, ರಂಗಕರ್ಮಿಗಳು ಮತ್ತು ಪ್ರೇಕ್ಷಕರು-ಈ ತ್ರಿಕೋಣದಲ್ಲಿ ನಿರ್ದೇಶಕರು ಕೇಂದ್ರಬಿಂದುವೆನ್ನಿಸಿದರು. ನಾಟಕವನ್ನು ರಂಗದ ಮೇಲೆ 'ಕಟ್ಟುವ ಕೆಲಸ ಅವರದಾಯಿತು. ಹೀಗಾಗಿ, ನಿರ್ದೇಶಕ ತ್ರಿವಿಕ್ರಮನಾಗಿ ಬೆಳೆದ ! ಅವನೇ ನಾಟಕದ ವ್ಯಾಖ್ಯಾನಕಾರನೂ ಆದ. ಈಗಂತೂ ನಿರ್ದೇಶಕನಿಲ್ಲದ ನಾಟಕವೇ ಸಾಧ್ಯವಾಗುವುದಿಲ್ಲ.

ಹೀಗೆ ಹೇಳಿದ ಮಾತ್ರಕ್ಕೆ, ನಿರ್ದೇಶಕನು ಉದಯವಾಗುವುದಕ್ಕೆ ಮೊದಲು, ನಾಟಕಗಳಲ್ಲಿ ಆಂತರಿಕ ಸಂಘಟನೆಯ ಕೆಲಸ ಆಗುತ್ತಿರಲಿಲ್ಲ ಎಂದು ಅರ್ಥವಲ್ಲ. ಅದಕ್ಕೆ ಕಾರಣನಾದವನೂ ಪ್ರಧಾನ ಪಾತ್ರಧಾರಿಯಾದ ಎಂದಷ್ಟೇ ನನ್ನ ಅಭಿಪ್ರಾಯ. ನಾಟಕ ಸಂಕೀರ್ಣ ಕಲೆ ಎಂಬ ಮಾತಿನಲ್ಲಿಯೇ ಅದು ವಿವಿಧ ಅಂಶಗಳನ್ನು ಒಳಗೊಂಡಿದೆ. ಎಂಬ ಸೂಚನೆಯಿದೆ. ನಾಟಕದ ಒಟ್ಟು ಯಶಸ್ಸಿಗೆ ಈ ವಿವಿಧ ಅಂಶಗಳ ಸಮರೂಪದ ಯಶಸ್ಸು ಕಾರಣವಾಗುತ್ತದೆ. ಇದನ್ನು ನಮ್ಮ ಪ್ರಾಚೀನರು ಬಲ್ಲವರಾಗಿದ್ದರು. ಈ ಅಂಶಗಳೇ ನಾಟಕದ ಅಂಗಗಳೆಂದು ಪರಿಗಣಿಸಲ್ಪಟ್ಟು, ಪಾರಿಭಾಷಿಕ ಸ್ವರೂಪವನ್ನೂ ಗಳಿಸಿದವು. ಇಂಥ ಅನೇಕ ಅಂಶಗಳಿಂದ ನಾಟಕ ಪ್ರದರ್ಶನಗೊಳ್ಳುತ್ತದೆ. ನಾಟಕವನ್ನು ಪ್ರಯೋಗಿಸುವ ಸಂಸ್ಥೆಯಿಂದ ತೊಡಗಿ ನೇಪಥ್ಯ ಗೃಹದವರೆಗೆ, ನಾಟಕ ಬರೆಯುವವನಿಂದ ತೊಡಗಿ ದೀಪ ಹಿಡಿಯುವವನವರೆಗೆ ಪ್ರತಿಯೊಂದೂ ಈ ಪ್ರದರ್ಶನದ ಅವಿಭಾಜ್ಯ ಅಂಗವಾಗಿರುತ್ತದೆ. ಇದರಲ್ಲಿ ಯಾವ ಅಂಗದಲ್ಲಿ ಕೊರತೆ ತೋರಿದರೂ ನಾಟಕ ಕೋರೆಯಾಗುತ್ತದೆ, ಮುಕಾಗುತ್ತದೆ. ಆದ್ದರಿಂದ ಪ್ರಯೋಗಾಂಗಗಳ ಹೊಂದಾಣಿಕೆ, ಸಾಮರಸ್ಯ ಮುಖ್ಯನಿಸುತ್ತದೆ. ಪ್ರಯೋಗಾಂಗ ಮತ್ತು ಪರಿಕರಗಳ ಪಟ್ಟ, ವ್ಯಾಪ್ತಿ, ಸ್ವರೂಪಗಳಲ್ಲಿ ವಿದ್ವಾಂಸರು ಬೇರೆ ಬೇರೆ ಅಭಿಪ್ರಾಯಗಳನ್ನು ಸೂಚಿಸಿರಬಹುದು. ಆದರೆ ಅವುಗಳ ಮಹತ್ವವನ್ನು ಯಾರೂ ಪ್ರಶ್ನಿಸಿಲ್ಲ. ಇದನ್ನು ನಮ್ಮ ಹಿಂದಿನವರೂ ಅವರ ದೃಷ್ಟಿಗನುಸಾರ ತಿಳಿದಿದ್ದರು. ಪ್ರಯೋಗಾಂಗಗಳಿಗೆ ತಾಂತ್ರಿಕ ಸ್ವರೂಪವಿದೆ. ಅದನ್ನು ಅಗತ್ಯಕ್ಕನುಗುಣವಾಗಿ ಶಾಸ್ತ್ರ ಸಾಹಿತ್ಯದಲ್ಲಿ ವರ್ಣಿಸಲಾಗಿದೆ.

ಈ ತಾಂತ್ರಿಕ ಸ್ವರೂಪದ ಪ್ರಯೋಗಾಂಗಗಳನ್ನು ಗಮನದಲ್ಲಿಟ್ಟುಕೊಂಡು, ಕನ್ನಡ ರಂಗಭೂಮಿಯ ವಿಕಾಸವನ್ನು ವಿವರಿಸುವುದು ಪ್ರಸ್ತುತ ಪ್ರಬಂಧದ ಮೂಲ ಉದ್ದೇಶ. ಇದರಲ್ಲಿ ನಾಲ್ಕು ಭಾಗಗಳಿವೆ. ಈ ಭಾಗಗಳಲ್ಲಿ ಇಪ್ಪತ್ತೈದು ಅಧ್ಯಾಯಗಳು ಹಂಚಿಹೋಗಿವೆ. ಮೊದಲ ಭಾಗದಲ್ಲಿ ಎರಡು ಅಧ್ಯಾಯಗಳಿವೆ. ಇವು ಕ್ರಮವಾಗಿ ಅಧ್ಯಯನದ ಉದ್ದೇಶವನ್ನೂ, ಕನ್ನಡ ರಂಗಭೂಮಿಯ ಪ್ರಾಚೀನತೆಯನ್ನೂ ನಿರೂಪಿಸುತ್ತವೆ. ಈ ಭಾಗವನ್ನು 'ಕನ್ನಡ ರಂಗಭೂಮಿಯ ಪರಂಪರೆ' ಎಂದು ಕರೆಯಲಾಗಿದೆ. ಎರಡನೆಯ ಭಾಗ 'ಕರ್ನಾಟಕ ಜನಪದ ರಂಗಭೂಮಿ'ಯನ್ನು ಕುರಿತದ್ದು. ಇದು ಒಂದೇ ಅಧ್ಯಾಯವನ್ನು ಒಳಗೊಂಡ ಸಮೀಕ್ಷೆಯಾಗಿದೆ.

'ಕರ್ನಾಟಕ ವೃತ್ತಿ ರಂಗಭೂಮಿ' ಎಂಬ ಮೂರನೆಯ ಭಾಗದಲ್ಲಿ ಹತ್ತು ಅಧ್ಯಾಯಗಳಿದ್ದು ಇವುಗಳಲ್ಲಿ ಅನೇಕ ವಿಷಯಗಳು ಚರ್ಚಿತವಾಗಿವೆ. ವೃತ್ತಿರಂಗ ಭೂಮಿ ಅಸ್ತಿತ್ವಕ್ಕೆ ಬರುವ ಹಿಂದಿನ (ಇದನ್ನು 'ವೃತ್ತಿಪೂರ್ವ ರಂಗಭೂಮಿ' ಎಂದಿರುವುದು ಅಷ್ಟಾಗಿ ಸರಿಯಾಗಲಾರದು) ಸ್ಥಿತಿಯ ಸಮೀಕ್ಷೆ, ವೃತ್ತಿರಂಗಭೂಮಿಯಲ್ಲಿ ನಾಟಕ ಸಂಘಗಳು ವಹಿಸಿದ ಪಾತ್ರ, ನಾಟಕಶಾಲೆಯ ಪರಿಚಯ, ಅಭಿನಯ, ಸಂಗೀತ, ಬೆಳಕು, ಪ್ರಸಾಧನ ಮತ್ತು ವಸ್ತಾಲಂಕಾರ, ರಂಗವ್ಯವಸ್ಥೆ, ತಂತ್ರಗಳು ಮತ್ತು ಪ್ರೇಕ್ಷಕ-ಈ ಸಂಗತಿಗಳು ವಿವರವಾಗಿ ಪರಿಶೀಲಿಸಲ್ಪಟ್ಟಿವೆ. ನಮ್ಮ ಇಂದಿನ ನಾಟಕ ಪ್ರದರ್ಶನಗಳಲ್ಲಿನ ಹಲವು ಅಂಶಗಳಿಗೆ ವೃತ್ತಿ ರಂಗಭೂಮಿಯಲ್ಲಿಯೇ ಸ್ಫೂರ್ತಿ ಮತ್ತು ಪ್ರೇರಣೆಗಳಿವೆಯೆಂಬುದು ಈ ಭಾಗದಿಂದ ಸ್ಪಷ್ಟವಾಗುತ್ತದೆ. ನಾಟಕವನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸಿದ್ದರಿಂದ ವೃತ್ತಿ ರಂಗಭೂಮಿಯ ಜನರು ಪಂಥಾಹ್ವಾನವನ್ನೂ, ಪೈಪೋಟಿಯನ್ನೂ ಎದುರಿಸುವುದು ಸ್ವಾಭಾವಿಕ ಅಗತ್ಯವಾಗಿತ್ತು. ಅದಕ್ಕೆ ಅವರು ಸಿದ್ದರಾಗಿಯೂ ಇರುತ್ತಿದ್ದರು.

ನಾಲ್ಕನೆಯ ಕೊನೆಯ ಭಾಗ ನಮ್ಮ ಇಂದಿನ 'ವಿಲಾಸಿ ರಂಗಭೂಮಿ'ಯನ್ನು ಕುರಿತದ್ದು. ಇದರಲ್ಲಿ ಹನ್ನೊಂದು ಅಧ್ಯಾಯಗಳಿದ್ದು, ಅವುಗಳಲ್ಲಿ ಮೊದಲನೆಯದು ನಮ್ಮ ವಿಲಾಸಿ ರಂಗಭೂಮಿಯ ಉಗಮವನ್ನೂ, ಲಕ್ಷಣವನ್ನೂ ಚರ್ಚಿಸುತ್ತದೆ. ವಿಲಾಸಿ ನಾಟಕ ಸಂಘಗಳನ್ನು ಒಂದು ಅಧ್ಯಾಯದಲ್ಲಿ ಪರಿಚಯಿಸಲಾಗಿದೆ. ಇನ್ನೊಂದು ಅಧ್ಯಾಯದಲ್ಲಿ ಅವುಗಳ ವ್ಯವಸ್ಥೆ ಹಾಗೂ ಸಮಸ್ಯೆಗಳನ್ನು ವಿವೇಚಿಸಲಾಗಿದೆ. ಈ ರಂಗಭೂಮಿಯ ನಾಟಕಶಾಲೆಗಳ ಸ್ವರೂಪವನ್ನು ಮತ್ತೊಂದು ಅಧ್ಯಾಯ ವಿವರಿಸುತ್ತದೆ. ನಾಟಕ ಪ್ರಯೋಗಗಳ ಚರ್ಚೆಗೆ ಮರು ಅಧ್ಯಾಯಗಳು ಮೀಸಲಾಗಿದ್ದು ಅವುಗಳಲ್ಲಿ ಕ್ರಮವಾಗಿ ಕೃತಿ, ನಿರ್ದೇಶಕನ ಸ್ಥಾನ, ನಿರ್ದೇಶಕ ಮತ್ತು ನಟನ ನಡುವಿನ ಸಂಬಂಧ-ಈ ಅಂಶಗಳನ್ನು ಪರಿಶೀಲಿಸಲಾಗಿದೆ. ರಂಗ ವ್ಯವಸ್ಥೆ, ಸಂಗೀತ ಮತ್ತು ನೃತ್ಯ, ಬೆಳಕು ಮತ್ತು ಧ್ವನಿತಂತ್ರ, ವಸ್ತ್ರಾಲಂಕಾರ ಮತ್ತು ಪ್ರಸಾಧನ-ಈ ಅಂಗಗಳು ಮುಂದಿನ ಅಧ್ಯಾಯಗಳಲ್ಲಿ ಪರಾಮರ್ಶೆಗೆ ಒಳಗಾಗಿವೆ. ಕೊನೆಯ ಅಧ್ಯಾಯ ಉಪಸಂಹಾರ, ಉಪಯುಕ್ತವಾದ ಮೂರು ಅನುಬಂಧಗಳಿವೆ.

ಇದು ಪ್ರಸ್ತುತ ಪ್ರಬಂಧದ ಹೂರಣ. ಇದರಿಂದ ಪ್ರಬಂಧದ ಗತಿಯ ಸ್ವರೂಪ ಓದುಗರಿಗೆ ತಿಳಿಯುತ್ತದೆ. “ಕನ್ನಡ ರಂಗಭೂಮಿಯು ಪ್ರಾರಂಭದಿಂದ ಹಾಕಿರುವ ಹೆಜ್ಜೆ ಗುರುತುಗಳನ್ನು ಅನುಸರಿಸಿ, ರಂಗಭೂಮಿಯ ಪ್ರಯೋಗಾಂಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಶೈಶವದಿಂದ ಇಂದಿನ ಪ್ರೌಢಾವಸ್ಥೆಯವರೆಗಿನ ಅದರ ವಿಕಾಸವನ್ನು ಅಧ್ಯಯನ ಮಾಡುವುದು ಈ ಮಹಾಪ್ರಬಂಧದ ಉದ್ದೇಶ? ಎಂದು ಲೇಖಕರು ಆರಂಭದಲ್ಲಿಯೇ ಹೇಳಿಕೊಂಡಿರುವುದು ಹೇಗೆ ಸಫಲವಾಗಿದೆ ಎನ್ನುವುದು ನನಗೆ ಇದರಿಂದ ಗೊತ್ತಾಗುತ್ತದೆ. ಕನ್ನಡ ರಂಗಭೂಮಿಯ ಮೂರು ಮಹಾ ಹೆಜ್ಜೆಗಳೆಂದರೆ-ಜನಪದ ರಂಗಭೂಮಿ, ವೃತ್ತಿ ರಂಗಭೂಮಿ, ಮತ್ತು ವಿಲಾಸಿ ರಂಗಭೂಮಿ, ಇವುಗಳಲ್ಲಿ ಜನಪದ ರಂಗಭೂಮಿಯ ವಿವೇಚನೆಯಲ್ಲಿ ಹೊಸತಾದ ಅಂಶಗಳೇನೂ ಕಂಡು ಬರುವುದಿಲ್ಲ. ಆದರೆ ವೃತ್ತಿ ಮತ್ತು ವಿಲಾಸೀ ರಂಗಭೂಮಿಗಳನ್ನು ಕುರಿತು ವಿಚಾರ ಮಾಡಿರುವುದು ನಮ್ಮ ವಿರಳ ರಂಗಸಾಹಿತ್ಯಕ್ಕೆ ವಿಶೇಷವಾದ ಕೊಡುಗೆಯಾಗಿದೆ. ಎರಡನ್ನೂ ನಾಟಕಾಂಗಗಳ ದೃಷ್ಟಿಯಿಂದ ವಿವರವಾಗಿ ಚರ್ಚಿಸಲಾಗಿದ್ದು, ಈ ಮೊದಲು ಈ ಬಗೆಯ ಕೆಲಸ, ಈ ಪ್ರಮಾಣದಲ್ಲಿ ಆಗಿರಲಿಲ್ಲ.

ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಡಾ. ಎಚ್. ಕೆ. ರಾಮನಾಥ್ ಅವರು ತಮ್ಮ ಪಿಎಚ್. ಡಿ. ಪದವಿಗಾಗಿ, ಅನೇಕ ವರ್ಷ ಶ್ರಮಿಸಿ ಸಿದ್ಧಪಡಿಸಿ, ನಾಟಕಶಾಸ್ತ್ರದಲ್ಲಿ ಆ ಪದವಿ ಪಡೆದಿದ್ದಾರೆ. ಪ್ರಸ್ತುತ ಪ್ರಬಂಧದ ಆಧಾರದ ಮೇಲೆ, ಕನ್ನಡ ರಂಗಭೂಮಿಯ ಸಾಧನೆಯನ್ನು ಪ್ರಯೋಗಾಂಗಗಳ ಪರೀಕ್ಷೆಗೆ ಒಳಪಡಿಸಿ ಅಧ್ಯಯನ ಮಾಡುವ ಕೆಲಸವನ್ನು ಅವರು ತುಂಬ ಸಮರ್ಥವಾಗಿ ನಿರ್ವಹಿಸಿದ್ದಾರೆ. ನಮ್ಮಲ್ಲಿ ಇಂಥ ಕೆಲಸವನ್ನು ಮಾಡಿರುವ ಮೊದಲಿಗರು ಅವರು. ಇಲ್ಲಿರುವ ಉಲ್ಲೇಖಗಳನ್ನು ನೋಡಿದರೆ ಸಾಕು, ಅವರು ಎಷ್ಟು ಆಳವಾಗಿ, ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ ಎಂಬುದನ್ನು ತಿಳಿಯಲು. ಅವರು ಸ್ವತಃ ನಟರು, ನಾಟಕಕಾರರು. ಅವರ ರಂಗಕರ್ಮವನ್ನು ಕೆಲವು ಸಂದರ್ಭಗಳಲ್ಲಿ ನಾನೇ ಕುತೂಹಲದಿಂದ ಗಮನಿಸಿದ್ದೇನೆ. ಮೈಸೂರಿನ ರಂಗಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಡಾ. ರಾಮನಾಥ್ ಒಬ್ಬರು. ಆದ್ದರಿಂದ ಅವರ ಅಭಿಪ್ರಾಯವಾಗಲಿ, ಅಧ್ಯಯನವಾಗಲಿ ಕೇವಲ ಸಿದ್ಧಾಂತಪರವಾದವಲ್ಲ ; ಅನುಭವಜನ್ಯವಾದವು. ಇದರ ಫಲವಾಗಿ ಈ ಪ್ರಬಂಧಕ್ಕೆ ವಿಶೇಷ ಮಹತ್ವವಿದೆ. ನಮ್ಮಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿರುವ ರಂಗ ಸಾಹಿತ್ಯ ಕೃತಿಗಳ ಮಾಲೆಗೆ ಇದು ಬೆಲೆಬಾಳುವ ಸೇರ್ಪಡೆಯೆಂದು ನಾನು ಭಾವಿಸಿದೇನೆ. ನಮ್ಮಲ್ಲಿ ನಾಟಕಕಾರರು ಹಲವರಿದ್ದಾರೆ. ರಂಗತಜ್ಞರು ಕಡಮೆ. ಅದೇ ಕಾರಣದಿಂದ ಈ ಸಾಹಿತ್ಯ ವಿಭಾಗ ಬೆಳೆಯಲಿಲ್ಲ. ಈ ದಿಕ್ಕಿನಲ್ಲಿ ಸೃಜನಶೀಲರಾಗಿ ಯೋಚಿಸಿದವರು ಶ್ರೀರಂಗರೊಬ್ಬರೆ ! ಅವರ ವಿಚಾರಧಾರೆಯಲ್ಲಿ ಹಲವು ಹೊಳವುಗಳನ್ನು ಧಾರಾಳವಾಗಿ ಕಾಣಬಹುದು. ಇಂಥ ಪರಿಸ್ಥಿತಿಯಲ್ಲಿ ಡಾ. ರಾಮನಾಥ್ ಅವರ ಪ್ರಸ್ತುತ ಪ್ರಬಂಧ, ಈ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿದೆ.

ಇದರ ಒಂದು ದೋಷವನ್ನು ಕುರಿತು ಕೆಲವು ಮಾತುಗಳನ್ನು ಹೇಳಿದರೆ ಡಾ. ರಾಮನಾಥ್ ತಪ್ಪು ತಿಳಿಯುವುದಿಲ್ಲ ಎಂದು ನನಗೆ ಭರವಸೆಯಿದೆ. ಒಂದು ವಿಶ್ವವಿದ್ಯಾನಿಲಯದ ಪದವಿಗಾಗಿ ಪ್ರಬಂಧವನ್ನು ಸಿದ್ಧಪಡಿಸುವುದು ಬೇರೆ ; ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವುದು ಬೇರೆ. ಮೊದಲನೆಯದು ಪರೀಕ್ಷೆಗೆ ಉತ್ತರ; ಎರಡನೆಯದು ಒಂದು ಕೃತಿಯ ಪ್ರಕಾಶನ, ಡಾ. ರಾಮನಾಥ್ ತಮ್ಮ ಈ ಕೃತಿಯಲ್ಲಿ ಪಿಎಚ್. ಡಿ. ಪದವಿ ಪ್ರಬಂಧದ ಸ್ವರೂಪವನ್ನು ಅಷ್ಟಾಗಿ ಕಡಿಮೆ ಮಾಡಿಲ್ಲ ! ಆದ್ದರಿಂದ ಪುನರಾವರ್ತನೆಗಳು ಉಳಿದಿವೆ. (ಉದಾಹರಣೆಗೆ, ಯಕ್ಷಗಾನ-ಬಯಲಾಟಗಳಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಪುಟ 7, 41, 64ರಲ್ಲಿ ನೋಡಬಹುದು. ಒಂದೇ ಬಗೆಯ ಮಾತುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ! ಇದನ್ನು ಯಾವ ತೊಂದರೆಯೂ ಇಲ್ಲದೆ ಪರಿಹರಿಸಬಹುದಾಗಿತ್ತು. ಬೇರೆಡೆಯಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿಗಳನ್ನು ಮತ್ತೆ ಇಲ್ಲಿ ಕೊಡಬೇಕಾಗಿರಲಿಲ್ಲ. ಇದರಿಂದ ಪ್ರಬಂಧದ ಪುಟ ಸಂಖ್ಯೆ ಬೆಳೆದಿದೆ. ಅಡಿಟಿಪ್ಪಣಿಗಳ ಕೆಚ್ಚಲಿನ ಭಾರ ಹೆಚ್ಚಿದೆ ! ಕೆಲವು ಸಲ ಸಂಶೋಧಕರಿಗೆ ತಾವು ಸಂಗ್ರಹಿಸಿದ ಮಾಹಿತಿಯನ್ನೆಲ್ಲ ಕೊಡಬೇಕೆಂಬ ಅತ್ಯುತ್ಸಾಹವಿರುತ್ತದೆ. ನಿಜ, ಅವರು ಸಂಗ್ರಹಿಸಿದ ಮಾಹಿತಿ ವ್ಯರ್ಥವಾಗಬಾರದು. ಆದರೆ ತಮ್ಮ ಸಂಶೋಧನೆಯ ಹಲವು ಉಪಉತ್ಪಾದನೆಗಳ ಸಾಧ್ಯತೆಯಿರುತ್ತದೆಂಬುದನ್ನು ಅವರು ಮರೆಯಬಾರದು.

ಈ ಗಾತ್ರದೋಷದೊಡನೆ ಇತರ ಕೆಲವು ಸಣ್ಣ ಪುಟ್ಟ ಕೊರೆಗಳು ಅಲ್ಲಿ ಇಲ್ಲಿ ಕಣ್ಣಿಗೆ ಬೀಳುತ್ತವೆ. ಇವು ಬರವಣಿಗೆಗೆ ಸಂಬಂಧಿಸಿದವಾಗಿರಬಹುದು; ಮುದ್ರಣಕ್ಕೆ ಸಂಬಂಧಿಸಿದವಾಗಿರಬಹುದು. ಡಾ. ರಾಮನಾಥ್ ರಂಗ ಪಾರಿಭಾಷಿಕ ಪದಗಳ ಪಟ್ಟಿಗೆ ಅನೇಕ ಹೊಸ ಪದಗಳನ್ನು ಸೇರಿಸಿದ್ದಾರೆಂಬುದು ಗಮನಾರ್ಹವಾಗಿದೆ. 'ಕಾಲಿಕ ನಾಟಕ', 'ಅಖಾಡಾ ರಂಗಭೂಮಿ', 'ಚಾಚು ರಂಗಭೂಮಿ', 'ಸಾರೋಕ್ತಿ', 'ರಂಗಸಜ್ಜು', 'ನೆನಪುಗಾರನ ಪ್ರತಿ'-ಮೊದಲಾದ ಪದಗಳನ್ನು ಬಳಸುವ ಅವರು ‘ರಿಹರ್ಸಲ್' ಎಂಬುದನ್ನು ಹಾಗೆಯೇ ಉಳಿಸಿಕೊಂಡಿರುವುದು ಆಶ್ಚರ್ಯವೆನಿಸುತ್ತದೆ. ಇಂಗ್ಲಿಷ್ ಪದಗಳನ್ನು ಬಳಸಬಾರದು ಎನ್ನುವುದು ಖಂಡಿತ ನನ್ನ ಧೋರಣೆಯಲ್ಲ. ಅದು ತೀರ ಅನಿವಾರ್ಯವೆನಿಸಿದಾಗ ಬೇರೆ ದಾರಿಯಿಲ್ಲ. ರಿಹರ್ಸಲ್' ಎನ್ನುವುದು ಅಂಥ ಪದವೆಂದು ನನಗನ್ನಿಸುವುದಿಲ್ಲ. 'ಅಭ್ಯಾಸ' ಎನ್ನುವ ಮಾತು ನಮ್ಮಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. 'ಪೂರ್ವಾಭ್ಯಾಸ' ಅಥವಾ 'ಪೂರ್ವಾಭಿನಯ' ಎಂಬ ಮಾತುಗಳನ್ನೇಕೆ ಬಳಸಬಾರದು? ಬೇಕಾದರೆ 'ರಂಗತಾಲೀಮು' ಎಂಬ ಮಾತೂ ಇದೆಯಲ್ಲ!

ಈ ಬಗೆಯ ಅರೆಕೊರೆಗಳಿಂದ ಪುಸ್ತಕದ ಮಹತ್ವಕ್ಕೆ ಧಕ್ಕೆ ಬಂದಿಲ್ಲ. ಇದರ ಒಟ್ಟು ಪ್ರಾಧಾನ್ಯದ ಎದುರಿಗೆ ಇಂಥವು ಮರೆತು ಹೋಗುತ್ತವೆ. ಡಾ. ರಾಮನಾಥ್ ಅವರು ಅನೇಕ ಆಕರಗಳನ್ನು ತಡಕಿ, ನಾಟಕಾಸಕ್ತ ಓದುಗರಿಗೆ ತಮ್ಮ ಗ್ರಂಥ ಒಂದು ಅಪರೂಪದ ಮಾಹಿತಿಗಳ ಗಣಿಯಾಗಿರುವಂತೆ ಮಾಡಿದ್ದಾರೆ. ಬೇರೆಡೆ ಇಷ್ಟೊಂದು ಸಂಗತಿಗಳು ಇಷ್ಟು ಸುಲಭವಾಗಿ ದೊರೆಯುವುದಿಲ್ಲ ಎಂಬುದು ಗಮನಾರ್ಹವಾಗಿದೆ. ನಾಟಕರಂಗವನ್ನು ಬಿಟ್ಟು ಚಲನಚಿತ್ರ ರಂಗದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಸಿದ್ಧರಾದ ಆರ್. ನಾಗೇಂದ್ರರಾಯರು ತಮ್ಮ ಗೆಳೆಯರ ಒತ್ತಡದಿಂದ ತಪ್ಪಿಸಿಕೊಳ್ಳಲು ಏನು ಮಾಡಿದರೆಂಬುದು (ಪು. 226-7) ತಮಾಷೆಯಾದ ಪ್ರಸಂಗ, ಇಂಥ ಪ್ರಸಂಗಗಳು ಎಷ್ಟೊಂದು ಇದೆ ಇಲ್ಲಿ!

ಪ್ರಯೋಗಾಂಗಗಳ ಬಗೆಗೆ ಡಾ. ರಾಮನಾಥ್ ಅವರ ತಿಳಿವಳಿಕೆ ವ್ಯಾಪಕವಾದದ್ದು. ಅವರ ಓದು ಹೇಗೆ ಸೂಕ್ತವಾದುದೆಂಬುದಕ್ಕೆ ಇಲ್ಲಿ ಹಲವು ಉದಾಹರಣೆಗಳು ದೊರೆಯುತ್ತವೆ. ಅವರ ತೌಲನಿಕ ದೃಷ್ಟಿಯ ಬಗೆಗೆ ವಿಶೇಷ ಉಲ್ಲೇಖ ಮಾಡಬೇಕು. ವಸ್ತ್ರಾಲಂಕಾರದ ಅವ್ಯವಸ್ಥೆಯ ಬಗೆಗೆ ಹೇಳುವಾಗ (ಪು. 220), ಅಂಕದ ಪರದೆ ವಿಚಾರವಾಗಿ ಚರ್ಚಿಸುವಾಗ (ಪು. 229-30), ಪರದೆಗಳನ್ನ ಕುರಿತು ವಿವರಿಸುವಾಗ (ಪು. 236), ಅವರಿಗೆ ಥಟ್ಟನೆ ಪಾಶ್ಚಾತ್ಯ ರಂಗಭೂಮಿಯಲ್ಲಿ ಏನಾಗುತ್ತದೆಂಬುದರ ನೆನಪು ಬರುತ್ತದೆ. ನಂಬಿಕೆಗೆ ಅರ್ಹವಾದ ಉದ್ಧರಣೆಗಳನ್ನು ಕೊಡುತ್ತಾರೆ. ಇದು ವಿಸ್ತಾರವಾದ ಓದಿನಿಂದ ಮಾತ್ರ ಸಾಧ್ಯವಾಗುತ್ತದೆ. ಇದಕ್ಕೆ ಇಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ. ಇವುಗಳಿಂದ ಲೇಖಕರ ಬರವಣಿಗೆಗೆ ಬಲ ಬಂದಿದೆ. ತೌಲನಿಕ ಅಧ್ಯಯನದ ಸಾಧ್ಯತೆಗಳ ಹೊಳವು ತೋರಿಸಿಕೊಳ್ಳುತ್ತದೆ. ವೃತ್ತಿ ರಂಗಭೂಮಿಯ ಸಂಗೀತದ ಬಗೆಗೆ ಎಂಟನೆಯ ಅಧ್ಯಾಯದಲ್ಲಿ ನಡೆಸಿರುವ ಚರ್ಚೆ ಬಹಳ ಕುತೂಹಲಕಾರಿಯಾಗಿದೆ. 'ಯಕ್ಷಗಾನ ಮತ್ತು ವೃತ್ತಿರಂಗಭೂಮಿಗಳನ್ನ ಹೋಲಿಸಿ ನೋಡಿದಾಗ, ಯಕ್ಷಗಾನ ಎಲ್ಲ ಅಡೆತಡೆಗಳನ್ನೂ ದಾಟಿ ಉಳಿದಿರುವುದೂ, ವೃತ್ತಿ ರಂಗ ಭೂಮಿಯಲ್ಲಿ ಹಿನ್ನಡೆ ಕಂಡುಬರುವುದೂ ಆಶ್ಚರ್ಯಕರವಾದ ಸಂಗತಿ. ಈ ಕುರಿತ ವಿವೇಚನೆ ವಿಶೇಷ ಮೆಚ್ಚುಗೆಗೆ ಅರ್ಹವಾಗಿದೆ. ಹಾಗೆಯೇ ವಿಲಾಸಿ ರಂಗಭೂಮಿಯಲ್ಲಿ ಕಲಾಪೋಷಕ ಹಾಗೂ ವಿಲಾಸಿ ಎಂದು ಎರಡು ಗುಂಪು ಮಾಡಿರುವದು ಕೂಡ ಸಮರ್ಪಕವಾಗಿಯೇ ಇದೆ.

ಈ ಪ್ರಬಂಧದ ಅತ್ಯತ್ತಮ ಹಾಗೂ ಸೋಪಜ್ಞವಾದ ಭಾಗವೆಂದರೆ, ನನ್ನ ದೃಷ್ಟಿಯಲ್ಲಿ, ನಾಲ್ಕನೆಯದು, ವಿಲಾಸಿ ರಂಗಭೂಮಿಯನ್ನು ಕುರಿತದ್ದು. ನಮ್ಮ ಸಮಕಾಲೀನ ನಾಟಕಗಳು ಹಲವನ್ನು ಇಲ್ಲಿ ಡಾ. ರಾಮನಾಥ್ ಚರ್ಚಿಸಿದ್ದಾರೆ. ಪ್ರಯೋಗಾಂಗಗಳ ದೃಷ್ಟಿಯಲ್ಲಿ ಅವುಗಳ ಸಫಲತೆ ವಿಫಲತೆಗಳನ್ನು ತೂಗಿ ನೋಡಿದ್ದಾರೆ. ವೃತ್ತಿ ರಂಗಭೂಮಿಗೆ ಸಂಬಂಧಿಸಿದ ಈ ಚರ್ಚೆಯಲ್ಲಿ ಅಗತ್ಯವಾದ ವಿವರಗಳಿಗೆ ಅವರು ವಿಮರ್ಶಾತ್ಮಕ ಸಂಕಲನಕಾರರಾಗಿದ್ದಾರೆ. ಆದರೆ ವಿಲಾಸಿ ರಂಗಭೂಮಿಗೆ ಸಂಬಂಧಿಸಿದ ಚರ್ಚೆಯಲ್ಲಿ ಅವರು ಸೋಪಜ್ಞ ವಿಮರ್ಶಕರಾಗಿದ್ದಾರೆ! ಇದರಲ್ಲಿನ ಪ್ರಯೋಗಾಂಗಗಳ ವಿವೇಚನೆ ಓದುಗರೆದುರಿಗೆ ಹೊಸ ಹೊಸ ಆಯಾಮಗಳನ್ನು ತೆರೆಯುತ್ತದೆ. ಇದು ನಿಜವಾಗಿಯೂ ಆನ್ವಯಿಕ ಪರಿಶೀಲನೆಯಾಗಿದೆ. ಇಲ್ಲಿ ನಮ್ಮ ಪ್ರದರ್ಶನ ಪ್ರಯೋಗಗಳು ಹೇಗೆ ಹೊರಗಿನ ಪ್ರಭಾವಗಳಿಗೆ ಒಳಗಾಗಿವೆ ಮತ್ತು ಎಷ್ಟರ ಮಟ್ಟಿಗೆ ತಮ್ಮತನವನ್ನು ಉಳಿಸಿಕೊಂಡಿವೆ ಎಂಬುದನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ಯಾವ ಕಾರಣದಿಂದಲೂ ಡಾ. ರಾಮನಾಥ್ ನಮ್ಮ ನಾಟಕಗಳನ್ನು, ಪ್ರಯೋಗಗಳನ್ನು ಕಣ್ಣು ಮುಚ್ಚಿಕೊಂಡು ಪ್ರಶಂಸಿಸುವುದಿಲ್ಲ. ಅಬ್ಬರ ಉದ್ವೇಗಗಳಿಲ್ಲದೆ ವಸ್ತುನಿಷ್ಠವಾಗಿ ಪ್ರತಿಪಾದಿಸುತ್ತಾರೆ.

‘ಕನ್ನಡ ರಂಗಭೂಮಿಯ ವಿಕಾಸ'ವನ್ನು ಕುರಿತ ಈ ಪ್ರಬಂಧದಲ್ಲಿ ನೂರಾರು ನಾಟಕಗಳ, ನಾಟಕಕಾರರ, ಸಂಘ ಸಂಸ್ಥೆಗಳ, ಕಂಪನಿಗಳ, ನಟನಟಿಯರ, ದಿಗ್ಧರ್ಶಕರ, ರಂಗತಜ್ಞರ ಉಲ್ಲೇಖ ಕಾಣಿಸಿಕೊಳ್ಳುತ್ತದೆ. ಅದರ ಫಲವಾಗಿ ಸಂಗತಿಗಳು ಕೆಲವೊಮ್ಮೆ ಪಟ್ಟಿಗೊಂಡಂತೆ ತೋರುವುದೂ ಉಂಟು. ಅಷ್ಟರಮಟ್ಟಿಗೆ ಅದು ನಿಜವೆನಿಸಿದರೂ ಅದರಿಂದ ಉಂಟಾಗುವ ಪರಿಣಾಮ ಅಲಕ್ಷಿಸುವಂಥದಲ್ಲ. ನೂರಾರು ವರ್ಷಗಳ ನನ್ನ ರಂಗಸಾಧನೆ ಹೇಗೆ ಅಸಾಮಾನ್ಯವಾದುದೆಂಬುದನ್ನು ತೋರಿಸಲು ಈ ಮೊತ್ತವೂ ನೆರವಾಗುತ್ತದೆ. ರಂಗಕ್ಷೇತ್ರದ ಅಧ್ಯಯನದಲ್ಲಿ ಆಸಕ್ತರಾದವರಿಗೆ ಈ ಪ್ರಬಂಧದಲ್ಲಿ ಅನೇಕ ಸೂಚನೆಗಳು ದೊರೆಯುತ್ತವೆ. ಈ ಅಧ್ಯಯನವನ್ನು ವಿವಿಧ ಮುಖಗಳಲ್ಲಿ ಬೆಳಸಿಕೊಂಡು ಹೋಗುವವರಿಗೆ ಇಲ್ಲಿ ಖಂಡಿತವಾಗಿಯೂ ದಾರಿಗಳು ಕಾಣಿಸಿಕೊಳ್ಳುತ್ತವೆ. ಈ ಬಗೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಇಂದಿನ ಪೀಳಿಗೆಯವರು ವಹಿಸಿಕೊಳ್ಳಬೇಕು.

“ಪರಂಪರೆಯಿಂದ ನಡೆದು ಬಂದ ನೈಸರ್ಗಿಕ ಕಲೆಯನ್ನು ಬುದ್ದಿ ಪೂರ್ವಕವಾಗಿ ಇಂದಿನ ಪರಿಸ್ಥಿತಿಗೆ ಹೊಂದಿಸಬಲ್ಲ ನಾಟಕಕಾರನಾಗಲಿ ನಟನಾಗಲಿ ಹುಟ್ಟಿ ಬಂದರೆ ಕನ್ನಡ ರಂಗಭೂಮಿಯ ಭವಿತವ್ಯ ಉಜ್ವಲವಾಗುವುದು ಖಂಡಿತ” ಎಂದು ಶ್ರೀರಂಗರು ಒಂದು ಕಡೆ ಆಶಿಸಿದ್ದಾರೆ. ಈ ಒಂದೂವರೆ ಶತಮಾನದ ಕನ್ನಡ ರಂಗ ಭೂಮಿಯ ಆಗು ಹೋಗುಗಳನ್ನು ಅರಿತವರಿಗೆ ಮಾತ್ರ ಈ ಮಾತಿನ ಸತ್ಯ ಹೊಳೆಯುತ್ತದೆ. ಇಂದು ನಮ್ಮ ರಂಗಭೂಮಿ ಕವಲುದಾರಿಯಲ್ಲಿದೆ. ಒಂದು ಕಡೆ ಅನುಕರಣೆಯ ಪರಂಪರೆಯ ವೃತ್ತಿ ರಂಗಭೂಮಿ; ಇನ್ನೊಂದು ಕಡೆ ಹೊಸತನವನ್ನು ಹಿಂಬಾಲಿಸಿದ ಹಲಪ್ರಭಾವಗಳ ವಿಲಾಸಿ ರಂಗಭೂಮಿ, ಬೇರೆ ಬೇರೆ ಕಾರಣಗಳಿಂದ ಎರಡಕ್ಕೂ ದುರವಸ್ಥೆಯೊದಗಿದೆ. ಇವೆರಡೂ ತಮ್ಮ ತಮ್ಮ ವಲಯಗಳಲ್ಲಿ ಮೈ ಕೊಡವಿಕೊಂಡು ಏಳುವ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಸಂಪ್ರದಾಯದ ಫಲವಾಗಿ ನಾಟಕಕ್ಕೂ ಪ್ರೇಕ್ಷಕರಿಗೂ ನಡುವೆಯಿದ್ದ ಸಂಬಂಧ ಇಂದು ಕಾಣೆಯಾಗಿರುವುದು ದುರ್ದೆವದ ಮಾತು. ಹೊಸತನವನ್ನು ಪರಂಪರೆಯ ಭಾಗವನ್ನಾಗಿಸುವ ಮಹಾ ಪ್ರತಿಭೆಯ ಕೊರತೆ ನಮ್ಮನ್ನಿಗ ಕಾಡುತ್ತಿದೆ. ರಂಗಾಸಕ್ತರೆಲ್ಲರೂ ಈ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತದೆ- ಡಾ. ರಾಮನಾಥ್ ಅವರ ಈ ಪ್ರಬಂಧ, ಇದು ಆಗಿ ಹೋದದ್ದನ್ನಷ್ಟೇ ಹೇಳುವುದಿಲ್ಲ; ಆಗುತ್ತಿರುವುದರ ಚಿತ್ರವನ್ನೂ ಕೊಡುತ್ತದೆ. ಇವೆರಡನ್ನೂ ವಿಶ್ಲೇಷಿಸಿ ಆಗುವುದರ ಬಗ್ಗೆ ಯೋಜಿಸಬೇಕಾಗಿದೆ. ಅದಕ್ಕೆ ಈ ಕೃತಿ ಕಾರಣವಾಗುತ್ತದೆ.

ಸುಮಾರು ಮೂರೂವರೆ ದಶಕಗಳ ಹಿಂದೆ, ನಾನು ಕಾಲೇಜಿನಲ್ಲಿ ಬೋಧನೆಯನ್ನು ಆರಂಭಿಸಿದಾಗ ಬಂದ ಮೊದಮೊದಲ ವಿದ್ಯಾರ್ಥಿಗಳಲ್ಲಿ ಎಚ್.ಕೆ. ರಾಮನಾಥ್ (ಈಗ ಡಾಕ್ಟರ್) ಒಬ್ಬರು. ಅವರು ತಮ್ಮ ಅಧ್ಯಯನದಲ್ಲಿ ತೋರುತಿದ್ದ ಶ್ರದ್ಧಾಸಕ್ತಿಗಳನ್ನೂ, ತಮ್ಮ ಅಧ್ಯಾಪಕರ ವಿಷಯದಲ್ಲಿ ತೋರುತ್ತಿದ್ದ ಪ್ರೀತ್ಯಾದರಗಳನ್ನು ನಾನು ಮರೆತಿಲ್ಲ. ಅವನ್ನು ಅವರು ಇಂದೂ ಉಳಿಸಿಕೊಂಡಿದ್ದಾರೆ. ಅದರಿಂದಾಗಿಯೆ, ಪರಿಸ್ಥಿತಿ ಅವರು ಅಪೇಕ್ಷಿಸಿದಂತಿರದಿದ್ದರೂ, ಅಧ್ಯಯನ ನಡೆಸಿ ಪಿಎಚ್. ಡಿ. ಪದವಿ ಪಡೆದಿದಾರೆ. ಈಗ ಪ್ರಕಟಗೊಳ್ಳುತ್ತಿರುವ ತಮ್ಮ ಪ್ರಬಂಧಕ್ಕೆ 'ಮುನ್ನುಡಿ'ಯ ನಾಲ್ಕು ಮಾತು ಬರೆದು ಕೊಡಬೇಕೆಂದು ಕೇಳಿ ನನ್ನನ್ನು ಗೌರವಿಸಿದ್ದಾರೆ. ನನ್ನ ವಿದ್ಯಾರ್ಥಿಗಳು ನನ್ನಲ್ಲಿ ತೋರುತ್ತ ಬಂದ ಪ್ರೀತಿಗೌರವಗಳು ನನ್ನಲ್ಲಿ, ವೃತ್ತಿಯಿಂದ ನಿವೃತ್ತಿ ಪಡೆಯುವ ಈ ದಿನಗಳಲ್ಲಿ, ಒಂದು ಬಗೆಯ ಧನ್ಯತೆಯನ್ನು ತಂದುಕೊಟ್ಟಿವೆ. ಇದನ್ನು ನಾನು ಪ್ರಸ್ತುತ ಸಂದರ್ಭದಲ್ಲಿ ಹೇಳಲೇಬೇಕು.

ಅಧ್ಯಯನ, ಅನುಭವ, ವಿವೇಚನೆ, ಸಮತೂಕದ ವಿಮರ್ಶಾತ್ಮಕ ಪರಿಶೀಲನೆ ಇವುಗಳಿಂದ ತುಂಬಿದ 'ಕನ್ನಡ ರಂಗಭೂಮಿಯ ವಿಕಾಸ' ಎಂಬ ಪ್ರಸ್ತುತ ಕೃತಿಯನ್ನು ಓದಿ ಸಂತೋಷಿಸಿದೇನೆ; ಲಾಭ ಪಡೆದಿದ್ದೇನೆ. ಇದನ್ನು ಓದುವ ಯಾರಿಗಾದರೂ ಸಂತೋಷ ಮತ್ತು ಲಾಭ ದೊರೆಯುವುದರಲ್ಲಿ ನನಗೆ ಭರವಸೆಯಿದೆ. ಒಂದು ಪುಸ್ತಕದ ಓದಿನಿಂದ ಇದಕ್ಕೂ ಹೆಚ್ಚಿನದೇನನ್ನು ನಿರೀಕ್ಷಿಸಬಹುದು? ಡಾ. ರಾಮನಾಥ್. ಅವರನ್ನು ಅವರ ಈ ಒಳ್ಳೆಯ ಕೆಲಸಕ್ಕಾಗಿ ಹೃದಯಪೂರೈಕ ಅಭಿನಂದಿಸುತ್ತೇನೆ. ಅವರಿಗೆ ಎಲ್ಲ ಶುಭಗಳೂ ಒದಗಲಿ ಎಂದು ಹಾರೈಸುತ್ತೇನೆ.

-ಹಾ. ಮಾ. ನಾಯಕ

ಸೆಪ್ಟೆಂಬರ್ 12, 1990

ಗೋಧೂಳಿ', ಜಯಲಕ್ಷ್ಮಿಪುರಂ

ಮೈಸೂರು-570 012

ಪರಿವಿಡಿ

ಭಾಗ ಒಂದು : ಕನ್ನಡ ರಂಗಭೂಮಿಯ ಪರಂಪರೆ

ಅಧ್ಯಾಯ ಒಂದು ಪೀಠಿಕೆ

ಅಧ್ಯಾಯ ಎರಡು ಕನ್ನಡ ರಂಗಭೂಮಿಯ ಹಳಮೆ

ಭಾಗ ಎರಡು: ಕರ್ನಾಟಕ ಜನಪದ ರಂಗಭೂಮಿ

ಅಧ್ಯಾಯ ಮೂರು ಜನಪದ ರಂಗಭೂಮಿಯ ವ್ಯವಸ್ಥೆ, ಪ್ರಯೋಗ ವಿಧಾನ ಹಾಗೂ ವಿಕಾಸ

ಭಾಗ ಮೂರು: ಕರ್ನಾಟಕ ವೃತ್ತಿರಂಗಭೂಮಿ

ಅಧ್ಯಾಯ ನಾಲ್ಕು ವೃತ್ತಿಪೂರ್ವರಂಗಭೂಮಿಯ ಸ್ವರೂಪ

ಅಧ್ಯಾಯ ಐದು ವೃತ್ತಿ ರಂಗಭೂಮಿ : ನಾಟಕ ಸಂಘಗಳು

ಅಧ್ಯಾಯ ಆರು ನಾಟಕ ಶಾಲೆ

ಅಧ್ಯಾಯ ಏಳು ಅಭಿನಯ

ಅಧ್ಯಾಯ ಎಂಟುರಂಗಸಂಗೀತ

ಅಧ್ಯಾಯ ಒಂಬತ್ತು ಬೆಳಕು

ಅಧ್ಯಾಯ ಹತ್ತು ಪ್ರಸಾಧನ ಮತ್ತು ವಸ್ತ್ರಾಲಂಕಾರ

ಅಧ್ಯಾಯ ಹನ್ನೊಂದು ರಂಗಸಜ್ಜು

ಅಧ್ಯಾಯ ಹನ್ನೆರಡು ರಂಗತಂತ್ರಗಳು

ಅಧ್ಯಾಯ ಹದಿಮೂರು ವೃತ್ತಿರಂಗಭೂಮಿಯ ಪ್ರೇಕ್ಷಕರು

ಭಾಗ ನಾಲ್ಕು : ಕರ್ನಾಟಕ ವಿಲಾಸಿ ರಂಗಭೂಮಿ

ಅಧ್ಯಾಯ ಹದಿನಾಲ್ಕು ಪೀಠಿಕಾಂಶಗಳು

ಅಧ್ಯಾಯ ಹದಿನೈದು ವಿಲಾಸಿ ನಾಟಕ ಸಂಘಗಳು

ಅಧ್ಯಾಯ ಹದಿನಾರು ಕಲಾ ಪೋಷಕ ವಿಲಾಸಿ ನಾಟಕ ಸಂಘಗಳು ವ್ಯವಸ್ಥೆ ಹಾಗೂ ಸಮಸ್ಯೆಗಳು ಅಧ್ಯಾಯ ಹದಿನೇಳು ನಾಟಕ ಶಾಲೆ.

ಅಧ್ಯಾಯ ಹದಿನೆಂಟು ನಾಟಕ ಪ್ರಯೋಗ-ನಾಟಕಕೃತಿ

ಅಧ್ಯಾಯ ಹತ್ತೊಂಬತ್ತು ನಿರ್ದೇಶಕ

ಅಧ್ಯಾಯ ಇಪ್ಪತ್ತು ನಿರ್ದೇಶಕ ಮತ್ತು ನಟ

ಅಧ್ಯಾಯ ಇಪ್ಪತ್ತೊಂದು ರಂಗಸಜ್ಜು

ಅಧ್ಯಾಯ ಇಪ್ಪತ್ತೆರಡು ರಂಗ ಸಂಗೀತ ಮತ್ತು ನೃತ್ಯ

ಅಧ್ಯಾಯ ಇಪ್ಪತ್ತಮೂರು ಬೆಳಕು ಮತ್ತು ಧ್ವನಿತಂತ್ರ

ಅಧ್ಯಾಯ ಇಪ್ಪತ್ತನಾಲ್ಕು ಪ್ರಸಾಧನ ಮತ್ತು ವಸ್ತ್ರಾಲಂಕಾರ

ಅಧ್ಯಾಯ ಇಪ್ಪತ್ತೈದು ಉಪಸಂಹಾರ

ಅನುಬಂಧಗಳು

ಭಾಗ ಒಂದು

ಕನ್ನಡ ರಂಗಭೂಮಿಯ ಪರಂಪರೆ

ಅಧ್ಯಾಯ ಒಂದು

ಪೀಠಿಕೆ

ಕನ್ನಡ ರಂಗಭೂಮಿಯು ಪ್ರಾರಂಭದಿಂದ ಹಾಕಿರುವ ಹೆಜ್ಜೆ ಗುರುತುಗಳನ್ನು ಅನುಸರಿಸಿ, ರಂಗಭೂಮಿಯ ಪ್ರಯೋಗಾಂಗಗಳನ್ನು, ದೃಷ್ಟಿಯಲ್ಲಿಟ್ಟುಕೊಂಡು, ಶೈಶವದಿಂದ ಇಂದಿನ ಪ್ರೌಢಾವಸ್ಥೆಯವರೆಗಿನ ಅದರ ವಿಕಾಸವನ್ನು ಅಧ್ಯಯನ ಮಾಡುವುದು ಈ ಮಹಾಪ್ರಬಂಧದ ಉದ್ದೇಶ. ಕರ್ನಾಟಕ ಭಾರತ ಅಥವಾ ಪ್ರಪಂಚದ ಯಾವುದೇ ರಂಗಭೂಮಿಯನ್ನು ತೆಗೆದುಕೊಂಡರೂ ಅದಕ್ಕೆ ಸಂಬಂಧಿಸಿದ ವಿಷಯಗಳು, ಆದ್ಯ ರಂಗಾಚಾರ್ಯರು ತಿಳಿಸುವಂತೆ, 'ವಿರಳ ಮತ್ತು ಅನಿಶ್ಚಿತ..! ಆದರೂ ಸಹ ಜೀವನಕ್ಕೆ ಸಂಬಂಧಿಸಿದ ಸಂಸ್ಕೃತಿ, ಕಲೆ, ಇತಿಹಾಸ, ಧರ್ಮ, ಭಾಷೆ ಈ ಮಾನವಿಕ ವಿಷಯಗಳಿಗೆ ಮೂಲವು ಇರಲೇಬೇಕೆಂದು ಪಂಡಿತರು ಅವುಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ವಿವಿಧ ಭಾಗಗಳಲ್ಲಿನ ರಂಗಭೂಮಿಯನ್ನು ಕುರಿತ ಹಾಗೆ ಸಂಶೋಧನೆಗಳು ನಡೆದಿವೆ. ಭಾರತದ ನಾಟಕ ಕ್ಷೇತ್ರದಲ್ಲಿ ಸಹ ಎ. ಬಿ. ಕೀತ್, ಸೈಕೊನೊವ್, ಎಚ್. ಎಚ್. ವಿಲ್ಸನ್, ಮನಮೋಹನ್ ಘೋಷ್, ಆರ್. ಕೆ. ಯಾಜ್ಞೆಕ್, ಎನ್. ಲೀವಿ, ಎ. ಆರ್. ಕೃಷ್ಣಶಾಸ್ತ್ರಿ, ಆದ್ಯ ರಂಗಾಚಾರ್ಯ- ಇವರೆಲ್ಲ ಅಭಿಜಾತ ನಾಟಕದ ಬಗೆಗೆ ಸಂಶೋಧನೆಗಳನ್ನು ನಡೆಸಿದ್ದಾರೆ; ಬಲವಂತಗಾರ್ಗಿ, ಡಿ.ಆರ್. ಮಂಕಡ್, ಜೆ. ಸಿ. ನಾಥರ್, ಕಪಿಲಾ ವಾತ್ಸಾಯನ್-ಇವರು ಭಾರತೀಯ ಜನಪದ ರಂಗಭೂಮಿಯ ಬಗೆಗೆ ಅಧ್ಯಯನ ಮಾಡಿದ್ದಾರೆ. ಶಿವರಾಮ ಕಾರಂತ, ಜೀ. ಶಂ. ಪರಮಶಿವಯ್ಯ, ಚಂದ್ರಶೇಖರ ಕಂಬಾರ, ಡಿ. ಕೆ. ರಾಜೇಂದ್ರ ಕರ್ನಾಟಕ ಜನಪದ ರಂಗಭೂಮಿಯ ಬಗೆಗೆ ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಎಚ್. ಕೆ. ರಂಗನಾಥ್, ಸಿಂಧುವಳ್ಳಿ ಅನಂತಮೂರ್ತಿ ಕರ್ನಾಟಕ ವೃತ್ತಿ ರಂಗ ಭೂಮಿಯ ವಿಷಯವಾಗಿ ಅಧ್ಯಯನ ಮಾಡಿ, ಅತ್ಯಮೂಲ್ಯ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಕ್ರಿಸ್ತಶಕೆಯ ಮೊದಲ ಆರು ಶತಮಾನಗಳಲ್ಲಿ ಭಾರತೀಯ ನಾಟಕ ಉಚ್ಚಾಯ ಸ್ಥಿತಿಯಲ್ಲಿದ್ದು ಕ್ರಿ. ಶ. 10ನೇ ಶತಮಾನದ ಹೊತ್ತಿಗೆ ಅವನತಿಯ ಹಂತವನ್ನು ಮುಟ್ಟಿತೆಂಬ ಅಭಿಪ್ರಾಯವಿದೆ. ಕರ್ನಾಟಕದಲ್ಲಿ ಏಳನೇ ಶತಮಾನದ ಹೊತ್ತಿಗೆ ರಾಜಾಶ್ರಯ ಹೊಂದಿದ್ದ ಕವಿಗಳಿಗೆ ನಾಟ್ಯಶಾಸ್ತ್ರದ ಪರಿಚಯವಿದ್ದಂತೆ ಕಾಣುವುದು. ಹೀಗಿರುವಲ್ಲಿ ಕನ್ನಡ ರಂಗಭೂಮಿಯ ವಿಕಾಸದ ಅಧ್ಯಯನ ಎಂದಾಗ, ಏಳನೇ ಶತಮಾನದಿಂದ ರಂಗಭೂಮಿ ಯಾವ ಯಾವ ಹಂತಗಳನ್ನು ಮುಟ್ಟಿ ಸಾಗಿದೆ, ಯಾವ ಯಾವ ಹೊಸ ಲಕ್ಷಣಗಳನ್ನು ಪಡೆದುಕೊಂಡಿದೆ ಎಂದುದನ್ನು ಗಮನಿಸಬೇಕಾಗುವುದು.

*****

ನಾಟಕ ಪ್ರಯೋಗದ ಅಂಗಗಳನ್ನು ರಂಗತಜ್ಞರು ಗುರುತಿಸಿದ್ದರೂ ಅವುಗಳ ಹಾಗೂ ಪ್ರಯೊಗ ಪರಿಕರಗಳ ನಡುವಣ ಭಿನ್ನತೆಯನ್ನು ಅನೇಕರು ಸೂಚಿಸಿಲ್ಲ. ನಾಟಕ ಹಲವಾರು ಪ್ರಾಯೋಗಿಕ ಅಂಗಗಳ ಮೂಲಕ ಪ್ರದರ್ಶನಗೊಳ್ಳುತ್ತದೆ. ಆ ಅಂಗಗಳಿಗೆ ನೆರವಾಗುವ ಪರಿಕರಗಳು ಅಥವಾ ಸಾಧನಗಳು ಇದ್ದೇ ಇರುತ್ತವೆ. ನಾಟಕವನ್ನು ವ್ಯವಸ್ಥೆಗೊಳಿಸುವ ಸಂಘ ಅಥವಾ ಸಂಸ್ಥೆ; ನಾಟಕ ಕೃತಿ; ನಾಟಕ ಕೃತಿಯನ್ನು ಪ್ರಯೋಗಿಸಲು ಅಗತ್ಯವಾದ ರಂಗಮಂಟಪ ಅಥವಾ ನಾಟಕ ಶಾಲೆ; ನಾಟಕ ಕೃತಿಯ ಪಾತ್ರಗಳನ್ನು ವಹಿಸುವ ನಟರು; ನಟರ ರಸಭಾವಗಳನ್ನು ಗ್ರಹಿಸುವ ಪ್ರೇಕ್ಷಕರು ಹಾಗೂ ಅವರಿಗಾಗಿ ನಾಟಕ ಶಾಲೆಯಲ್ಲಿ ಗೊತ್ತುಪಡಿಸಿರುವ ಪ್ರೇಕ್ಷಾಗೃಹ ; ಪ್ರಸಾಧನ ಗೃಹ ಅಥವಾ ನೇಪಥ್ಯ-ಇವೆಲ್ಲಾ ನಾಟಕ ಪ್ರಯೋಗಕ್ಕೆ ಸಂಬಂಧಿಸಿದ ಪ್ರಮುಖ ಅಂಗಗಳು. ಹೀಗೆ ರಂಗಭೂಮಿಯ ಪ್ರಯೋಗಾಂಗಗಳು ಅನೇಕ ಹಾಗೂ ಅವುಗಳ ಪರಸ್ಪರ ಸಂಬಂಧ ಬಹು ನಿಕಟ.

ಸಿಂಧುವಳ್ಳಿ ಅನಂತಮೂರ್ತಿ ಅವರು, ರಂಗಸಜ್ಜಿಕೆ, ಬೆಳಕಿನ ವ್ಯವಸ್ಥೆ, ಪ್ರಸಾಧನ, ಉಡುಗೆ-ತೊಡುಗೆ, ರಂಗಸಂಗೀತ ಹಾಗೂ ರಂಗತಂತ್ರಗಳನ್ನು ರಂಗ ಭೂಮಿಯ ಪ್ರಯೋಗಾಂಗಗಳೆಂದು ಪರಿಗಣಿಸಿದ್ದಾರೆ. ಆರ್. ಗುರುರಾಜಾರಾವ್ ಅವರು ಸಹ ಇದೇ ಅಭಿಪ್ರಾಯವನ್ನು ತಾಳಿ, “ನಾಟಕ ಪ್ರಯೋಗದ ಇತರ ಅಂಗಗಳಂತೆ ವರ್ಣಾಲಂಕಾರವೂ ಒಂದು ಅಂಗ”, “ನಾಟಕದ ಪಾತ್ರಗಳಿಗೆ ರಂಗದ ಮೇಲೆ ರೂಪ ಕೊಡುವ ಪ್ರಯತ್ನದಲ್ಲಿ ವರ್ಣಪರಿಷ್ಕಾರ ಒಂದು ಮುಖ್ಯವಾದ ಅಂಗ' ಎಂದಿದ್ದಾರೆ. ಕೆ. ವಿ. ಸುಬ್ಬಣ್ಣನವರು ನಾಟಕ ಪ್ರದರ್ಶನದ ಬಗ್ಗೆ “ನಾಟಕ ಸಾಹಿತ್ಯ, ನಟರು, ರಂಗಸಜ್ಜಿಕೆ ಇತ್ಯಾದಿಗಳೆಲ್ಲ ಪರಿಕರಗಳಾಗಿ ಒದಗುತ್ತವೆ” ಎಂದು ಹೇಳಿ ನಾಟಕದ ಪ್ರಯೋಗಾಂಗಗಳ ಹಾಗೂ ಪ್ರಯೋಗ ಪರಿಕರಗಳ ನಡುವೆ ಭಿನ್ನತೆಯನ್ನು ಸೂಚಿಸಿಲ್ಲ. ಈ ನಾಟಕ ಪ್ರಯೋಗಾಂಗಗಳಿಗೆ ಸಂಬಂಧಪಟ್ಟಂತೆ ರಂಗಪರಿಕರಗಳು ಹಾಗೂ ಸಾಧನಗಳು ನಾಟಕದ ಪ್ರದರ್ಶನಕ್ಕೆ ಸಹಾಯಕವಾಗುತ್ತವೆ. 1) ರಂಗಸಜ್ಜಿಕೆ ನಾಟಕದ ಪ್ರಯೋಗಾಂಗವಾದರೆ ಸಂದರ್ಭಾನುಸಾರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಿಗೆ ತಕ್ಕಂತೆ ಸಿಂಹಾಸನ ; ಪೀಠೋಪಕರಣಗಳು ; ಪ್ರಾಣಿಗಳ ಆಕೃತಿ ಅಥವಾ ಚಿತ್ರಿತ ಮಾದರಿಗಳು;ಕಾಡು, ವನ, ಅರಮನೆ, ಮನೆ, ಗುಹೆ, ದೇವಾಲಯ ಇವುಗಳನ್ನು ಪ್ರತಿನಿಧಿಸುವ ರಂಗ ಜೋಡಣೆಗಳು; ಚಿತ್ರಿತ ಪರದೆಗಳು ; ರಂಗದ ಮೇಲೆ ಉಪಯೋಗಿಸುವ ವಸ್ತುಗಳು ರಂಗಸಜ್ಜಿಕೆಯ ಪರಿಕರ ಗಳಾಗುತ್ತವೆ. 2) ಪ್ರಸಾಧನದ ಸಂಬಂಧದಲ್ಲಿ ಪ್ರಸಾಧನ ವಸ್ತುಗಳು, ಬಣ್ಣಗಳು, ಟೋಫನ್, ಗಡ್ಡ ಮೂಾಸೆ ಪ್ರಸಾಧನದ ಪರಿಕರ ಅಥವಾ ಸಾಧನಗಳಾಗುತ್ತವೆ.

3) ಪ್ರಯೋಗಾಂಗವಾದ ಉಡುಗೆ ತೊಡುಗೆಗಳಿಗೆ ಸಂಬಂಧಪಟ್ಟ ಹಾಗೆ ರಂಗಪರಿಕರಗಳು ಕಿರೀಟ, ಬಿಲ್ಲು, ಬಾಣ, ಗದೆ, ಪಾತ್ರಗಳಿಗೆ ತಕ್ಕ ವಸ್ತ್ರಾಭರಣಗಳು, 4) ನೇಪಥ್ಯದಿಂದ ಹೊರಡುವ ಅಶರೀರವಾಣಿ ಹಾಗೂ ಇತರ ಧ್ವನಿಗಳು ಮತ್ತು ಶಬ್ದಗಳು ನೇಪಥ್ಯದ ಸಾಧನಗಳು. 5) ಪ್ರಯೋಗಾಂಗವಾದ ಬೆಳಕಿನ ವ್ಯವಸ್ಥೆಯ ಪರಿಕರಗಳು ಹಿಂದಿನ ಕಾಲದಲ್ಲಿ ಎಣ್ಣೆಯ ದೀಪಗಳು ಹಾಗೂ ಪಂಜುಗಳು; ಈಗ ವಿದ್ಯುತ್ ದೀಪಗಳು: ಡಿಮ್ಮರ್, ಸ್ಪಾಟ್ ಲೈಟ್, ಫ್ಲಡ್ ಲೈಟ್, ಫುಟ್ ಲೈಟ್ ಮುಂತಾದುವು ವಿದ್ಯುತ್ ಸಲಕರಣೆಗಳು; ಧ್ವನಿವರ್ಧಕ ಯಂತ್ರ, ಸಿಡಿಲು, ಮಳೆ ಇತ್ಯಾದಿ ಶಬ್ದಗಳನ್ನುಂಟು ಮಾಡಲು ಉಪಯೋಗಿಸುವ ಉಪಕರಣಗಳು. - ದ. ರಾ. ಬೇಂದ್ರೆಯವರು ನಾಟಕದ ಅಷ್ಟಾಂಗಗಳನ್ನು ವಿವರಿಸುತ್ತ ನಾಟಕದ ಪ್ರಯೋಗಾಂಗಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಅವರ ಪ್ರಕಾರ ವೇಷ ಭೂಷಣಗಳಿಂದ ಕೂಡಿದ ವಾಚಿಕ, ಆಂಗಿಕ ಹಾಗೂ ಆಹಾರ ಅಭಿನಯ ಮತ್ತು ಅಭಿನಯಿಸುವ ನಟರು; ಅಭಿನಯಕ್ಕೆ ಪರಿಣಾಮಕಾರಿಯಾದ ರಂಗದೃಶ್ಯ; ನಾಟಕ ಕೃತಿ ಹಾಗೂ ನಾಟಕವನ್ನು ರಚಿಸಿಕೊಡುವ ನಾಟಕಕಾರ: ನಾಟಕದ ಪೂರ್ವಸಿದ್ಧತೆ ಹಾಗೂ ನಾಟಕಾಭ್ಯಾಸ ಮಾಡಿಸುವ ಸೂತ್ರಧಾರ (ನಿರ್ದೇಶಕ); ನಾಟಕದ ಮೇಳ (ಸಂಗೀತ); ಪ್ರೇಕ್ಷಕರು ಮತ್ತು ನಾಟಕದ ಸಮಿಕ್ಷಕರು ನಾಟಕ ಪ್ರಯೋಗದ ಅಂಗಗಳು.

ರಂಗಭೂಮಿಯ ಪ್ರಯೋಗಾಂಗಗಳಿಗೆ ತಾಂತ್ರಿಕ ಲಕ್ಷಣಗಳಿವೆ. ನಾಟಕ ರಚನೆಯ ವಿಧಾನ, ಕೃತಿಯ ರಂಗಪ್ರಯೋಗ, ಅಭಿನಯ, ದೃಶ್ಯಗಳ ಜೋಡಣೆ, ರಂಗಸಂಗೀತ, ಬೆಳಕಿನ ವಿನ್ಯಾಸ ಇತ್ಯಾದಿಗಳೆಲ್ಲಾ ರಂಗಭೂಮಿಗೆ ಸಂಬಂಧಪಟ್ಟ ತಾಂತ್ರಿಕ ವಿಷಯಗಳು. ಈ ತಾಂತ್ರಿಕ ವಿಷಯಗಳಿಗೆ ಪ್ರಸ್ತುತ ಅಧ್ಯಯನದಲ್ಲಿ ವಿಶಿಷ್ಟ ಗಮನ ನೀಡಲಾಗಿದೆ.

ಅಧ್ಯಾಯ ಎರಡು

ಕನ್ನಡ ರಂಗಭೂಮಿಯ ಹಳಮೆ

1. ಶಾಸನ, ಸಾಹಿತ್ಯ, ಪ್ರವಾಸ ಗ್ರಂಥ ಹಾಗೂ ದಾಖಲೆಗಳ ಮಾಹಿತಿ

ಕನ್ನಡ ಅಭಿಜಾತ ರಂಗಭೂಮಿ

ಕನ್ನಡ ರಂಗಭೂಮಿಯ ಪರಂಪರೆ, ಭಾರತದ ಇತರ ಕಡೆಗಳಲ್ಲಿ ಕಂಡುಬರುವಂತೆ ಅಭಿಜಾತ, ಜನಪದ, ವೃತಿ ಹಾಗೂ ವಿಲಾಸಿ ನಾಟಕಗಳ ಕಾಲಗಳು ಎಂಬ ಕಾಲವಿಭಜನೆಯ ಘಟ್ಟಗಳನ್ನು ಹೊಂದಿದೆ. ಪ್ರಾರಂಭದ ಅಭಿಜಾತ ಕಾಲ ಕನ್ನಡ ನಾಟಕ ಕ್ಷೇತ್ರದಲ್ಲಿದ್ದಿತೆ ಎಂಬುದು ಸಂಶೋಧಕರ ಮುಂದಿರುವ ಪ್ರಶ್ನೆ: ಕ್ರಿಸ್ತಶಕೆಯ ಪ್ರಾರಂಭ ಶತಮಾನಗಳಲ್ಲಿ ಉಚ್ಛಾಯ ಸ್ಥಿತಿಯಲ್ಲಿದ್ದ ಸಂಸ್ಕೃತ ನಾಟಕಗಳು ಕಾಲ ಕ್ರಮದಲ್ಲಿ ಮುಸಲ್ಮಾನರ ಆಕ್ರಮಣದಿಂದ ಹಾಗೂ ದೇಶ ಭಾಷೆಗಳ ಅಭಿವೃದ್ಧಿಯಿಂದ ಕುಗ್ಗಿದವು. 9 ಮತ್ತು 12ನೇ ಶತಮಾನಗಳ ನಡುವೆ ಹಿಂದೂ ಸಮಾಜ, ವಿಶಿಷ್ಟವಾಗಿ ಉತ್ತರಭಾರತದಲ್ಲಿ, ಬಹಳವಾಗಿ ಮಾರ್ಪಟ್ಟಿತು. ಪ್ರಾಕೃತ ಭಾಷೆಗಳು ಸ್ವಂತ ಸಾಹಿತ್ಯವನ್ನು ಪಡೆದುಕೊಂಡು ಪ್ರಬಲವಾಗಲು, ಪಂಡಿತರ ಹಾಗೂ ಶ್ರೀಮಂತರ ಭಾಷೆಯಾಗಿದ್ದ ಸಂಸ್ಕೃತ ಹಿನ್ನೆಲೆಗೆ ಬಿದ್ದಿತು*. ಇಂಥ ಪರಿಸ್ಥಿತಿಯಲ್ಲಿ ವೇದಿಕೆಯ ಮೇಲೆ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿಲ್ಲದಿದ್ದರೂ, ಸಂಸ್ಕೃತ ನಾಟಕಗಳ ರಚನೆ 19ನೇ ಶತಮಾನದವರೆಗೆ ಮುಂದುವರಿದುದು ವಿಶಿಷ್ಟ ಸಂಗತಿ. ಸಂಸ್ಕೃತ ನಾಟಕಗಳು ಇಂದಿಗೂ ಉತ್ತರಭಾರತದ ಉಜ್ಜಯಿನಿ ಹಾಗೂ ಕೇರಳದ ತಿರುಚೂರು ಪಟ್ಟಣಗಳಲ್ಲಿ ಅಭಿನಯವಾಗುತ್ತವೆ. ಸಂಸ್ಕೃತ ನಾಟಕಗಳ ರಚನೆ ಶತಮಾನಗಳಿಂದ ಸಾಗಿಬಂದು, ಕೊನೆಗೆ ಬಿಹಾರದಲ್ಲಿ ವಿದ್ಯಾಪತಿ ಠಾಕೂರನು ದೇಶಭಾಷೆಯಲ್ಲಿ ನಾಟಕಗಳನ್ನು ರಚಿಸುವ ಕಾರ್ಯಕ್ಕೆ ತೊಡಗಿದಾಗ, ಸಂಸ್ಕೃತ ಪಂಡಿತನಾದ ಅವನು ಪಾತ್ರಗಳಿಗೆ ಸಂಸ್ಕೃತ ಮತ್ತು ಪ್ರಾಕೃತಗಳ ಮಾತುಗಳನ್ನು ನೀಡಿ, ಹಾಡುಗಳನ್ನು ಮಾತ್ರ

* “Sanskrit drama, addressed to a sophisticated audience of courtiers, used a highly ornate language that did not touch the life of people.”

-Balwant Gargi

Theatre in India, P. 82

________________

ಮೈಥಿಲಿ ಭಾಷೆಯಲ್ಲಿ ರಚಿಸಿದ. ಹೀಗೆ 19ನೇ ಶತಮಾನದಿಂದೀಚೆಗೆ ದೇಶೀಯ ಭಾಷೆಗಳಲ್ಲಿ ರಂಗಭೂಮಿಯ ನಾಟಕಗಳ ರಚನೆ ಪ್ರಾರಂಭವಾಯಿತು.*

ಕರ್ನಾಟಕ ನಾಟಕ ಪರಂಪರೆಯ ಅಧ್ಯಯನದಲ್ಲಿ ಪ್ರಾಚೀನ ಕನ್ನಡ ಕವಿಗಳು ನಾಟಕಗಳನ್ನು ರಚಿಸುವ ಗೋಜಿಗೆ ಹೋಗಲಿಲ್ಲವೆಂಬ ವಿಷಯವು ನಮ್ಮ ಗಮನಕ್ಕೆ ಬಂದಿದ್ದರೂ, ಇಮ್ಮಡಿ ಪುಲಿಕೇಶಿಯ ಸೊಸೆಯ, ಚಂದ್ರಾದಿತ್ಯನ (ಕ್ರಿ.ಶ. 655-659) ಪತ್ನಿಯೂ ಆದ ಬಿಜ್ಜಳರಾಣಿ (ವಿಜಯಮಹಾದೇವಿ) ಕೌಮುದೀ ಮಹೋತ್ಸವ ಎಂಬ ನಾಟಕವನ್ನು ಬರೆದಿರುವುದು ಒಂದು ಅಪವಾದವಾಗಿ ಕಾಣುತ್ತದೆ. ಆದರೆ ಅದು ಸಂಸ್ಕೃತದಲ್ಲಿ ರಚಿತವಾಗಿರುವ ನಾಟಕ.

ಪ್ರಾಚೀನ ಕಾಲದ ಕರ್ನಾಟಕ ನಾಟಕ ಶಾಲೆಗಳ ಬಗೆಗೆ ವಿವರಗಳಾಗಲಿ, ಅವುಗಳ ಅವಶೇಷಗಳಾಗಲಿ ಸಂಶೋಧಕರಿಗೆ ದೊರೆತಿಲ್ಲ. ಬಹುಶಃ ಆಗಿನ ನಾಟಕಗಳು ಭರತಮುನಿಯು ವಿಧಿಸಿರುವ ನಿಯಮಗಳ ಪ್ರಕಾರ ರಚಿತವಾಗಿ, ಅವನು ವರ್ಣಿಸಿರುವ ವಿವಿಧ ರಂಗಮಂಟಪಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು.

ಅಭಿಜಾತ ನಾಟಕ ಶ್ರೇಣಿಯಲ್ಲಿ ವಿಜಯನಗರದ ಕೃಷ್ಣದೇವರಾಯ ಜಾಂಬವತೀ ಕಲ್ಯಾಣವನ್ನು ರಚಿಸಿರುವುದಾದರೂ, ಅದು ಕನ್ನಡ ಕೃತಿಯಲ್ಲ, ಸಂಸ್ಕೃತ ನಾಟಕ. ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ಆಡಿದ ರೂಪಕ. ಕನ್ನಡದಲ್ಲಿ ಪ್ರಥಮ ಅಭಿಜಾತ ನಾಟಕವೆನಿಸಿಕೊಂಡ ಮಿತ್ರವಿಂದಾ ಗೋವಿಂದ ಸಹ ಸಂಸ್ಕೃತ ರತ್ನಾವಳೀ ನಾಟಕದ ರೂಪಾಂತರ. ಇಂಥ ಹಿನ್ನೆಲೆಯಲ್ಲಿ ಕನ್ನಡ ಭಾಷೆಯಲ್ಲಿ ನಾಟಕಗಳು ಅಭಿಜಾತ ಕಾಲದಲ್ಲಿದ್ದುವೆ ಎಂಬ ಪ್ರಶ್ನೆಗೆ ಉಚಿತ ಉತ್ತರ ನೀಡಲು ಸಹಾಯಕವಾದ ಮಾಹಿತಿಗಳು ಲಭ್ಯವಾಗಿಲ್ಲ.

ಸಾಂಪ್ರದಾಯಿಕ ರಂಗಭೂಮಿಯ ಪ್ರಾಚೀನತೆ

'ಸಾಂಪ್ರದಾಯಿಕ ಅಥವಾ ಜನಪದ ನಾಟಕಗಳಿಗೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ಯಕ್ಷಗಾನ-ಬಯಲಾಟ ಎಂಬ ಹೆಸರಿದೆ. ಅದನ್ನು ಪ್ರಾದೇಶಿಕ ವೈವಿಧ್ಯಗಳಿಗನುಸಾರವಾಗಿ ಮೂಡಲಪಾಯ ಮತ್ತು ಪಡುವಲಪಾಯ ಎಂದು ಸ್ಥೂಲವಾಗಿ ವರ್ಗಿಕರಿಸಲಾಗಿದೆ. ಪಾಯ ಎಂದರೆ ಪದ್ಧತಿ.

ಪಡುವಲಪಾಯ ಯಕ್ಷಗಾನ ಸಂಪ್ರದಾಯಕ್ಕೆ ಪಶ್ಚಿಮ ಘಟ್ಟಗಳ ಕೆಳಗಿನ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು, ಘಟ್ಟದ ಮೇಲಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರುತ್ತವೆ. ಪಡುವಲಪಾಯವನ್ನು ಆಟದ

*"So powerful has been the strength of the Sanskrit drama that it is only in the nineteenth century that vernacular

drama has exhibited itself in Hindi, and in general it is only very recently that the drama has seemed proper for varnacular expression."

A B. Keith,

The Sanskrit Drama, P. 243

________________

ಶೈಲಿಗನುಸಾರವಾಗಿ ಮತ್ತೆ, ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂದು ವಿಭಜಿಸಲಾಗಿದೆ. ಉಡುಪಿಯ ಉತ್ತರಕ್ಕೆ ಬಡಗುತಿಟ್ಟು, ದಕ್ಷಿಣಕ್ಕೆ ತೆಂಕುತಿಟ್ಟು ಎಂದು ಪಡುವಲಪಾಯವನ್ನು ಕರೆಯುವುದು ರೂಢಿಯಲ್ಲಿದೆ. - ಮೂಡಲಪಾಯ ಪದ್ಧತಿಯ ಯಕ್ಷಗಾನ-ಬಯಲಾಟವನ್ನು 1) ಉತ್ತರ ಸಂಪ್ರದಾಯ ಅಥವಾ ದೊಡ್ಡಾಟ ; ಮತ್ತು 2) ದಕ್ಷಿಣ ಕರ್ನಾಟಕದ ಸಂಪ್ರದಾಯ ಅಥವಾ ಮೂಡಲಪಾಯ ಎಂದು ಕರೆಯಲಾಗಿದೆ. ಬಯಲಾಟ, ಕೇಳಿಕೆ, ಅಟ್ಟದಾಟ ಎಂಬ ಹೆಸರುಗಳೂ ಅವಕ್ಕಿವೆ. ಮೂಡಲಪಾಯದ ದಕ್ಷಿಣ ಮತ್ತು ಉತ್ತರ ಸಂಪ್ರದಾಯಗಳು ಪ್ರಚಲಿತವಾಗಿರುವ ಪ್ರದೇಶಗಳ ಬಗ್ಗೆ ಡಿ. ಕೆ. ರಾಜೇಂದ್ರ ಈ ರೀತಿ ತಿಳಿಸುತ್ತಾರೆ: “ಮೂಡಲಪಾಯದಲ್ಲಿನ 'ದಕ್ಷಿಣ ಸಂಪ್ರದಾಯ' ತುಮಕೂರು, ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ-ಈ ಭಾಗಗಳನ್ನು ಒಳಗೊಂಡಂತೆ ಕಾಣಬರುತ್ತದೆ. ಉತ್ತರ ಸಂಪ್ರದಾಯ' ಬಳ್ಳಾರಿ, ಧಾರವಾಡ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬಿದರೆ, ಬೆಳಗಾಂ-ಈ ಪ್ರಾಂತಗಳನ್ನು ಒಳಗೊಂಡಂತೆ ಕಾಣಬರುತ್ತದೆ.”

ಯಕ್ಷಗಾನ ಬಯಲಾಟ ಮತ್ತು ಶಿಷ್ಟ ಶೈಲಿಯ ಕನ್ನಡ ರಂಗಭೂಮಿಯ ಉಗಮದ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅವುಗಳ ಮೂಲ ಹಾಗೂ ಪ್ರಾಚೀನತೆಯನ್ನು ಕಂಡುಹಿಡಿಯುವುದು, ಅವು ಮೊದಲುಗೊಂಡದ್ದು ಯಾವಾಗ ಎಂದು ಹೇಳುವುದು ಸುಲಭವಲ್ಲ ಎಂಬ ಅಭಿಪ್ರಾಯ ಹಾ. ಮಾ. ನಾಯಕರದು. ಅವರು ತಿಳಿಸುವಂತೆ, ಪ್ರಾಚೀನ ಶಾಸನ, ಕಾವ್ಯಗಳ ದಾಖಲೆಯಲ್ಲಿರುವ ನಾಟಕದ ಉಲ್ಲೇಖ, ಕಾವ್ಯದ ಸಂಭಾಷಣೆಗಳಲ್ಲಿನ ನಾಟಕೀಯ ಸ್ವರೂಪ, ಚಿತ್ರಶಿಲ್ಪಗಳಲ್ಲಿ ದೊರೆಯಬಹುದಾದ ಸೂಚನೆ-ಇಷ್ಟೇ ಕನ್ನಡ ರಂಗಭೂಮಿಯ ಹಳಮೆಯನ್ನು ಹೇಳಲು ನನಗೆ ಇರುವ ಆಧಾರಗಳು. ಆದರೆ ಇವೆಲ್ಲ ತೆಳುವಾದ ಆಧಾರಗಳು. ನಾಟಕವು ಅನುಕರಣಾತ್ಮಕ ಕಲೆ, ಯಾವ ಹಂತದಲ್ಲಿ ನಾಟಕದಲ್ಲಿಯ ಅನುಕರಣೆ ಪಾರಿಭಾಷಿಕತೆಯನ್ನು ಪಡೆದುಕೊಂಡಿತೆಂಬುದಕ್ಕೆ ನನಗೆ ಸಾಕ್ಷಗಳು ಬೇಕು ಎಂದು ಸಹ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕರ್ನಾಟಕದ ಮೂಡಲಪಾಯ ಯಕ್ಷಗಾನ-ಬಯಲಾಟದ ವಿಷಯದಲ್ಲಿ ಸಂಶೋಧನೆಗಳನ್ನು ನಡೆಸಿರುವ ಡಿ. ಕೆ. ರಾಜೇಂದ್ರ, (ಜನಪದ ನಾಟಕಗಳ ಕಾಲವನ್ನು ಗುರುತಿಸುವುದಾಗಲೀ, ನಿರ್ಧರಿಸುವುದಾಗಲೀ ಕಷ್ಟದ ಕೆಲಸ. ಅದು ಅತ್ಯಂತ ಪ್ರಾಚೀನವಾದದ್ದು ಎಂದಷ್ಟು ಮಾತ್ರ ಹೇಳಬಹುದು. ಎಲ್ಲೊ ಮಧ್ಯೆ ಸಿಕ್ಕಿದ ಒಂದೆರಡು ಆಧಾರಗಳನ್ನೇ ನಂಬಿ ಅವುಗಳ ಮೂಲಕ ನಿರ್ಧಾರವನ್ನು ಕೈಗೊಳ್ಳುವುದು ಸಾಧುವಲ್ಲ' ಎಂದಿದ್ದಾರೆ. ನಾಟಕದ ಕೃತಾನುಕರಣವು ಆದಿಮಾನವನಷ್ಟೇ ಹಳೆಯದು. ನೃತ್ಯ ಗೀತಗಳಿಂದ ಪ್ರಾರಂಭವಾದ ಜನಪದ ನಾಟಕವೂ ಸಹ ಅಷ್ಟೇ ಹಳೆಯದು. ರಂಗಭೂಮಿಯ ಸಂಶೋಧಕನು ಇತಿಹಾಸಕಾರನ ಪಾತ್ರವಹಿಸಿ ನಾಟಕ ಅಥವಾ ರಂಗಭೂಮಿಯ ಕಾಲವನ್ನು ನಿರ್ಣಯ ಮಾಡುವುದು ಕಷ್ಟವೇ ಸರಿ.

ಹಾ. ಮಾ. ನಾಯಕರು ಹೇಳುವಂತೆ, ಶಾಸನಗಳು, ಸಾಹಿತ್ಯಕ ಉಲ್ಲೇಖಗಳು ಮೊದಲಾದ ಆಂತರಿಕ ಸಾಕ್ಷ್ಯಗಳು ನಾಟಕ ಮತ್ತು ರಂಗಭೂಮಿಗಳ ಬಗೆಗೆ ಕೆಲವು ಮಾಹಿತಿಗಳನ್ನು ಒದಗಿಸಬಹುದು; ಅಷ್ಟರಿಂದಲೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದೆಯೂ ಇರಬಹುದು. ನಾಟಕದ ಮತ್ತು ರಂಗಭೂಮಿಯ ಹುಟ್ಟನ್ನು ಕಂಡುಹಿಡಿಯಲು ಅವು ನೆರವಾಗದಿದ್ದರೂ, ಅವುಗಳ ಪ್ರಾಚೀನತೆಯನ್ನು ಗುರುತಿಸಲು ಒಂದಷ್ಟು ನೆರವಾಗುತ್ತವೆ. ಈ ದೃಷ್ಟಿಯಿಂದ ದೇಶೀಯ ನಾಟಕದ ಹಾಗೂ ರಂಗಭೂಮಿಯ ಪ್ರಾಚೀನತೆ, ರೂಪ ಹಾಗೂ ಲಕ್ಷಣಗಳನ್ನು ಗುರುತಿಸಲು ಶಾಸನ, ಸಾಹಿತ್ಯ, ಯಾತ್ರಿಕರ ಸಂಚಾರಗ್ರಂಥಗಳು, ಕಲೆ, ಶಿಲ್ಪ ಮೊದಲಾದವುನೆರವಾಗುತ್ತವೆ. ಯಕ್ಷಗಾನದ ಇತಿಹಾಸವನ್ನು 15 ಕನ್ನಡ ಸಾಹಿತ್ಯ, ಶಿಲ್ಪ, ಸಂಗೀತ, ನೃತ್ಯ, ಕಲೆಗಳೊಂದಿಗೆ ಅಧ್ಯಯನ ಮಾಡುವುದಾದರೆ ಅದರ ಪ್ರಾಚೀನತೆ ತಿಳಿದುಬರುತ್ತದೆಯೆಂಬ ಅಭಿಮತ ಕಪಿಲಾ ವಾತ್ಸಾಯನ ಅವರದು.

ಯಕ್ಷಗಾನ ಬಯಲಾಟದ ಪ್ರಾಚೀನತೆಯನ್ನು ಕಂಡುಹಿಡಿಯಲು ವಿದ್ವಾಂಸರು ಪ್ರಯತ್ನಿಸದೆ ಇಲ್ಲ. ಹಾಗೆ ಪ್ರಯತ್ನಿಸಿದವರು ನಿರ್ದಿಷ್ಟ ಪ್ರದೇಶಗಳಿಗಿಂತ ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಅಭಿಪ್ರಾಯಗಳನ್ನು ನೀಡಿರುವುದನ್ನು ಗಮನಿಸಬಹುದು. ಪಡುವಲಪಾಯವನ್ನು ದೀರ್ಘವಾಗಿ ಅಧ್ಯಯನ ಮಾಡಿ, ಸಂಶೋಧನೆಗಳನ್ನು ನಡೆಸಿ, ಅದರ ಸುಧಾರಣೆಗಳಿಗೆ ಕಾರಣರಾದ ಶಿವರಾಮ ಕಾರಂತರು “ಕನ್ನಡದಲ್ಲಿ ಪ್ರಥಮ ನಾಟಕವೇ ಮಿತ್ರವಿಂದಾ ಗೋವಿಂದ (1680) ಎನ್ನುವವರು ಕ್ರಿ. ಶ. 1600ಕ್ಕಿಂತ ಮೊದಲೇ ಅಸ್ತಿತ್ವದಲ್ಲಿದ್ದ ಯಕ್ಷಗಾನ ಪ್ರಸಂಗಗಳು ಕನ್ನಡ ನಾಟಕದ ರೂಪವಲ್ಲವೆಂದು ಏತಕ್ಕೆ ತರ್ಕಿಸಬೇಕೊ ನಾನು ತಿಳಿಯೆ....” ಎಂದು ಒಂದು ಕಡೆ ಹೇಳಿದ್ದಾರೆ. ಮತ್ತೊಂದು ಕಡೆ “ಕರ್ನಾಟಕದ ಹಲವು ಭಾಗಗಳಲ್ಲಿ ಯಕ್ಷಗಾನ ರಂಗಭೂಮಿ ಹದಿನಾರನೇ ಶತಮಾನದಿಂದಲಾದರೂ ರೂಢಿಯಲ್ಲಿ ಇದ್ದಿರಬಹುದು. ಅಲ್ಲದೆ ಅದು ಸಾಕಷ್ಟು ನೃತ್ಯ ಪ್ರಧಾನ ನಾಟಕವಾಗಿಯೂ ಇದ್ದಿರಬೇಕು ಎಂದು ನನಗನಿಸುತ್ತದೆ” ಎಂದಿದ್ದಾರೆ. ಈ ಎರಡೂ ಹೇಳಿಕೆಗಳನ್ನು ಗಮನಿಸಿದಾಗ ಶಿವರಾಮ ಕಾರಂತರು ಆಧುನಿಕ ರಂಗಭೂಮಿಯ ಅಸ್ತಿತ್ವ ದೇಶೀಯ ನಾಟಕಗಳಿಂದ ಎಂಬ ಅಭಿಪ್ರಾಯವನ್ನು ಮಂಡಿಸಿರುವಂತೆ ಕಾಣುವುದು. ಗೋವಿಂದ ಪೈ ಅವರು ತಮ್ಮ “ಕನ್ನಡ ನಾಟಕದ ಹಳಮೆ' ಎಂಬ ಲೇಖನದಲ್ಲಿ, “ಕ್ರಿ. ಶ. 9-10ನೇ ಶತಮಾನದಿಂದ ಕುಮಾರ ವ್ಯಾಸನ ಕಾಲದವರೆಗೆ ಕೆಲವಾದರೂ ಸಾಹಿತ್ಯೋಚಿತವಾದ ನಾಟಕಗಳೂ, ಪ್ರಾಯಶಃ ಹಲವಾರು ನಾಡಾಡಿಗಳ ನಾಟಕಗಳೂ ಕನ್ನಡದಲ್ಲಿ ಇದ್ದಿರಬೇಕು ಎಂಬ ತೀರ್ಮಾನವನ್ನು ಸೂಚಿಸಿ, ಅವು ಕಾಲಕ್ರಮದಲ್ಲಿ ನಷ್ಟವಾಗಿರಬೇಕು ಇಲ್ಲವೆ ಇನ್ನೂ ಗುಪ್ತವಾಗಿರಬೇಕು ಎಂದಿದ್ದಾರೆ. ಆದರೆ, ಅವರ ತೀರ್ಮಾನ ಗಟ್ಟಿಯಾದ ನೆಲೆಗಟ್ಟಿನ ಮೇಲೆ ನಿಲ್ಲಲಾರದೆ ಹೋಗಿದೆ. “ಇಂದಿನ ನಮ್ಮ ಕರಾವಳಿ ಪ್ರದೇಶದ ಯಕ್ಷಗಾನ ಹಾಗೂ ಬಯಲು ಸೀಮೆಯ ಮೂಡಲಪಾಯಗಳ ಪ್ರಾಚೀನ ರೂಪಗಳನ್ನು ಪ್ರದರ್ಶಿಸುತ್ತಿದ್ದ ನಮ್ಮ ಜಾನಪದ ರಂಗಭೂಮಿಗೆ ಸಾವಿರ ವರ್ಷಗಳಿಗಿಂತ ಹೆಚ್ಚಿನ ಹಳಮೆ ಇದೆ. ದಶಾವತಾರದ ಮಾತಂತೂ ಕನ್ನಡ ಸಾಹಿತ್ಯದಲ್ಲಿ ಅಡಿಗಡಿಗೂ ಬರುತ್ತದೆ” ಎಂದು ನಾಟಕ ತಜ್ಞ ಎಚ್. ಕೆ. ರಂಗನಾಥ್ ಕರ್ನಾಟಕ ದೇಶೀಯ ನಾಟಕಗಳ ಪ್ರಾಚೀನತೆಗೆ ಕಾಲವನ್ನು ಊಹಿಸುತ್ತಾರೆ. ಸುಮಾರು ಕ್ರಿ. ಶ. 300ರಲ್ಲಿ ಭರತಮುನಿಯು ನಾಟ್ಯಶಾಸ್ತ್ರವನ್ನು ಬರೆಯುವುದಕ್ಕೆ ಮುಂಚೆಯೇ ಜನಸಾಮಾನ್ಯರಿಂದ ಹುಟ್ಟಿಕೊಂಡ 'ಗ್ರಾಮ್ಯ ನಾಟಕ' ಇದ್ದಿತು ಎಂಬುದು ಆದ್ಯ ರಂಗಾಚಾರ್ಯರ ಹೇಳಿಕೆ.*

ದಕ್ಷಿಣ ಭಾರತದಲ್ಲಿ ನಾಟಕ ಕಲೆ ಬಹಳ ಹಿಂದಿನಿಂದಲೂ ಸಾಗಿಬಂದಿದೆ. ಚೋಳ ಒಂದನೇ ರಾಜರಾಜನ ಕಾಲದಲ�