· web viewನೆನಪಿನಲ್ಲಿ ಉಳಿದಿವೆ: “but soft, what light through...

1844
ಪಪಪಪ. ಪಪಪ.ಪಪಪ. ಪಪಪಪಪಪಪ ಪಪಪಪ ಪಪಪಪಪ ಪಪಪಪಪಪಪ ಪಪಪಪಪಪಪ ಪಪಪಪಪ-6 ಪಪಪಪ. ಪಪಪ.ಪಪಪ. ಪಪಪಪಪಪಪ ಪಪಪಪ ಪಪಪಪಪಪಪ ಪಪಪಪಪಪ ಪಪಪಪಪ ಪಪಪಪಪ ಪಪಪಪಪಪಪಪ ಪಪಪಪಪ ಪಪಪಪಪ ಪಪಪ, ಪಪ.ಪಪ. ಪಪಪಪಪ ಪಪಪಪಪಪಪಪ - 560 002 Prof. L.S. Seshagiri Rao : SAMAGRA VIMARSHA SAHITYA - Vol- 6 : by L.S. Seshagiri Rao, Published by : Manu Baligar, Director, Department of Kannada & Culture, Kannada Bhavan, J.C.Road, Bengaluru - 560 002 ಪ ಪಪಪಪಪಪಪಪ ಪಪಪಪಪ : ಪಪಪಪಪಪಪ ಪಪಪಪಪಪ ಪಪಪಪಪಪಪ ಪಪಪಪ : 2010 ಪಪಪಪಪಪಪಪ : 1000 ಪಪಪಪಪಪ : xii + 1000 ಪಪಪಪ : ಪಪ. 180/- ಪಪಪಪಪಪಪಪ : ಪಪಪಪಪಪಪಪಪಪಪಪಪ ಪಪ.ಪಪಪ. ಪಪಪಪಪಪಪ ಪಪಪಪಪಪಪಪಪ Lakshmi Mudranalaya ISO 9001-2000 ಪಪಪಪಪಪಪಪಪಪ, ಪಪಪಪಪಪಪಪ-18 ಪಪಪಪಪಪಪ : 2661 3123, 2661 8752 ಪಪಪಪಪ ಪಪಪಪಪಪ

Upload: others

Post on 17-Jul-2020

23 views

Category:

Documents


0 download

TRANSCRIPT

ಪ್ರೊ. ಎಲ್.ಎಸ್. ಶೇಷಗಿರಿ ರಾವ್

ಸಮಗ್ರ ವಿಮರ್ಶಾ ಸಾಹಿತ್ಯ

ಸಂಪುಟ-6

ಪ್ರೊ. ಎಲ್.ಎಸ್. ಶೇಷಗಿರಿ ರಾವ್

ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಭವನ, ಜೆ.ಸಿ. ರಸ್ತೆ

ಬೆಂಗಳೂರು - 560 002

Prof. L.S. Seshagiri Rao : SAMAGRA VIMARSHA SAHITYA - Vol- 6 : by L.S. Seshagiri Rao, Published by : Manu Baligar, Director, Department of Kannada & Culture, Kannada Bhavan, J.C.Road, Bengaluru - 560 002

ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ

ಮುದ್ರಿತ ವರ್ಷ : 2010

ಪ್ರತಿಗಳು : 1000

ಪುಟಗಳು : xii + 1000

ಬೆಲೆ : ರೂ. 180/-

ರಕ್ಷಾಪುಟ : ಪ್ರಸನ್ನಕುಮಾರ್ ವಿ.ಎಸ್.

ಲಕ್ಷ್ಮೀ ಮುದ್ರಣಾಲಯ

Lakshmi Mudranalaya

ISO 9001-2000

ಚಾಮರಾಜಪೇಟೆ, ಬೆಂಗಳೂರು-18

ದೂರವಾಣಿ : 2661 3123, 2661 8752

ಲೇಖಕನ ಬಿನ್ನಹ

ಇದು ನನಗೆ ಬಹಳ ಸಮಾಧಾನವನ್ನು ತರುವ ಸಂದರ್ಭ. ಸುಮಾರು ಐವತ್ತೈದು ವರ್ಷಗಳ ದೀರ್ಘಾವಧಿಯ ನನ್ನ ವಿಮರ್ಶೆಯ ಎಲ್ಲ ಬರಹಗಳು ಈ ಸಂಪುಟಗಳಲ್ಲಿ ಒಂದೆಡೆ ಲಭ್ಯವಾಗುತ್ತಿವೆ. ಕಾಲೇಜಿನಲ್ಲಿ ಶ್ರೇಷ್ಠ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳ ಅಧ್ಯಯನವನ್ನು ಮಾಡಿದೆ. ಇಂಗ್ಲಿಷ್ ಭಾಷೆಯು, ಪ್ರಾಚೀನ ಮತ್ತು ಸಮಕಾಲೀನ ಯೂರೋಪಿನ ಮತ್ತು ಜಗತ್ತಿನ ಇತರ ಹಲವು ದೇಶಗಳ ಸಾಹಿತ್ಯ, ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳ ಅಧ್ಯಯನಕ್ಕೆ ಹೆಬ್ಬಾಗಿಲಾಯಿತು. ಇದರೊಂದಿಗೆ ಅರವತ್ತು ವರ್ಷಗಳ ಕಾಲ ನನ್ನ ಹಿರಿಯರ ಪೀಳಿಗೆಗಳ, ಸಮಕಾಲೀನ ಮತ್ತು ಯುವಕ ಪೀಳಿಗೆಗಳ ಸಾಹಿತಿಗಳು ಮತ್ತು ಚಿಂತಕರೊಡನೆ ವಿಚಾರ ವಿನಿಮಯ-ಇವೆಲ್ಲದರಿಂದ ಬೆಳೆದು ರೂಪುಗೊಂಡ ಸಾಹಿತ್ಯ ಸ್ಪಂದವನ್ನು ಇಲ್ಲಿ ಕಾಣಬಹುದು. ಇಂಗ್ಲಿಷ್ ಸಾಹಿತ್ಯ, ಭಾಷಾ ವಿಜ್ಞಾನ, ತೌಲನಿಕ ನಾಟಕ ಮತ್ತು ತೌಲನಿಕ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಯೂರೋಪಿನ ಸಾಹಿತ್ಯ ಇವನ್ನು ಇಂಗ್ಲಿಷ್ ಎಂ.ಎ. ತರಗತಿಗಳಿಗೆ ಪಾಠ ಹೇಳುವಾಗ ಮಾಡಿದ ಅಧ್ಯಯನದ ಫಲವನ್ನು ಈ ಸಂಪುಟಗಳಲ್ಲಿ ಗುರುತಿಸಬಹುದು. ನಾನು ಪಡೆದುಕೊಂಡ ಭಾಗ್ಯವನ್ನು, ಅದರ ದಾತರಾದ ನನ್ನ ಕನ್ನಡ ಬಂಧುಗಳೊಡನೆ ಹಂಚಿಕೊಳ್ಳುವುದು ಈ ಬರಹಗಳ ಮುಖ್ಯ ಉದ್ದೇಶ.

ಈ ಸಂಪುಟಗಳಲ್ಲಿ ‘ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ', ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ', ‘ಗ್ರೀಕ್ ರಂಗಭೂಮಿ ಮತ್ತು ನಾಟಕ, ‘ಫ್ರಾನ್ಸ್ ಕಾಫ್ಕ' ‘ಆಲಿವರ್ ಗೋಲ್ಡ್ಸ್ಮಿತ್', ಷೇಕ್ಸ್ಪಿಯರ್' ಮುಂತಾದ ಬೇರೆ ದೇಶಗಳ ಸಾಹಿತ್ಯಗಳಿಗೆ ಸಂಬಂಧಿಸಿದ ಕೃತಿಗಳಿವೆ. ಇವುಗಳಲ್ಲಿ ಅಡಕವಾಗಿರುವ ತಿರುಳನ್ನು ಪಡೆದುಕೊಳ್ಳಲು ನಾನು ಹಲವು ದಶಕಗಳ ಕಾಲ ಶ್ರಮಿಸಬೇಕಾಯಿತು. ಇದರ ಅಗತ್ಯವಿರುವವರಿಗೆ ಈ ಮಾಹಿತಿಯನ್ನು ಪಡೆದುಕೊಳ್ಳಲು ಈ ಸಮಗ್ರ ಸಂಪುಟಗಳ ಪ್ರಕಟಣೆಯಿಂದ ಸಾಧ್ಯವಾಗಬಹುದೆಂದು ನನ್ನ ಆಸೆ.

ಈ ಸಂಪುಟಗಳನ್ನು ಪ್ರಕಟಿಸುತ್ತಿರುವ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾನು ಕೃತಜ್ಞ. ಈ ಯೋಜನೆಯಲ್ಲಿ ಆಸಕ್ತಿ ವಹಿಸಿ ಇದನ್ನು ಕಾರ್ಯಗತ ಮಾಡಿದ ಈ ನಿರ್ದೇಶನಾಲಯದ ನಿರ್ದೇಶಕರು ಶ್ರೀ ಮನು ಬಳಿಗಾರ್ ಅವರಿಗೆ ಹಾಗೂ ಜಂಟಿ ನಿರ್ದೇಶಕರಾದ ಶ್ರೀ ಎಚ್. ಶಂಕರಪ್ಪ ಅವರಿಗೆ ನನ್ನ ಆದರ ಪೂರ್ವಕ ವಂದನೆಗಳು. ಇದರ ಸಿದ್ಧತೆ ಮತ್ತು ಪ್ರಕಟಣೆಯಲ್ಲಿ ಸಹಕರಿಸಿದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರ ನೆರವನ್ನು ಸಂತೋಷದಿಂದ ಸ್ಮರಿಸುತ್ತೇನೆ.

-ಎಲ್.ಎಸ್. ಶೇಷಗಿರಿ ರಾವ್

ಪ್ರಕಾಶಕರ ಮಾತು

ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಪ್ರಕಟಣಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದೆ. ಪ್ರಸಕ್ತ ವರ್ಷ ಎಂ. ಗೋಪಾಲಕೃಷ್ಣ ಅಡಿಗ, ಹುಯಿಲಗೋಳನಾರಾಯಣರಾಯರು, ನಾಡೋಜ ಚೆನ್ನವೀರ ಕಣವಿ, ಕೆ.ಎಸ್. ನರಸಿಂಹಸ್ವಾಮಿ ಹಾಗೂ ಡಿ.ಎಸ್. ಕರ್ಕಿ ಹೀಗೆ ಪ್ರಮುಖ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆಗಳನ್ನು ಹೊರತರಲಾಗುತ್ತಿದೆ. ಒಬ್ಬ ಲೇಖಕರ ಸಮಗ್ರ ಅಧ್ಯಯನ ಮಾಡಲು ಅನುಕೂಲವಾಗಬೇಕೆಂಬುದು ಈ ಯೋಜನೆಯ ಆಶಯ.

ಈ ಯೋಜನೆಯಡಿ ಪ್ರಸಕ್ತ ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ಪ್ರೊ|| ಎಲ್.ಎಸ್. ಶೇಷಗಿರಿ ರಾವ್ ಅವರ ಸಮಗ್ರ ವಿಮರ್ಶಾ ಸಾಹಿತ್ಯವನ್ನು ಎಂಟು ಸಂಪುಟಗಳಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಸಣ್ಣಕಥೆ, ನಾಟಕ, ಜೀವನಚರಿತ್ರೆ, ಅನುವಾದ, ಕನ್ನಡ ಇಂಗ್ಲಿಷ್ ನಿಘಂಟು, ಸಾಹಿತ್ಯ ವಿಮರ್ಶೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರನ್ನು ಪ್ರಧಾನವಾಗಿ ವಿಮರ್ಶಕರೆಂದು ಗುರುತಿಸಲಾಗುತ್ತದೆ. ವಾಸ್ತವವಾಗಿ ಅವರ ಮೊದಲ ಪ್ರಕಟಣೆ ‘ಇದು ಜೀವನ' ಕಥಾಸಂಕಲನ. ಸುಮಾರು ಹತ್ತೊಂಬತ್ತು ವಿಮರ್ಶಾಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರ ಪಟ್ಟಿಯಲ್ಲಿ ಅಗ್ರಪಂಕ್ತಿಗೆ ನಿಲ್ಲುವವರು ಪ್ರೊ. ಎಲ್.ಎಸ್. ಶೇಷಗಿರಿ ರಾವ್. ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿದಾಗ ಕನ್ನಡ ಸಂಸ್ಕೃತಿಗೆ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಕೊಡುಗೆ ಬಹುಮುಖಿಯಾದುದು; ಮಹತ್ವಪೂರ್ಣವಾದುದು.

ಹಲವಾರು ದಶಕಗಳ ವ್ಯಾಪಕ ಅಧ್ಯಯನ, ಅಧ್ಯಾಪನಗಳ ಅನುಭವಸಾರ, ಸಾಹಿತ್ಯಪ್ರೀತಿ ಮತ್ತು ಭುತ್ವ ಗಳಿಸಿಕೊಂಡಿರುವ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ನಮ್ಮ ನಡುವಿನ ಹಿರಿಯ ಮೇಧಾವಿ. ವಿಶಿಷ್ಟ ಪ್ರತಿಭೆ, ಪಾಂಡಿತ್ಯ, ಕ್ರಿಯಾತ್ಮಕ ಬರವಣಿಗೆ, ಸಹೃದಯ ವಿಮರ್ಶೆ, ಅರ್ಥಪೂರ್ಣ ಭಾಷಣ, ಅಚ್ಚುಕಟ್ಟುತನ, ಕನ್ನಡಪರ ಹೋರಾಟ ಹಾಗೂ ಪ್ರಾಮಾಣಿಕತೆ ಇವುಗಳಿಂದ ಕನ್ನಡ ಸಾಹಿತ್ಯದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿ ಹಲವಾರು ಸ್ಥಾನಗಳಲ್ಲಿ ನುಡಿಸೇವೆಗೈದವರು ಪ್ರೊ. ಎಲ್.ಎಸ್. ಶೇಷಗಿರಿರಾವ್.

ತಮ್ಮ ವಿಮರ್ಶಾ ಸಾಹಿತ್ಯವನ್ನು ಇಲಾಖೆಯ ಮೂಲಕ ಹೊರತರಲು ಅವಕಾಶ ಮಾಡಿಕೊಟ್ಟ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರಿಗೆ ನನ್ನ ಕೃತಜ್ಞತಾಪೂರ್ವಕ ವಂದನೆಗಳು. ಈ ಯೋಜನೆಗೆ ಒಪ್ಪಿಗೆ ಕೊಟ್ಟ ನಮ್ಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಜಯರಾಮ್ರಾಜೇ ಅರಸ್ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಈ ಸಮಗ್ರ ವಿಮರ್ಶಾ ಸಾಹಿತ್ಯವನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು (ಸು.ಕ), ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು, ಪ್ರಕಟಣಾ ಶಾಖೆ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು. ಈ ಸಂಪುಟಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಲಕ್ಷ್ಮೀ ಮುದ್ರಣಾಲಯದ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಗಳು.

ಸಾಹಿತ್ಯ ಬೋಧನೆ, ರಚನೆ ಮತ್ತು ಪ್ರಚಾರದಲ್ಲಿ ಇಂದಿಗೂ ತೊಡಗಿಕೊಂಡಿರುವ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಸಮಗ್ರ ವಿಮರ್ಶಾ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯ. ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಸಮಗ್ರ ವಿಮರ್ಶಾ ಸಂಪುಟಗಳನ್ನು ಸಾಹಿತ್ಯಾಸಕ್ತರು ಪ್ರೀತಿಯಿಂದ ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಪಡೆದುಕೊಳ್ಳಲಿ ಎಂದು ಆಶಿಸುತ್ತೇನೆ.

22-02-2010 ಮನು ಬಳಿಗಾರ್ ಕ.ಅ.ಸೇ.

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪರಿವಿಡಿ

ಪಾಶ್ಚಾತ್ಯ ಸಾಹಿತ್ಯ ವಿಹಾರ

ಷೇಕ್ಸ್ಪಿಯರ್ ಹುಟ್ಟಿ 400 ವರ್ಷಗಳಾದುವು;

ಆದರೆ ನನಗೇಕೆ ಅವನ ಗೊಡವೆ? ..... 1

ಷೇಕ್ಸ್ಪಿನ ಫಾಲ್ಸ್ಟಾಫ್ ..... 6

ಒಥೆಲೊ .....34

ಷೇಕ್ಸ್ಪಿನ ಜಗತ್ತಿನಲ್ಲಿ ಬೆಪ್ಪರು ಮತ್ತು ಬೆಪ್ಪುತನ..... 50

ಲಿಯೊ ಟಾಲ್ಸ್ಟಾಯ್ ..... 74

ಗಟೆಯ ‘ಫೌಸ್ಟ್'..... 91

‘ಮಮತೆ ತುಂಬಿದ ಮಾನವದ್ವೇಷಿ':

ಜೊನಾಥನ್ ಸ್ವಿಫ್ಟ್.....100

ಪಿರಾಂಡೆಲೊ ..... 106

ಜಾಕ್ ಲಂಡನ್ನ ‘ದಿ ಐರ್ನ್ ಹೀಲ್'..... 120

ಕಾಫ್ಕನ ‘ದಿ ಕಾಸಲ್'..... 134

‘ಅರ್ಥಹೀನ ಪದ್ಯ' ..... 155

‘ಪಾಶ್ಚಾತ್ಯ ಸಾಹಿತ್ಯ ಲೋಕದಲ್ಲಿ'

ಕಾದಂಬರಿ

ದಿ ಸ್ಕಾರ್ಲೆಟ್ ಲೆಟರ್-ನೆಥಾನಿಯಲ್ ಹತಾರ್ನ್ (ಅಮೆರಿಕ) ..... 164

ಎ ಟೇಲ್ ಆಫ್ ಟು ಸಿಟೀಸ್-ಛಾಲ್ರ್ಸ್ ಡಿಕನ್ಸ್ (ಇಂಗ್ಲೆಂಡ್) .....170

ಜೇನ್ ಐರ್ - ಷಾರ್ಲಟ್ ಬ್ರಾಂಟಿ (ಇಂಗ್ಲೆಂಡ್) ..... 176

ವುದರಿಂಗ್ ಹೈಟ್ಸ್ - ಎಮಿಲಿ ಬ್ರಾಂಟಿ (ಇಂಗ್ಲೆಂಡ್) ..... 182

ಕ್ರೈಮ್ ಅಂಡ್ ಪನಿಷ್ಮೆಂಟ್ - ಫಿಯೊಡರ್ ...... 187

ಮಿಖೈಲವಿಚ್ ದಸ್ತೊಯೆವ್ಸ್ಕಿ (ರಷ್ಯ)

ಆನ ಕರೇನಿನ - ಲಿಯೊ ಟಾಲ್ಸ್ಟಾಯ್ (ರಷ್ಯ) ...... 193

ಟೆಸ್ ಆಫ್ ದಿ ಡರ್ಬೆರ್ವಿಲ್ಸ್ -

ಥಾಮಸ್ ಹಾರ್ಡಿ(ಇಂಗ್ಲೆಂಡ್) ...... 198

ಜ್ಯೂಡ್ ದಿ ಅಬ್ಸ್ಕ್ಯೂರ್-ಥಾಮಸ್ ಹಾರ್ಡಿ (ಇಂಗ್ಲೆಂಡ್) ...... 203

ದಿ ಟ್ರಯಲ್ - ಫ್ರಾನ್ಜ್ ಕಾಫ್ಕ (ಜರ್ಮನಿ) ..... 209

ಸನ್ಸ್ ಅಂಡ್ ಲವರ್ಸ್- ಡಿ.ಎಚ್. ಲಾರೆನ್ಸ್ (ಇಂಗ್ಲೆಂಡ್) ..... 214

ನಾಟಕ

ಮೀಡಿಯ - ಯೂರಿಪಿಡೀಸ್ (ಪ್ರಾಚೀನ ಗ್ರೀಸ್)..... 218

ಮರ್ಡರ್ ಇನ್ ದಿ ಕೆಥೀಡ್ರಲ್-ಟಿ.ಎಸ್.ಎಲಿಯಟ್ (ಇಂಗ್ಲೆಂಡ್) ...... 224

ನೋ ಎಕ್ಸಿಟ್-ಜೀನ್ ಪಾಲ್ ಸಾತ್ರ್ರ್ (ಫ್ರಾನ್ಸ್) ...... 230

ಎ ಸ್ಟ್ರೀಟ್ ಕಾರ್ ನೇಮ್ಡ್ ಡಿಸೈರ್ಟೆನಿ

ಸಿ ವಿಲಿಯಂಸ್ (ಅಮೆರಿಕ) ...... 235

ಕಾವ್ಯ

ದಿ ಡಿವೈನ್ ಕಾಮಿಡಿ-ಡಾಂಟೆ ಆಲ್ಫಿಯೇರಿ (ಇಟಲಿ) ...... 240

ದಿ ಪ್ರಲೋಗ್-ಜೆಫ್ರಿ ಛಾಸರ್ (ಇಂಗ್ಲೆಂಡ್) ...... 245

ಪ್ರೇಮ ಕವನಗಳು-ಜಾನ್ ಡನ್ (ಇಂಗ್ಲೆಂಡ್) ......251

ದಿ ಏನ್ಷಂಟ್ ಮ್ಯಾರಿನರ್-

ಸ್ಯಾಮ್ಯಯಲ್ ಟೇಲರ್ ಕಾಲ್ರಿಜ್ (ಇಂಗ್ಲೆಂಡ್) ...... 256

ಪ್ರೇಮ ಕವನಗಳು-ರಾಬರ್ಟ್ ಬ್ರೌನಿಂಗ್ (ಇಂಗ್ಲೆಂಡ್) ...... 262

ಎರಡು ಕವನಗಳು-ವಿಲಿಯಂ ಬಟ್ಲರ್ ಯೇಟ್ಸ್ (ಇಂಗ್ಲೆಂಡ್) ...... 268

ಫ್ರಾನ್ಙ್ ಕಾಫ್ಕ

ಜೀವನ, ಚಿಂತನೆಯ ಹಿನ್ನೆಲೆ ...... 276

ಸಣ್ಣ ಕಥೆಗಳು ...... 291

ಕಾದಂಬರಿಗಳು ...... 319

ಸಾಧನೆ ...... 359

ಗ್ರೀಕ್ ರಂಗಭೂಮಿ ಮತ್ತು ನಾಟಕ

ಹಿನ್ನೆಲೆ ...... 370

ಗ್ರೀಕ್ ಮನಸ್ಸು, ಸಂಸ್ಕೃತಿ ...... 383

ಡಯೋನೀಸಸನ ಬಾಂಧವ್ಯ ...... 389

ರಂಗಮಂದಿರ...... 400

ಈಸ್ಕಿಲಸ್ ...... 440

ಸಫೋಕ್ಲೀಸ್ ...... 499

ಯೂರಿಪಿಡೀಸ್ ...... 570

ಗಂಭೀರ ನಾಟಕ : ಒಂದು ಪಕ್ಷಿನೋಟ ...... 673

ಹಾಸ್ಯ ನಾಟಕ : ಅರಿಸ್ಟೊಫೆನೀಸನ ಮೊದಲು...... 717

ಅರಿಸ್ಟೊಫೆನೀಸ್ ...... 730

ಅರಿಸ್ಟೊಫೆನೀಸ್ನ ನಂತರ ...... 775

ಚಿತ್ರಗಳು ...... 410

ವಿಷಯಸೂಚಿ ...... 785

ಕೃತಿ - ಆಕೃತಿ

ಬೈಬಲ್ : ‘ದಿ ಬುಕ್ ಆಫ್ ಜೋಬ್’...... 797

ಇಂಗ್ಲೆಂಡಿನ ಮೊದಲನೆಯ ವೀರಕಾವ್ಯ ‘ಬೇವುಲ್ಫ್’ ...... 804

ವಿಲಿಯಂ ಕೂಪರ್ : ‘ಆನ್ ಮೈ ಮದರ್ಸ್ ಪಿಕ್ಚರ್’...... 810

ಡಬ್ಲ್ಯೂ.ಎಚ್. ಆಡೆನ್ : ‘ಇನ್ ಮೆಮರಿ ಆಫ್

ಡಬ್ಲ್ಯೂ.ಬಿ.ಯೇಟ್ಸ್’ ...... 815

ರಾಬರ್ಟ್ ಫ್ರಾಸ್ಟ್ : ‘ಮೆಂಡಿಂಗ್ ವಾಲ್’ ...... 819

ಹೆನ್ರಿಕ್ ಇಬ್ಸನ್ : ‘ದಿ ಮಾಸ್ಟರ್ ಬಿಲ್ಡರ್’ ...... 824

ಬೆನ್ ಜಾನ್ಸನ್ : ‘ವಾಲ್ಪೊನಿ’ ...... 829

ನಾರ್ಮನ್ ಮೆಕಿನೆಲ್ : ‘ದಿ ಬಿಷಪ್ಸ್ ಕ್ಯಾಂಡ್ಲ್ಸ್ಟಿಕ್ಸ್’ ...... 835

ಅಗಾಥ ಕ್ರಿಸ್ಟಿ : ‘ದಿ ಮೌಸ್ ಟ್ರ್ಯಾಪ್’ ...... 842

ಸರ್ವಾಂಟಿಸ್ : ‘ಡಾನ್ ಕ್ವಿಕ್ಸಾಟ್’ ...... 849

ಚಾರ್ಲ್ಸ್ ಡಿಕನ್ಸ್ : ‘ಗ್ರೇಟ್ ಎಕ್ಸ್ಪೆಕ್ಟೇಷನ್ಸ್’ ...... 854

ವಿಲ್ಕಿ ಕಾಲಿನ್ಸ್ : ‘ದಿ ಮೂನ್ ಸ್ಟೋನ್’ ......861

ಹೆನ್ರಿ ಜೇಮ್ಸ್ : ‘ದಿ ಟರ್ನ್ ಆಫ್ ದಿ ಸ್ಕ್ರೂ’ ...... 866

ಆರ್. ಎಲ್. ಸ್ಟೀವನ್ಸನ್ : ‘ಡಾ. ಜೆಕಿಲ್ ಅಂಡ್ ಮಿ.ಹೈಡ್' ...... 871

ಸಿಂಕ್ಲೇರ್ ಲೀವಿಸ್ : ‘ಬ್ಯಾಬಿಟ್’ ...... 879

ಅರ್ನೆಸ್ಟ್ ಹೆಮಿಂಗ್ವೇ : ‘ದಿ ಓಲ್ಡ್ ಮ್ಯಾನ್

ಅಂಡ್ ದಿ ಸೀ'...... 886

ರಿಚರ್ಡ್ ಫ್ರ್ಯಾಂಕ್ ಸ್ಟಾಕ್ಟನ್ :

‘ದಿ ಲೇಡಿ ಆರ್ ದಿ ಟೈಗರ್?’ ...... 891

ಜೇಮ್ಸ್ ಬ್ಯಾಂಜ್ ಕೆಬೆಲ್ : ‘ಎ ಬ್ರೌನ್ ವುಮನ್’ ...... 896

ಜಾರ್ಜ್ ಲೂಯಿ ಬೊರ್ಹೇಸ್ : ಎರಡು ಕತೆಗಳು...... 902

ಫ್ರಾನ್ಜ್ಕಾಫ್ಕ : ‘ದಿ ಬರೋ’ ...... 907

ರಿಬೆಕ ವೆಸ್ಟ್ : ‘ದಿ ಸಾಲ್ಟ್ ಆಫ್ ದಿ ಅರ್ತ್’ ...... 912

ಆಲ್ಡಸ್ ಹಕ್ಸ್ಲಿ : ‘ದಿ ಜಿಯಕೊಂಡ ಸ್ಮೈಲ್’ ...... 918

ಜೇಮ್ಸ್ ಥ್ರೂಬರ್ : ‘ದಿ ಸೀಕ್ರೆಟ್ ಲೈಫ್

ಆಫ್ ವಾಲ್ಟರ್ ಮಿಟ್ಟಿ’ ...... 924

ಇರ್ವಿಂಗ್ ಸ್ಟೋನ್ : ‘ಕ್ಲಾರೆನ್ಸ್ ಡ್ಯಾರೊ ಫರ್ ದಿ ಡಿಫೆನ್ಸ್’ ...... 930

ಹೆನ್ರಿ ಡೇವಿಡ್ ಥೋರೋ : ‘ವಾಲ್ಡನ್’ ...... 937

ಲಿಟನ್ ಸ್ಟ್ರ್ಯಾಚಿ : ‘ಎಮಿನೆನ್ಟ್ ವಿಕ್ಟೋರಿಯನ್ಸ್’ ...... 942

ಕ್ಲಿಯಾಂತ್ ಬ್ರುಕ್ಸ್ : ‘ದಿ ವೆಲ್ರಾಟ್ ಅರ್ನ್’ ...... 948

ಆ್ಯಬ್ರಹಂ ಲಿಂಕನ್ : ‘ಗೆಟಿಸ್ಬರ್ಗ್ ಅಡ್ರೆಸ್’ ...... 954

ಜೀನಿ ಸ್ಮಿತ್ : ‘ವೆನ್ ದಿ ಚೀರಿಂಗ್ ಸ್ಟಾಪ್ಡ್’ ......959

ಜೇಮ್ಸ್ ಮಾರ್ಗಾಕ್ : ‘ದಿ ಅಬ್ಯೂಸ್ ಆಫ್ ಪವರ್’ ...... 964

ಎಡಿತ್ ಲಟ್ಸ್ಕರ್ : ವಿಮೆನ್ ಗೆಯ್ನ್

ಎ ಪ್ಲೇಸ್ ಇನ್ ಮೆಡಿಸಿನ್’ ...... 970

ಜೋಸ್ಟೀನ್ ಗಾರ್ಡರ್ : ‘ಸೋಫೀಸ್ ವರ್ಲ್ಡ್ ...... 976

ಗೇ ಟೇಲೀಸ್ : ‘ದಿ ಕಿಂಗ್ಡಮ್ ಅಂಡ್ ದಿ ಪವರ್’ ...... 980

ಫ್ರಿಟ್ಯಾಫ್ ಕಾಪ್ರ : ‘ಆನ್ಕಾಮನ್ ವಿಸ್ಡಮ್’ ...... 985

ಜಾನ್ ರಸ್ಕಿನ್ : ‘ಅನ್ಟು ದಿಸ್ ಲಾಸ್ಟ್’...... 995

ಪಾಶ್ಚಾತ್ಯ ಸಾಹಿತ್ಯ ವಿಹಾರ

1. ಷೇಕ್ಸ್ಪಿಯರ್ ಹುಟ್ಟಿ 400 ವರ್ಷಗಳಾದವು ;

ಆದರೆ, ನನಗೇಕೆ ಅವನ ಗೊಡವೆ ?

‘ಷೇಕ್ಸ್ಪಿಯರ್’ ಹುಟ್ಟಿ ನಾಲ್ಕುನೂರು ವರ್ಷಗಳಾದುವಂತೆ. ಆದರೆ ನನಗೇನು?

‘ಷೇಕ್ಸ್ಪಿಯರ್’ ಎಂಬುವನಿದ್ದ-ಎನ್ನುವುದನ್ನೇ ಎಷ್ಟೋ ಮಂದಿ ಸಂದೇಹಿಸುತ್ತಿಲ್ಲವೆ? ಅವನೇನು ನನ್ನ ದೇಶದವನೆ, ನನ್ನ ಭಾಷೆಯವನೆ? ನಮ್ಮ ದೇಶದಲ್ಲಿ ಹಿರಿಯ ಸಾಹಿತಿಗಳು ಆಗಿಹೋಗಿಲ್ಲವೇ? ಇಷ್ಟಾಗಿಯೂ ಆತ ಬರೆದುದು ನನ್ನ ನಾಡಿಗೆ ಸಂಕೋಲೆಯನ್ನು ತೊಡಿಸಿದ್ದವರ ಭಾಷೆಯಲ್ಲಿ. ಅವನ ಭಾಷೆಯನ್ನು ಕಲಿಯುವುದು, ಅವನ ವಿಷಯ ಮಾತನಾಡುವುದು ಪ್ರತಿಷ್ಠೆಯ ಚಿಹ್ನೆಯಾಗಿದ್ದ ಕಾಲ ಒಂದಿತ್ತು. ಈಗೇಕೆ ಮಾನಸಿಕ ಗುಲಾಮಗಿರಿ ನನಗೆ? ಅವನು ಹುಟ್ಟಿ ನಾಲ್ಕುನೂರು ವರ್ಷಗಳಾಯಿತೆಂದು ಈಗ ಅವನ ಕೃತಿಗಳನ್ನು ನಾನೇಕೆ ಓದಲಿ? ಪರೀಕ್ಷೆಗೆಂದು ಬಲಾತ್ಕಾರವಾಗಿ ಓದಿದುದು ಸಾಲದೆ? ಒಂದು ಸಾಲು ನೆನಪಿದೆ. “As You Like It” ನಲ್ಲಿ ರಾಜಕುಮಾರಿ ರಾತ್ರಿ ತಪ್ಪಿಸಿಕೊಂಡಳೆಂಬುದನ್ನು ಬೆಳಗ್ಗೆ ಸೇವಕರು ಕಂಡರಂತೆ. “They found the bed untreasured of their istress.” ಎಲ, ಈ untreasured ಎನ್ನುವ ಪದ ಬೇರೆಲ್ಲಿಯೂ ಯಾರೂ ಬಳಸಿದುದನ್ನು ಕಾಣೆ. ನನ್ನ ನಿಘಂಟಿನಲ್ಲಿಯೂ ಸಿಕ್ಕದೀ ಪದ, ಆದರೆ ಎಂತಹ ಟಂಕಸಾಲೆಯಿಂದ ಬಂದ ನಾಣ್ಯ ಇದು! ಒಂದು ಮಾತಿನಲ್ಲಿ ರಾಜಕುಮಾರಿಯ ರೂಪಶ್ರೀಯನ್ನು ಹೇಗೆ ವರ್ಣಿಸಿಬಿಟ್ಟಿದ್ದಾನೆ! ಸಿನಿಮಾದಲ್ಲಿ ರೋಮಿಯೋ ಆಡಿದ ಮಾತುಗಳೂ ನೆನಪಿನಲ್ಲಿ ಉಳಿದಿವೆ: “But soft, what light through yonder window breaks ! It is the east and Juliet is the sun!” ಆ ಮಾತುಗಳನ್ನು ಅಂದು ಕೇಳಿದಾಗ ರೋಮಾಂಚನವಾದಂತೆ ಇಂದೂ ನೆನೆದರೆ ರೋಮಾಂಚನವಾಗುತ್ತದೆ. ‘ಡಬಲ್ ಲೈಫ್’ ಚಿತ್ರದಲ್ಲಿ ಒಥೆಲೋ ನಾಟಕದ ಭಾಗಗಳನ್ನು ತೋರಿಸುತ್ತಾರಲ್ಲ, ಏನು ಮಾತದು ಒಥೆಲೋವಿನದು. ತಪ್ಪು ಸಂಶಯದಿಂದ ಪರಿಶುದ್ಧತೆಯ ಮೂರ್ತಿಯಾದ ಹೆಂಡತಿಯನ್ನು ಕೊಂದಮೇಲೆ: “cold, cold, my girl! even like thy chastity!” ಎಂಟೇ ಶಬ್ದಗಳು, ಹೇಗೆ ಕರುಳು ಕತ್ತರಿಸುತ್ತವೆ! ಅವನ ಕೊನೆಯ ಭಾಷಾಣವೂ “Soft you, a word or two, before you go” ಎಂದು ಪ್ರಾರಂಭವಾಗುವುದು! ಅವನ ಭಾಷೆ, ನುಗ್ಗಿಬರುವ ಜ್ವಾಲೆಯ ಪ್ರವಾಹವನ್ನು ಇನ್ನೂ ಅದುಮಿ ಹಿಡಿದಿರುವ ಅಗ್ನಿ ಪರ್ವತದ ಶಿಖರದಂತೆ, ಎಷ್ಟು ಸರಳವಾದ ಮಾತು, ಆದರೆ ಹೇಗೆ ಹೃದಯವನ್ನು ಹಿಂಡುತ್ತದೆ! ನನ್ನ ಪಠ್ಯ ಪುಸ್ತಕವಾಗಿದ್ದ ‘ಲಿಯರ್’ನಲ್ಲಿ ಕೆಲವು ಪಂಕ್ತಿಗಳು ನನಗೆ ಅರಿವಿಲ್ಲದಂತೆ ಕಂಠ ಪಾಠವಾಗಲಿಲ್ಲವೇ? ಎಂಬತ್ತನ್ನು ದಾಟಿದಮೇಲೆ ಅನುಭವದ ನಿಷ್ಠುರವಾದ, ನಿರ್ದಯವಾದ ಶಾಲೆಯಲ್ಲಿ ನೆಚ್ಚಿದ ಮಕ್ಕಳ ಕೃತಘ್ನತೆಯನ್ನುಂಡು ಪಾಠ ಕಲಿತ ಮುದುಕ ಸತ್ತ ಮಗಳ ಹೆಣವನ್ನು ಕೈಯಲ್ಲಿ ಹೊತ್ತು, ಮೂಕರಾಗಿ ನೋಡುತ್ತಿರುವ ಪರಿವಾರಕ್ಕೆ ಹೇಳುತ್ತಾನಲ್ಲ:

No, no, no life!

Why should a dog, a horse, a rat, have life,

And thou no breath at all?

Thou’lt come no more,

Never, never, never, never never !

Pray you, undo this button: thank you, sir ;

Do you see this? Look on her,

Look, her lips,

Look there ! Look there!

ಎಲ ಎಲ ಷೇಕ್ಸ್ಪಿಯರ್ ಭಾಷಾ ಚಕ್ರವರ್ತಿ ಎಂದು ಹೊಗಳುತ್ತಾರೆ, ಒಂದಾದರೂ ಕಷ್ಟವಾದ ಪದವಿಲ್ಲ ಇಲ್ಲಿ! ತಾನು ಹುಲ್ಲಿನ ತುಂಡನ್ನೂ ಕೊಡದೆ ಓಡಿಸಿದ ಮಗಳೇ ತನಗೆ ಆಧಾರವಾದಳು. ಈಗ ತನ್ನ ಕಣ್ಣ ಮುಂದೆಯೆ ಅವಳ ಸಾವು, ತನ್ನ ಕೈಯ್ಯಲ್ಲಿ ಅವಳ ಶವ! ನಾಯಿಗೆ, ಕುದುರೆಗೆ, ಇಲಿಗೆ ಜೀವವುಂಟು, ನಿನಗೇಕಿಲ್ಲ ಮಗಳೇ ಎಂದು ಹಂಬಲಿಸುತ್ತಾನೆ ಮುದುಕ. ಒಟ್ಟು ಏಳೇ ಪಂಕ್ತಿ. ಇನ್ನೂ ಒಂದು ಮೂವತ್ತು ಪಂಕ್ತಿಯನ್ನಾದರೂ ಬರೆದು ಮುದುಕನ ಯಾತನೆಯನ್ನು ಬಿತ್ತರಿಸಬಹುದಾಗಿತ್ತಲ್ಲ! ಉಹುಂ, ‘never’ ಎನ್ನುವ ಮಾತೇಕೆ? ಕೈಯ್ಯಲ್ಲಿ ಹೆಣವಿದೆ, ಗುಂಡಿಬಿಚ್ಚಿಕೊಳ್ಳಲಾರ ಇನ್ನೊಬ್ಬರಿಗೆ ಹೇಳುತ್ತಾನೆ. ಆದರೆ ಆ ಮಾತೇಕೆ? ಶೋಕದಿಂದ ತುಂಬಿದ ಹೃದಯ ದೊಡ್ಡದಾಗುತ್ತಿದೆ. ಎದೆಯನ್ನು ಸೀಳಿ, ಅಂಗಿಯನ್ನು ಹರಿದು ಹೊರಕ್ಕೆ ಬರುತ್ತದೆ ಎನ್ನಿಸಿತೇನೋ ಮುದುಕನಿಗೆ! ‘Look there, look there’ ಮಗಳಿಗೆ ಮತ್ತೆ ಉಸಿರು ಬಂದಿದೆ. ತುಟಿ ಅಲ್ಲಾಡುತ್ತದೆ ಎಂಬ ಭ್ರಾಂತಿ- ‘never, never, never, never, never’ ಎಂದ ಮುದುಕನಿಗೆ! ಅದೂ ತಾನೇ ಸಾವಿನ ಬಾಯಲ್ಲಿರುವವನಿಗೆ! ಹುಂ, ಹೀಗೆ ಮಗಳಿಗೆ ಪ್ರಾಣ ಮರಳಿತು ಎಂಬ ಭ್ರಾಂತಿಯಲ್ಲಿ ಮುದುಕ ಕಣ್ಣು ಮುಚ್ಚಿದುದೇ ಒಳ್ಳೆಯದಾಯಿತೇನೊ!!

ಛೆ, ಛೆ, ಏನಿದು? ಷೇಕ್ಸ್ಪಿನಿಗೂ ನನಗೂ ಏನು ಸಂಬಂಧ- What is he to Hecuba or Hecuba to him? ಛೆ, ಮತ್ತೆ ಷೇಕ್ಸ್ಪಿಯರ್ನ ಪಂಕ್ತಿಯೇ ಬಾಯಿಗೆ ಬಂದಿತೆ! - ಏನು ಸಂಬಂಧ ಎಂದುಕೊಳ್ಳುತ್ತಲೇ ಅವನ ಭಾಷೆಗೆ ಮಾರು ಹೋದೆನಲ್ಲ ನಾನು! ಇದೇ ಇರಬಹುದು ಷೇಕ್ಸ್ಪಿಯರ್ನ ಆರಾಧಕರು ಆವನ ಕಾವ್ಯದ ಮಾಂತ್ರಿಕತೆ ಎನ್ನುವುದು! ಈ ಮನುಷ್ಯ ಬರೆದನೆಂದರೆ ಚಿತ್ರವೇ, ಚಿತ್ರಗಳಿಲ್ಲದೆ ಬರೆಯುವುದಕ್ಕೇ ಆಗದೇನೊ ಇವನಿಗೆ! ತಂದೆ ಮಗಳಿಗೆ, ‘ನೋಡು, ಯಾರು ಬರುತ್ತಿದ್ದಾರೆ’ ಎನ್ನಬೇಕಾದರೆ ಎಂತಹ ಭಾಷೆ: “The fringed curtains of thine eye advance;” ತಪ್ಪು ದಾರಿ ತುಳಿದೆ ಎನ್ನುವ ಮನುಷ್ಯನ ಬಾಯಲ್ಲಿ ಬರುವ ಮಾತು. “I have given my eternal jewel to the common enemy of man”; ಸಂತೋಷದಿಂದ ಪಾಪಗಳನ್ನು ಮಾಡುತ್ತಲೇ ನಗರಕದ ಉರಿಯನ್ನು ತಲುಪುತ್ತೇವೆ ಎಂದು ಒಬ್ಬ ಸೇವಕ ಹೇಳುವ ರೀತಿ “(the persons) who go the primrose path to the ever lasting bonfare! ಕಾಲಕಳೆದರೂ ಪ್ರೇಮ ಬದಲಾಗದೆನ್ನಲು ಮಾತು: Love is not time’s fool”!

ಈ ಮಾಂತ್ರಿಕತೆ ಹಾಗಿರಲಿ. ಷೇಕ್ಸ್ಪಿಯರನನ್ನು ಓದಿ ನನಗೆ ಬೇರೇನು ಫಲವಾದೀತು? ಅವನು ಯಾವ ಜೀವನ ಸಿದ್ಧಾಂತವನ್ನೂ ಸ್ಪಷ್ಟವಾಗಿ ಕೊಡಲೊಲ್ಲ. ದೇವರು_ಆತ್ಮಸಾವು ಜನನಗಳ ವಿಷಯದಲ್ಲಿ ಯಾವ ಸಿದ್ಧಾಂತವನ್ನು ಪ್ರತಿಪಾದಿಸಲೊಲ್ಲ. ಅವನ ಜೀವನದರ್ಶನ ಏನೆಂದು ಯಾವ ಒಂದು ಕೃತಿಯಲ್ಲಿಯೂ ಸಂಪೂರ್ಣವಾಗಿ ನಿರೂಪಿಸಿಲ್ಲವಂತೆ. ಅವನ ಸುಪ್ರಸಿದ್ಧ ಕೃತಿಗಳೋ ವಿಷಾದಾಂತ, ರಾಕ್ಷಸೀ ಶಕ್ತಿಗಳಿಗೆ ಮಣಿದು ನಾಯಕ ಹತನಾಗುತ್ತಾನೆ. ಈ ನೈರಾಶ್ಯದ ಔತಣ ನನಗೆಇನ್ನೂ ತರುಣನಾದ, ಜೀವನವನ್ನು ಧೈರ್ಯದಿಂದ ಆತ್ಮವಿಶ್ವಾಸದಿಂದ ಎದುರಿಸಬೇಕಾದ ನನಗೆ ಏಕೆ ಬೇಕು?

‘ಲಿಯರ್’ನ್ನು ಓದಿದಾಗ, ‘ಹ್ಯಾಮ್ಲಲೆಟ್’ ಚಿತ್ರ ನೋಡಿದಾಗ, ‘ಮರ್ಚೆಂಟ್ ಆಫ್ ವೆನಿಸ್’ ಓದಿದಾಗ, ‘ಎಲ್ಲರೂ ಫಾಲ್ಸ್ಟಾಫ್, ಫಾಲ್ಸ್ಟಾಫ್ ಎನ್ನುತ್ತಾರಲ್ಲ, ಇವನು ಎಂತಹ ವ್ಯಕ್ತಿ’ ಎಂದು ಕುತೂಹಲ ಕೆರಳಿ ‘ನಾಲ್ಕನೆಯ ಹೆನ್ರಿ,’ ‘ಐದನೆಯ ಹೆನ್ರಿ’ ಓದಿದಾಗ, ‘ಡಬಲ್ ಲೈಫ್’ನಲ್ಲಿ ಒಥೆಲೊ ನಾಟಕದ ಭಾಗಗಳನ್ನು ನೋಡಿದಾಗ, ನಿರಾಶೆ ಮನಸ್ಸನ್ನು ಮುತ್ತಿದಂತೆ ಭಾಸವಾಗಲ್ಲಿಲ್ಲವಲ್ಲ? ರೋಮಿಯೋ ಮತ್ತು ಜೂಲಿಯೆಟ್ ಚಿತ್ರ ನೋಡಿದಾಗಲೂ ಹಾಗೆನಿಸಲಿಲ್ಲ. ಈ ‘ರೋಮಿಯೊ ಮತ್ತು ಜೂಲಿಯೆಟ್’ನಲ್ಲಿ ಬರುವ ‘ನರ್ಸ್’, ಎಂತಹ ಜೀವಂತ ವ್ಯಕ್ತಿ ಅವಳು! ಆ ಫಾಲ್ಸ್ಟಾಫ್ _ ಮದ್ಯ, ಹೆಂಗಸು ಎಂದೇ ಜಪಿಸುವ, ಬೊಜ್ಜು ಹೊಟ್ಟೆಯ, ಹೊಲಸುಬಾಯಿಯ ಮುದುಕ, ಷೇಕ್ಸ್ಪಿಯರ್ ಅವನ ಕೆಟ್ಟತನವನ್ನೇನೂ ಬಚ್ಚಿಡುವುದಿಲ್ಲ, ಆದರೂ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತಾನಲ್ಲ ಈ ಹೇಡಿ, ಸುಳ್ಳುಗಾರ! ‘ಲಿಯರ್’ನ ವಿದೂಷಕನೊ, ಹೇಗೆ ನಮ್ಮ ಮರುಕವನ್ನು ಸಂಪಾದಿಸಿ ಬಿಡುತ್ತಾನೆ! ಇನ್ನು ಆ ನಿಷ್ಕರುಣಿ ಷೈಲಾಕ್ ಒಂದು ಪೌಂಡು ಮಾಂಸವೇ ಬೇಕೆಂದು ಹಠ ಹಿಡಿದು, ಶಾಸನಬದ್ಧವಾಗಿ ಕೊಲೆ ಮಾಡಲೆಳಸುವ ಚತುರ ಆವನನ್ನು ಕಂಡರೂ ದ್ವೇಷ ಬರುವುದಿಲ್ಲ. ಹುಚ್ಚನ್ನು ರಂಗಭೂಮಿಯ ಮೇಲೆ ತೋರಿಸುವುದು ಕಷ್ಟ ಎನ್ನುತ್ತಾರೆ. ಭೀಭತ್ಸಕ್ಕೆಡೆಯಾಗುತ್ತದೆ ಎನ್ನುತ್ತಾರೆ. ಆದರೆ, ಅಯ್ಯೋ ಪಾಪ, ಹುಚ್ಚಿ ಒಫಿಲಿಯ! ‘ಟೆಂಪೆಸ್ಟ್’ನಲ್ಲಿ ನಾಗರಿಕತೆಯ ಗಂಧವಿಲ್ಲದ ಮೃಗಾವಸ್ಥೆಯ ಕ್ಯಾಲಿಬನ್ನನ್ನು ಚಿತ್ರಿಸಿಯೂ, ಅವನೂ ಕೆಲವರು ‘ನಾಗರಿಕ’ ಮನುಷ್ಯರಿಗಿಂvಂ ಉತ್ತಮ ಎನ್ನಿಸುತ್ತಾನಂತೆ ಈ ಭೂಪ!

ಅಂದಹಾಗೆ, ಈಗ ಯೋಚಿಸಿದರೆ ತೋರುತ್ತದೆ. ಷೇಕ್ಸ್ಪಿನ ನಾಟಕ ಆಡಿದರೆ ಎರಡೂವರೆ, ಮೂರು ಗಂಟೆ ಮಾತ್ರ ತೆಗೆದುಕೊಳ್ಳುತ್ತದೆ, ಆದರೆ ಒಂದು ಆತ್ಮದ ಚರಿತ್ರೆಯನ್ನೇ ನಮ್ಮ ಮುಂದೆ ನಿರೂಪಿಸಿಬಿಡುತ್ತಾನಲ್ಲ ಈತ! ಭವ್ಯವಾದ

ಪಾತ್ರಗಳನ್ನು ಎಷ್ಟೋ ನಾಟಕಗಳಲ್ಲಿ ನೋಡಿದ್ದೇನೆ. ಆದರೆ ಹೀಗೆ ಹೊರಗಿನ ಶಕ್ತಿಗಳ ಒತ್ತಡದಿಂದ ಸ್ವಭಾವ ಪರಿವರ್ತನೆ ಹೊಂದುವುದನ್ನು, ಒಂದು ಚೇತನದ ಇತಿವೃತ್ತವನ್ನು ನಾನು ಕಂಡ ನಾಟಕಗಳಲ್ಲೆಲ್ಲ ಷೇಕ್ಸ್ಪಿಯರ್ ಎಷ್ಟು ಹೃದಯಸ್ಪರ್ಶಿಯಾಗಿ, ಹೆಜ್ಜೆ ಹೆಜ್ಜೆಯಾಗಿ ಚಿತ್ರಿಸುತ್ತಾನೆ! ಮತ್ತೆ ಮತ್ತೆ ಈ ಸಾಹಸವನ್ನು ಹೇಗೆ ಯಶಸ್ವಿಯಾಗಿ ಪ್ರಯತ್ನಿಸುತ್ತಾನೆ! ಮೊದಲು ನಾವು ಕಾಣುವ ರೋಮಿಯೋಗೂ ಕೊನೆಯಲ್ಲಿ ಪ್ರೇಮಕ್ಕಾಗಿ ಪ್ರಾಣತ್ಯಾಗ ಮಾಡುವ ರೋಮಿಯೋಗೂ ಎಷ್ಟು ವ್ಯತ್ಯಾಸ ! ಮಾತಿಗೆ ಸಿಡಿದೆದ್ದು ಗರ್ಜಿಸುವ ಅಹಂಕಾರಿ ಲಿಯರ್ ಎಲ್ಲಿ, “look there, look there” ಎನ್ನುತ್ತಾ ಪ್ರಾಣಬಿಡುವ ಲಿಯರ್ ಎಲ್ಲಿ? ಅಲ್ಲದೆ ಷೇಕ್ಸ್ಪಿಯರಿನ ಜಗತ್ತಿನಲ್ಲಿದ್ದಾಗ ಮಾನವನ ಒಳ್ಳೆಯತನ ಪರಿಮಳವನ್ನು ಬೀರುತ್ತಿದೆಯೇ ಎನ್ನುವಂತೆ ಭಾಸವಾಗುತ್ತದೆ. ಸಾಮಾನ್ಯವಾಗಿ ಸಜ್ಜನರ ಚಿತ್ರಗಳು ನೀರಸ ಚಿತ್ರಗಳು. ಆದರೆ ಷೇಕ್ಸ್ಪಿಯರ್ನ ಮಹಾಪಾತ್ರಗಳ ಸಾಮಿಪ್ಯದಲ್ಲಿ ಏನೋ ಒಂದು ಸಂತೋಷ, ಒಂದು ಹೆಮ್ಮೆ ಅನುಭವವಾಗುತ್ತದೆಯಲ್ಲವೇ? ಬ್ರೂಟಸ್, ಹ್ಯಾಮ್ಲೆಟ್, ರೋಸಲಿಂಡ್, ಕೆಂಟ್ ಇಂತಹವರ ಇರವಿನಿಂದಲೇ ಮಾನವಕುಲಕ್ಕೆ ಕೀರ್ತಿ ಎನ್ನಿಸುವುದಿಲ್ಲವೆ ? ಪರಿಪೂರ್ಣರಲ್ಲದಿದ್ದರೂ ಇವರಂತಹವರು ಇರುವ ಜಗತ್ತು ಶ್ರೀಮಂತ ಜಗತ್ತು ಎನ್ನಿಸುವುದಿಲ್ಲವೆ? ಆಂಟೊನಿ, ರೋಮಿಯೊ, ಲಿಯರ್ರಂತೆ ಕಷ್ಟಪಡುವವರನ್ನು, ಬ್ರೂಟಸ್, ಒಥೆಲೊ ಅವರಂತೆ ತಮ್ಮ ದೋಷಗಳಿಂದಲೇ ದುಃಖಕ್ಕೆ ಬಲಿಯಾಗುವವರನ್ನು ನೋಡುತ್ತಿರುವಾಗಲೂ ಮನುಷ್ಯನ ಹಿರಿಮೆಯಲ್ಲಿ, ಒಳ್ಳೆಯತನದ ಸೊಗಸು, ಶ್ರೀಮಂತಿಕೆಗಳಲ್ಲಿ ಹೊಸ ವಿಶ್ವಾಸ ಬರುವುದಿಲ್ಲವೆ?

ದುರಹಂಕಾರಿ ಮನುಷ್ಯ ಅರೆಕ್ಷಣದ ಅಧಿಕಾರದಿಂದ ಮತ್ತನಾಗಿ ರೇಗಿದ ಕೋತಿಯಂತೆ ಆಡಿದರೆ, ದೇವತೆಗಳು ನಕ್ಕರೇನಾಶ್ಚರ್ಯ! ಆದರೆ ಷೇಕ್ಸ್ಪಿಯರ್ನ ಚಿತ್ರದಲ್ಲಿ ದೇವತೆಗಳು ಕಣ್ಣೀರಿಡುತ್ತಾರೆ. ಆ ಕನಿಕರದಿಂದಲೇ ಅವರು ದೇವತೆಗಳೆನ್ನಿಸಿಕೊಳ್ಳುವುದು! ಷೇಕ್ಸ್ಪಿಯರ್ನದೂ ಅದೇ ಸ್ವರ್ಗ ಲೋಕದ ಪಾಶ್ಚಾತ್ಯ ಸಾಹಿತ್ಯ ವಿಹಾರ 5 ಅನುಕಂಪವೇನೋ! ಅದೇ ಅನುಕಂಪದ ಸೋಂಕು ನಮ್ಮ ರಕ್ತವನ್ನೂ ಹೊಕ್ಕುಬಿಡುತ್ತದೆ ಅವನ ಜಗತ್ತನ್ನು ನಾವು ಪ್ರವೇಶಿಸಿದರೆ! ಹೂಂ, ಅಷ್ಟಾದರೂ ಆಗಲಿ. ಅವನು ಯಾವ ಜೀವನ ಸಿದ್ಧಾಂತವನ್ನೂ ಪೊಟ್ಟಣಕಟ್ಟಿ ನಮ್ಮ ಜೇಬಿನಲ್ಲಿಡದಿದ್ದರೂ ಬೇಡ, ಸೊನ್ನೆಯೇ ರೂಪತಾಳಿ ಬಂದಂತಹ ವ್ಯಕ್ತಿತ್ವವೇ ಇಲ್ಲದ ಮನುಷ್ಯರಿಂದ ಹಿಡಿದು, ಪ್ರೇಮಕ್ಕಾಗಿ ಸಾಮ್ರಾಜ್ಯವನ್ನೇ ಬಿಸುಟ ಆಂಟನಿ, ತಾರೆಗಣ್ಣಿನ ಆದರ್ಶಜೀವಿ ಹ್ಯಾಮ್ಲೆಟ್ರವರೆಗೆ ವೈವಿಧ್ಯಮಯವಾದ ಎಂದಿಗೂ ಪೂರ್ಣವಾಗಿ ಬಿಡಿಸಲಾರದೆ ಚಿರಸಮಸ್ಯೆಯೆಂದೇ ಹೊಸ ಆಕರ್ಷಣೆ ಪಡೆದ ಮಾನವಸ್ವಭಾವದ ಎದೆ ನಡುಗಿಸುವ ಪಾತಾಳಗಳು, ರೋಮಾಂಚನಗೊಳಿಸುವ, ಸೂರ್ಯನ ಕಿರಣಗಳ ಚುಂಬನದಿಂದ ಬೆಳಗುವ ಶಿಖರಗಳು ಎಲ್ಲವನ್ನೂ ತೋರಿಸಿ ಕಲ್ಪನೆ, ಅನುಕಂಪಗಳ ಪಾರ್ಶ್ವವಾಯುವನ್ನು ತೊಲಗಿಸುವ ಈ ಮಹಾನುಭಾವ ಯಾವ ದೇಶದವನಾದರೇನು, ಅವನ ನಿಜವಾದ ಹೆಸರು, ಜೀವನದ ವಿವರಗಳು ಏನಾದರೇನು, ಈ ಎಲ್ಲ ಕೃತಿಗಳನ್ನಿತ್ತ ಆ ಮಹಾಪ್ರತಿಭೆಗೆ ನಮೋ !

.

2. ಷೇಕ್ಸ್ಪಿಯರನ ಫಾಲ್ಸ್ಟಾಫ್

1

ಷೇಕ್ಸ್ಪಿಯರನ ದುರಂತ ನಾಟಕಗಳಷ್ಟೇ ತಿಳಿದಿರುವವರಿಗೆ ಆವನ ಪ್ರತಿಭೆಯ ಭವ್ಯತೆಯ ಪೂರ್ಣ ಪರಿಚಯವಾಗಲಾರದು. ಇಂಗ್ಲೆಂಡಿನ ಹೊರಗೆ ಸಾಹಿತ್ಯಾಭಿಮಾನಿಗಳಿಗೆ ಷೇಕ್ಸ್ಪಿಯರ್ ದುರಂತ ನಾಟಕಗಳಿಂದಲೇ ಬಹುಮಟ್ಟಿಗೆ ಪರಿಚಿತನಾಗಿದ್ದರೂ, ಹ್ಯಾಮ್ಲೆಟ್, ಒಥೆಲೊ, ಲಿಯರ್, ಮೆಕ್ಬೆತ್, ಲೇಡಿ ಮೆಕ್ಬೆತ್, ಹೊರೇಷಿಯೊ, (‘ಲಿಯರ್’ ನಾಟಕದ) ವಿದೂಷಕ, ಅಯಾಗೊ, ಡೆಸ್ಡಿಮೋನ, ಪಲೋನಿಯಸ್, ಒಫಿಲಿಯ, ‘ಹ್ಯಾಮ್ಲೆಟ್’ ನಾಟಕದಲ್ಲಿನ ಗೋರಿ ಅಗೆಯುವವರು, ಈ ಪಾತ್ರಗಳಿಂದ ಷೇಕ್ಸ್ಪಿನ ಬಹುಮುಖ ಪ್ರತಿಭೆಯ ಪರಿಚಯ ತಕ್ಕಷ್ಟು ದೊರೆಯುವುದಾದರೂ ಅವನ ಪಾತ್ರ ನಿರೂಪಣೆಯ ಸೊಗಸಿನ ಅರಿವು ಇದಿಷ್ಟರಿಂದ ಪೂರ್ಣವಾಗುವುದಿಲ್ಲ. ರೋಮಿಯೊ, ಜೂಲಿಯೆಟ್, ಬ್ರೂಟಸ್ ಮೊದಲಾದವರೆಲ್ಲ ಮಹಾ ದುರಂತ ನಾಟಕಗಳ ರಚನೆಗೆ ಮೊದಲೇ ಜನ್ಮ ತಾಳಿದರು. ದುರಂತ ನಾಟಕಗಳ ಹೊರಗಿನ ಷೇಕ್ಸ್ಪಿಯರ್ ಜಗತ್ತಿನ ನಿವಾಸಿಗಳಲ್ಲಿ ಅದ್ಭುತ ಸೃಷ್ಟಿಗಳೆನ್ನಿಸಿಕೊಳ್ಳುವವರು ಎಷ್ಟು ಮಂದಿ! ರೋಸಲಿಂಡ್, ಷೈಲಾಕ್, ಪೋರ್ಷಿಯ, ಪಕ್, ಬಾಟಮ್, ಪರ್ಡಿಟ, ಹರ್ಮಿರ್ಯೊ, ಏರಿಯಲ್, ಕ್ಯಾಲಿಬನ್, ಮಿರಾಂಡ, ಎರಡನೆಯ ರಿಚರ್ಡ್, ಮೂರನೆಯ ರಿಚರ್ಡ್, ವಿಯೊಲ, ಮಲ್ವೊಲಿಯೊ_ಒಬ್ಬರ ನಂತರ ಮತ್ತೊಬ್ಬರು ಗಮನವನ್ನು ಸೆಳೆಯುತ್ತಾರೆ, ದುರಂತ ನಾಟಕಗಳನ್ನುಳಿದ ಈ ಜಗತ್ತಿನಲ್ಲಿ ಜನ್ಮತಾಳಿದ ಪಾತ್ರಗಳು. ದುರಂತ ನಾಟಕಗಳ ಅತ್ಯುನ್ನತ ಸೃಷ್ಟಿಗಳಲ್ಲೊಂದಾದ ಹ್ಯಾಮ್ಲೆಟ್ ಎಷ್ಟೊ ಅಷ್ಟೂ ಆಸಕ್ತಿಯನ್ನುಂಟು ಮಾಡುವ ಜಟಿಲವಾದ ಪಾತ್ರ-ಫಾಲ್ಸ್ಟಾಫ್. ಗಾಂಭೀರ್ಯ, ವಿಚಾರಪರತೆ, ಸಂಸ್ಕಾರಗಳೊಂದಿಗೆ ಕಿರಾತ ಸ್ವಭಾವದ ಛಾಯೆಯನ್ನು ಹೊಂದಿದ ಪಾತ್ರ ಹ್ಯಾಮ್ಲೆಟ್ನನ್ನು ಸೃಷ್ಟಿಸಿದ ಪ್ರತಿಭೆಯೇ ಫಾಲ್ಸ್ಟಾಫನನ್ನೂ ಸೃಷ್ಟಿಸಿತೆನ್ನುವುದು ನಾಟಕಕಾರ ಷೇಕ್ಸ್ಪಿಯರ್ನ ಮಾನವ ಸ್ವಭಾವದ ಅರಿವಿಗೆ ಕಲ್ಪನೆಯ ಶ್ರೀಮಂತಿಕೆಗೆ ಪ್ರತಿಭೆಯ ಬಹುಮುಖ ಚಾತುರ್ಯಕ್ಕೆ ಸಾಕ್ಷಿ.

2

ನಾವು ಫಾಲ್ಸ್ಟಾಫನನ್ನು ಮೊದಲು ಕಾಣುವುದು “ನಾಲ್ಕನೆಯ ಹೆನ್ರಿ” ನಾಟಕದ ಮೊದಲನೆಯ ಭಾಗದಲ್ಲಿ. ಮೊದಲನೆಯ ಭಾಗ, ಎರಡನೆಯ ಭಾಗ ಎರಡನ್ನೂ ಬರೆಯಬೇಕೆಂದು ಷೇಕ್ಸ್ಪಿಯರ್ ಮೊದಲೇ ಯೋಚಿಸಿದ್ದನೆ ಅಥವ ಮೊದಲನೆಯ ಭಾಗವನ್ನು ಬರೆದು ಮುಗಿಸಿದ ನಂತರವೋ ಅಥವ ಅದರ ಬಹು ಭಾಗ ಮುಗಿದ ಮೇಲೋ ಕವಿ ಎರಡನೆಯ ಭಾಗವನ್ನು ಬರೆಯುವ ಯೋಚನೆ ಮಾಡಿದನೊ ಎನ್ನುವುದು ವಾದಗ್ರಸ್ತವಾದ ವಿಷಯ. ಒಟ್ಟಿನಲ್ಲಿ ಎರಡು ನಾಟಕಗಳನ್ನೂ ಓದಿ ನೋಡಿದಾಗ ಷೇಕ್ಸ್ಪಿಯರ್ ಮೊದಲಿನಿಂದಲೇ ಎರಡು ಭಾಗಗಳನ್ನು ಬರೆಯಲು ಉದ್ದೇಶಿಸಿದ್ದ, ಒಂದು ಭಾಗದಲ್ಲಿ ತನ್ನ ಸಾಮಗ್ರಿ ಅಡಕವಾಗಲಾರದು, ತಾನು ಸೂಚಿಸಬೇಕೆಂದಿದ್ದ ದೃಷ್ಟಿ ಸ್ಪಷ್ಟವಾಗಲಾರದು, ತನ್ನ ಚಿತ್ರಕ್ಕೆ ಬಟ್ಟೆ ಸಾಲದು ಎಂದು ಎರಡು ಭಾಗಗಳನ್ನು ಬರೆಯಲು ನಿರ್ಧರಿಸಿದ್ದ ಎಂದು ತೋರುತ್ತದೆ.

‘ನಾಲ್ಕನೆಯ ಹೆನ್ರಿ’ಯ ಮೊದಲ ಭಾಗದಲ್ಲಿ ಪ್ರಾರಂಭದಲ್ಲಿಯೇ ಫಾಲ್ಸ್ಟಾಫನ ಪರಿಚಯವಾಗುತ್ತದೆ. ಇಂಗ್ಲೆಂಡಿನ ರಾಜನಾಗಿದ್ದ ಎರಡನೆಯ ರಿಚರ್ಡ್ನ ಸಂಬಂಧಿ ಬಾಲಿಂಗ್ಬ್ರೋಕ್ ರಾಜನನ್ನು ಸೋಲಿಸಿ, ನಾಲ್ಕನೆಯ ಹೆನ್ರಿ ಎನ್ನುವ ಹೆಸರಿನಿಂದ ಸಿಂಹಾಸನವನ್ನೇರಿದ್ದಾನೆ. ರಿಚರ್ಡ್ ಕೊಲೆಯಾಗಿ ಸಾವನ್ನಪ್ಪಿದ್ದಾನೆ. ಇದೆಲ್ಲವನ್ನೂ ಎರಡನೆಯ ರಿಚರ್ಡ್ನಲ್ಲಿಯೇ ಕಾಣುತ್ತೇವೆ. ಅದರ ಕೊನೆಯ ಭಾಗದಲ್ಲಿ ಸಿಂಹಾಸನವನ್ನೇರಿದ ಬಾಲಿಂಗ್ ಬ್ರೋಕ್ನಿಗೆ ಆಗಲೇ ಸಮಸ್ಯೆಗಳು ಪ್ರಾರಂಭವಾಗಿವೆ ಎನ್ನುವುದು ಸ್ಪಷ್ಟವಾಗಿದೆ. ಎರಡನೆಯ ಅಂಕದ ಮೂರನೆಯ ದೃಶ್ಯದಲ್ಲಿ ರಾಜ ತನ್ನ

ಮಗ (ಮುಂದಿನ ಐದನೆಯ ಹೆನ್ರಿ) ನನ್ನು ಕಂಡು ಮೂರು ತಿಂಗಳಾಯಿತೆಂದೂ, ಮದ್ಯದಂಗಡಿಗಳಲ್ಲಿ ಪುಂಡುಪೋಕರಿಗಳ ಸಹವಾಸದಲ್ಲಿದ್ದು ಪಹರೆಯವರನ್ನು ಸದೆಬಡಿಯುವುದು, ಪ್ರಯಾಣಿಕರನ್ನು ದರೋಡೆ ಮಾಡುವುದು ಇಂತಹ ಕೃತ್ಯಗಳಲ್ಲಿ ನೆರವಾಗುತ್ತಿರುವನೆಂದು ಸುದ್ದಿ ಬಂದಿದೆಯೆಂದೂ ದುಃಖಪಡುತ್ತಾನೆ. ತನ್ನ ಮಗನ ವಿಷಯವಾಗಿ ಖಚಿತವಾಗಿ ಸುದ್ದಿ ಹೇಳುವವರೇ ಇಲ್ಲವೆ ಎಂದು ಪರಿತಪಿಸುತ್ತಾನೆ. ಈ ಪುಂಡುಪೋಕರಿಗಳ ಗುಂಪಿನ ನಾಯಕ ಸರ್ ಜಾನ್ ಫಾಲ್ಸ್ಟಾಫ್. ಬಾರ್ಡಾಲ್ಫ್, ಪಾಯಿನ್ಸ್ ಮೊದಲಾದವರೆಲ್ಲ ಇದೇ ಪಟಾಲಂಗೆ ಸೇರಿದವರು.

“ನಾಲ್ಕನೆಯ ಹೆನ್ರಿ” ನಾಟಕದಲ್ಲಿ ಎರಡು ಜಗತ್ತುಗಳನ್ನು ಕಾಣುತ್ತೇವೆ. ಒಂದು ರಾಜನ ಆಸ್ಥಾನ, ಮತ್ತೊಂದು ಈ ಪಟಿಂಗರ ಲೋಕ. ಇವೆರಡನ್ನು ಸೇರಿಸುವ ಸೇತುವೆ ರಾಜಕುಮಾರ ಹೆನ್ರಿ. ಹುಟ್ಟಿನಿಂದ ಸಹಜವಾದ ಶೌರ್ಯದಿಂದ, ಜನ್ಮ ಸಹಜವಾದ ಸಾಮರ್ಥ್ಯದಿಂದ ಅವನು ಆಸ್ಥಾನಕ್ಕೆ ಸೇರಿದವನು. ಆದರೆ ಈಗ ಕಾಲಿಟ್ಟಿರುವುದು ಈ ಪಟಿಂಗರ ಪ್ರಪಂಚಕ್ಕೆ. ರಾಜಕುಮಾರನಾಳಿನ ರಾಜ_ತಮ್ಮೊಡನಿದ್ದಾನೆಂಬುದು ಈ ಪುಂಡರಿಗೆ ಹೆಮ್ಮೆಯ ಸಂಗತಿ. ಅವನು ಇವರ ಒಡನಾಡಿಯಾಗಿದ್ದಾನೆನ್ನುವುದು ರಾಜನಿಗೆ, ಅವನ ಜಗತ್ತಿನವರಿಗೆ ವಿಷಾದದ ಸಂಗತಿ. ಈ ಎರಡು ಜಗತ್ತುಗಳ ನಿರ್ಮಾಣದಲ್ಲಿ ಷೇಕ್ಸ್ಪಿಯರ್ ತನ್ನ ಕಾಲದ ನಾಟಕದ ಸಂಪ್ರದಾಯವನ್ನಸರಿಸುತ್ತಿದ್ದ ಎನ್ನಬಹುದು. ಅವನ ಕಾಲಕ್ಕೆ ಸ್ವಲ್ಪ ಮೊದಲು ಜನಪ್ರಿಯವಾಗಿದ್ದ ‘ಮೊರ್ಯಾಲಿಟಿ’ ಸಂಪ್ರದಾಯದ ನಾಟಕಗಳಲ್ಲಿ ನಾಯಕ ಕೆಟ್ಟಗುಣಗಳು ಮತ್ತು ಒಳ್ಳೆಯ ಗುಣಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ನಾಯಕ ಸಾಮಾನ್ಯವಾಗಿ ಘನತೆಯ ಮೂರ್ತಿ. ಇಲ್ಲಿಯೂ ಹಾಗೆಯೇ. ರಾಜ, ಆಸ್ಥಾನಿಕರು, ಹಾಟ್ಸ್ಪರ್ ಎನ್ನುವ ಯುವಕ, ನ್ಯಾಯಾಧೀಶಇವರೆಲ್ಲ ‘ಗೌರವ’ದ (Chivalry ‘ಷಿವಲ್ರಿ’) ಪ್ರಪಂಚದ ಪ್ರತಿನಿಧಿಗಳು; ಫಾಲ್ಸ್ಪಾಫ್, ಪಾಯಿನ್ಸ್ ಇವರೆಲ್ಲ ಹೇಡಿತನ, ಭಂಡತನಗಳ ಪ್ರತಿನಿಧಿಗಳು; ಫಾಲ್ಸ್ಪಾಫ್ ಈ ‘ಷಿವಲ್ರಿ’ಯ ಚೇತನದ ವೈಪರೀತ್ಯವನ್ನು ಪ್ರತಿಬಿಂಬಿಸುತ್ತಾನೆ. ಅವನನ್ನು ರಾಜಕುಮಾರ ಹೀಗೆ ವರ್ಣಿಸುತ್ತಾನೆ: ಬೆಳಗಿನ ಊಟಕ್ಕೆ ಮೊದಲು ಹಾಟ್ಸ್ಪರ್ ಆರೇಳು ಡಜನ್ ಸ್ಕಾಟರನ್ನು ಕೊಂದು ಮನೆಗೆ ಬಂದು ಕೈ ತೊಳೆಯುತ್ತ ಹೆಂಡತಿಗೆ ಹೇಳುತ್ತಾನಂತೆ, ‘ಥೂ, ಈ ಜೀವನ ತೀರ ಸಪ್ಪೆಯಾಯಿತು!’ ಎಂದು. ಆಕೆ “ಓ ನನ್ನ ಪ್ರಿಯ ಹೆನ್ರಿ, ಇವತ್ತು ಎಷ್ಟು ಮಂದಿಯನ್ನು ಕೊಂದೆ?” ಎಂದು ಕೇಳುತ್ತಾಳಂತೆ. ಅವನು, “ನನ್ನ ಕೆಂಗಂದು ಕುದುರೆಯ ಮೈಯ್ಯನ್ನು ತೊಳೆಯಿರಿ” ಎಂದು ಅಪ್ಪಣೆಮಾಡಿ, ಒಂದು ಗಂಟೆ ಬಿಟ್ಟುಕೊಂಡು, “ಒಂದು ಹದಿನಾಲ್ಕು ಜನ, ಅಷ್ಟೆಲೆಖ್ಖಕ್ಕೇ ಇಲ್ಲ, ಲೆಖ್ಖಕ್ಕೇ ಇಲ್ಲ” ಎನ್ನುತ್ತಾನಂತೆ. ಇವನ ನಡತೆ ‘ಷಿವಲ್ರಿ’ ಸಂಪ್ರದಾಯದ ವೈಪರೀತ್ಯ: ಗೌರವವೆಂದರೇನೆಂಬುದನ್ನೇ ¸ಂಚಿಷ್ಟವಾಗಿ ತಿಳಿಯದೆ ಆವೇಶದಿಂದ ಅದರ ಬೆನ್ನಟ್ಟುವ ಬಿಸಿರಕ್ತದ ತರುಣ. ತನ್ನ ಮಗ ಇಂತಹ ವೀರನಾಗಲಿಲ್ಲವಲ್ಲ ಎಂದು ನಾಲ್ಕನೆಯ ಹೆನ್ರಿ ಕೊರಗುತ್ತಾನೆ. ಈ ಪ್ರಪಂಚದ ವಿಪರ್ಯಾಸ ಮದ್ಯದಂಗಡಿಯ ಜಗತ್ತು. ‘ಮೊರ್ಯಾಲಿಟಿ’ ನಾಟಕಗಳ ಸಂಪ್ರದಾಯದಂತೆ ಇಲ್ಲಿಯೂ ಎರಡು ಜಗತ್ತುಗಳು ಸ್ಪರ್ಧಿಸುತ್ತವೆ, ಇವುಗಳ ಮಧ್ಯದ ಪಣ ರಾಜಕುಮಾರ ಹೆನ್ರಿ. ‘ಷಿವಲ್ರಿ’ ಜಗತ್ತಿನ ಯೋಗ್ಯ ಪ್ರತಿನಿಧಿ ಎಂದರೆ ನ್ಯಾಯಾಧೀಶ. ಗಾಂಭೀರ್ಯ, ಕರ್ತವ್ಯನಿಷ್ಠೆ ಇವುಗಳ ಮೂರ್ತಿ ಈತ. ರಾಜಕುಮಾರ ಹುಟ್ಟಿನಿಂದ ಈ ಜಗತ್ತಿಗೆ ಸೇರಿದವನು. ತಾರುಣ್ಯದ ಮೊದಲಿನಲ್ಲಿ ಪುಂಡುಪೋಕರಿಗಳ ಜಗತ್ತಿಗೆ ಒಲಿಯುತ್ತಾನೆ. ಉದ್ಧಟತನದಿಂದ ನ್ಯಾಯಧೀಶನ ಮೇಲೆ ಕೈಮಾಡುವುದು ಇದರ ಸೂಚನೆ. ಅನಂತರ ಈ ಜಗತ್ತನ್ನು ತಿರಸ್ಕರಿಸಿ, ‘ಷಿವಲ್ರಿ’ಯ ಜಗತ್ತಿಗೆ ಹಿಂದಿರುಗುತ್ತಾನೆ. ತನ್ನ ಕಿರೀಟ ಧಾರಣೆಯಾದ ತಕ್ಷಣವೇ ಸರ್ ಜಾನ್ ಫಾಲ್ಲ್ಸ್ಟಾಫ್ನನ್ನು ಬಹಿರಂಗವಾಗಿ ತಿರಸ್ಕರಿಸುವುದು, ತನ್ನನ್ನು ಸೆರೆಮನೆಗೆ ಕಳಿಸಿದ ನ್ಯಾಯಾಧೀಶನನ್ನು ಅವನ ಸ್ಥಾನದಲ್ಲಿ ಸ್ಥಿರಗೊಳಿಸುವುದು ಇದರ ಸಂಕೇತ. ಭಯ, ದಾಕ್ಷಿಣ್ಯಗಳಿಲ್ಲದೆ ತನ್ನ ಕರ್ತವ್ಯವನ್ನು ನಡೆಸುವ ನ್ಯಾಯಾಧೀಶ ‘ಷಿವಲ್ರಿ’ ಜಗತ್ತಿನಲ್ಲಿ ಉತ್ತಮವಾದುದೆಲ್ಲವನ್ನು ಪ್ರತಿನಿಧಿಸುತ್ತಾನೆ; ಅದಕ್ಕೆ ವಿರುದ್ಧವಾದ ಮದ್ಯದಂಗಡಿಯ ಜಗತ್ತಿನ ಸಂಕೇತ ಫಾಲ್ಸ್ಟಾಫ್. ತನ್ನ ನಾಯಕ ಇಂತಹ ಭಂಡ ಸಹವಾಸದಲ್ಲಿದ್ದರೂ, ಅದರಿಂದ ಮನುಷ್ಯ ಸ್ವಭಾವವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡು ರಾಜನ ಅಧಿಕಾರವನ್ನು ನಿರ್ವಹಿಸಲು ಇನ್ನೂ ಸಮರ್ಥನಾದನಲ್ಲದೆ, ಈ ಸಹವಾಸದಿಂದ ಯಾವ ಕೊಳಕಿನ ಲೇಪನಕ್ಕೂ ಸಿಕ್ಕಲಿಲ್ಲ ಎನ್ನುವುದು ತನ್ನ ನಾಯಕನ ಘನತೆಯನ್ನು ಹೆಚ್ಚಿಸುವುದು ಎಂದು ಬಗೆದ ಷೇಕ್ಸ್ಪಿಯರ್. ಒಂದು ಕಡೆ ‘ಮೊರ್ಯಾಲಿಟಿ’ ನಾಟಕಗಳ ಸಂಪ್ರದಾಯ; ಇನ್ನೊಂದು ಕಡೆ ಬಂಡವಾಳವಿಲ್ಲದ ಬಡಾಯಿಗಾರ ಪಾತ್ರಗಳ ಸೃಷ್ಟಿಯ ಸಂಪ್ರದಾಯ; ಮತ್ತೊಂದು ಕಡೆ ತೀರ ವ್ಯತಿರಿಕ್ತವಾದ ಜಗತ್ತುಗಳ ನಿವಾಸಿಯಾಗಿ, ತಾನು ದುಷ್ಟತನದ ಸೋಂಕಿನಿಂದ ದೂರ ಉಳಿದು, ಮೋಡಗಳ ಮರೆಯಿಂದ ಹೊರಬಿದ್ದು ಬೆಳಗುವ ಸೂರ್ಯನಂತಹ ನಾಯಕನನ್ನು ಚಿತ್ರಿಸುವ ಉದ್ದೇಶ ಇವೆಲ್ಲ ಸರ್ ಜಾನ್ ಫಾಲ್ಸ್ಟಾಫ್ನ ಸೃಷ್ಟಿಗೆ ಕಾರಣಗಳಾದವು.

3

ಆದರೆ ಫಾಲ್ಸ್ಟಾಫ್ನನ್ನು ಬರಿಯ ಒಂದು ಸಂಪ್ರದಾಯದ ಸೃಷ್ಟಿಯೆಂದೋ ಒಂದು ಸಂಕೇತವೆಂದೋ ಭಾವಿಸುವುದು ಅ ಪುಣ್ಯಾತ್ಮನ ಹೊಟ್ಟೆಯಷ್ಟೇ ಪ್ರಮಾಣದ ಅನ್ಯಾಯ. ಹೆನ್ರಿಯ ಸ್ಥಾನದಲ್ಲಿ ನಿಂತು ಒಂದು ಅಣಕದ ದೃಶ್ಯದಲ್ಲಿ ಫಾಲ್ಸ್ಟಾಫ್ ತನ್ನ ವಿಷಯವಾಗಿಯೇ ಹೇಳುವ ಮಾತನ್ನು ಕೇಳಿ:

“No my good Lord ; banish Peto, banish Bardolph, banish Poins; but for sweet Jack Falstaff, kind Jack Falstaff, true Jack Falstaff, valiant Jack Falstaff and therefore more valiant, being, as he is, old

Jack Falstaff, banish not him thy Harry’s company; banish not him thy Harry’s company ; banish plump Jack, and banish all the world.”

ಈ ಮಾತುಗಳನ್ನು ಫಾಲ್ಸ್ಟಾಫ್ನೂ ನಗುವನ್ನು ತಡೆಯುತ್ತ ಅಣಕು ಗಾಂಭೀರ್ಯದಿಂದ ಹೇಳುತ್ತಾನೆ. ಆದರೂ ಅವನ ವ್ಯಕ್ತಿತ್ವದ ಮೋಡಿಯೆಂದರೆ, ಅವನನ್ನು ದೊರಮಾಡಿದರೆ ಪ್ರಪಂಚಕ್ಕೆ ಮಂಕು ಕವಿದಂತೆ ಎಂದು ನಮಗೂ ಒಂದು ಕ್ಷಣ ತೋರುತ್ತದೆ. ಹಾಗೆ ನೋಡಿದರೆ, ಈ ಫಾಲ್ಸ್ಟಾಫ್ ಅಂತಹ ಯೋಗ್ಯನೇನೂ ಅಲ್ಲ. ಪುಂಡರ ತಂಡದ ನಾಯಕ. ವಯಸ್ಸು ಬೇಕಾದಂತೆ ಆಗಿದೆ. ಇವನಿಗಿಲ್ಲದ ಕೆಟ್ಟ ಹವ್ಯಾಸವಿಲ್ಲ. ಅವನ ದುರ್ಗುಣಗಳಂತೆಯೇ ಅವನ ಹೊಟ್ಟೆಯೂ ಯಾವ ಮಿತಿಯ ಭಯವನ್ನೂ ಅರಿಯದೆ ಹಿಗ್ಗಿದೆ. ಇದರಿಂದ ಎಲ್ಲರಿಗೂ ಅವನನ್ನು ಕಂಡರೆ ಹಾಸ್ಯ. ಇಷ್ಟು ವಯಸ್ಸಾಗಿದ್ದರೂ, ಅಂತಕನ ನೆರೆಯೂರಿನವನಾಗಿದ್ದರೂ ಕುಡಿತ, ಸುಳ್ಳು, ಕಳ್ಳತನ, ವಿಷಯಸುಖಗಳಲ್ಲಿ ತೇಲಿ ಮುಳುಗುತ್ತಾನೆ. ನಾಟಕದಲ್ಲಿ ಮೊದಲ ಬಾರಿಗೆ ಅವನನ್ನು ನಾವು ಕಂಡಾಗ ಆರಾಮವಾಗಿ ರಾಜಕುಮಾರನನ್ನು ಕೇಳುತ್ತಿದ್ದಾನೆ : “ಹಾಲ್, ಹಗಲು ಎಷ್ಟು ಸಮಯವಾಗಿದೆಯಪ್ಪ, ಹುಡುಗ ?” ಎಂದು. ರಾಜಕುಮಾರ ಮರುಪ್ರಶ್ನೆ ಹಾಕುತ್ತಾನೆ. “ಹಗಲು ಎಷ್ಟುಹೊತ್ತಾದರೆ ನಿನಗೇನು? ನಿನಗೆ ಹಗಲಿನ ಗೊಡವೆಯೇತಕ್ಕೆ?’’ ಕುಡಿತ, ಊಟ, ಹೆಂಗಸರು ಇವರ ಯೋಚನೆಯೇ ಇರುವ ನಿನಗೆ ಹಗಲು ಎಷ್ಟು ಹೊತ್ತು ಎನ್ನುವುದರ ಯೋಚನೆಯೇತಕ್ಕೆ?” ಇದರಿಂದ ಫಾಲ್ಸ್ಟಾಫ್ ನಾಚಿಕೊಳ್ಳುವುದಿಲ್ಲ, ಮುನಿಯುವುದಿಲ್ಲ. “ಹೌದು, ಹೌದು, ನೀನು ರಾಜನಾದ ಮೇಲೆ ಬೆಳದಿಂಗಳಿನಲ್ಲಿ, ನಕ್ಷತ್ರಗಳ ಬೆಳಕಿನಲ್ಲಿ ಹಣ ಕಸಿದುಕೊಳ್ಳುವ ನಮಗೆ ‘ಡಯಾನಳ ವನಾಧಿಕಾರಿಗಳು’ ಎಂದು ಹೆಸರಿರಲಿ’’ ಎನ್ನುತ್ತಾನೆ. ಕುಡಿತ, ತಿಂಡಿ, ಹೆಂಗಸರು_ಇವೇ ಮಾತುಗಳು ಇವನದು. ಜೊತೆಗೆ ಬಡಾಯಿ ಬೇರೆ. ಇಂತಹ ಮನುಷ್ಯ ರಾಜಕುಮಾರನಿಗೆ ಹೇಳುತ್ತಾನೆ: “ಹಾಲ್, ನಿನ್ನ ಪರಿಚಯವಾಗುವ ಮುನ್ನ ನನಗೆ ಏನೂ ತಿಳಿದಿರಲಿಲ್ಲ. ನಿಜ ಹೇಳಬೇಕೆಂದರೆ ಈಗ ನಾನು ದುಷ್ಟರಲ್ಲಿ ಒಬ್ಬನೆ, ಅದ್ಕಕಿಂತ ತಮವೇನಲ್ಲ. ಈ ಬದುಕನ್ನ ಬಿಟ್ಟುಬಿಡಬೇಕು. ಈ ಬದುಕನ್ನ ಬಿಟ್ಟುಬಿಡುತ್ತೇನೆ. ದೇವರಾಣೆ ಬಿಡದಿದ್ದರೆ ನಾನೊಬ್ಬ ನೀಚನೇ. ಕ್ರಿಸನ್ಡಂನ ಯಾವ ರಾಜಕುಮಾರನಿಗೋಸ್ಕರವೂ ನಾನು ನರಕಕ್ಕೆ ಹೋಗುವುದಕ್ಕೆ ಸಿದ್ಧನಾಗಿಲ್ಲ.” ರಾಜಕುಮಾರ “ನಾಳೆ ಹಣ ಎಲ್ಲಿ ಕದಿಯೋಣ, ಜಾಕ್?” ಎಂದು ಕೇಳುತ್ತಲೇ, “ಓ, ನೀನು ಎಲ್ಲಿ ಅಂತ ತೀರ್ಮಾನಿಸಿದರೂ ನಾನು ನಿನ್ನ ಜೊತೆಗೆ ಒಬ್ಬ ; ಇಲ್ಲದೆ ಇದ್ದರೆ ನನ್ನನ್ನು ನೀಚ ಅಂತ ಕರೆದು ಎಲ್ಲರ ಎದುರಿಗೆ ಛೀಮಾರಿ ಹಾಕು” ಎನ್ನುತ್ತಾನೆ. ರಾಜಕುಮಾರ, “ನಿನ್ನ ಬಾಳಿನಲ್ಲಿ ಒಳ್ಳೆ ಸುಧಾರಣೆಯೇ ಕಾಣುತ್ತದೆ. ಪ್ರಾರ್ಥನೆಯಿಂದ ಹಣದ ಕಳ್ಳತನಕ್ಕೆ” ಎನ್ನುತ್ತಾನೆ. ಗ್ಯಾಡ್ಸ್ ಹಿಲ್ನ ಬಳಿ ಮರುದಿನ ದರೋಡೆಮಾಡುವ ಸಂಚಾದರೆ, ಸಿದ್ಧ ಇವನು. ಹೆಜ್ಜೆ ಇಡುವುದೇ ಕಷ್ಟ ಈ ಬೊಜ್ಜು ಹೊಟ್ಟೆಯ ಮುದಿಯನಿಗೆ. ಅವನ ಪಾದಗಳನ್ನು ಅವನು ಕಂಡೇ ಎಷ್ಟು ದಿನಗಳಾಯಿತೋ, ‘ಹಳ್ಳ ತಿಟ್ಟಿನ ದಾರಿಯಲ್ಲಿ ಎಂಟು ಗಜ ನಡೆಯುವುದೆಂದರೆ ಎಪ್ಪತ್ತು ಮೈಲಿ ನಡೆದಂತೆ’ ಎಂದು ಅವನೇ ಹೇಳುತ್ತಾನೆ. ಆದರೆ ದರೋಡೆ, ಕುಡಿತ ಎಂದರೆ ಎಲ್ಲಿಲ್ಲದ ಉತ್ಸಾಹ ಇವನಿಗೆ. ರಾಜಕುಮಾರ ಇವನ ಜೇಬಿಗೆ ಕೈಹಾಕಿ ಇವನ ಕಾಗದ ಪತ್ರಗಳನ್ನು ನೋಡಿದಾಗ ಒಂದು ‘ಬಿಲ್’ ಸಿಕ್ಕುತ್ತದೆ. ಅದರಲ್ಲಿ ಖರ್ಚೆಲ್ಲ ಆಗಿರುವುದು ಕುಡಿತಕ್ಕೇ. ಯುದ್ಧ ಭೂಮಿಯಲ್ಲಿ ಅವನ ಪಿಸ್ತೂಲು ಚೀಲಕ್ಕೆ ಕೈ ಹಾಕಿದರೆ ಸಿಕ್ಕುವುದು_ಮದ್ಯದ ಸೀಸೆ! ಸ್ನೇಹಿತ ಭಾರ್ಡಾಲ್ಫನನ್ನು ಅವನು ಕೇಳುವುದು ಒಂದು ಪೋಕರಿ ಹಾಡು ಹೇಳಿ, ನನಗೆ ಖುಷಿಯಾಗುವಂತೆ ಮಾಡು ಎಂದು. ಮದ್ಯದಂಗಡಿಯ ಯಜಮಾನಿ ಮಿಸ್ಟ್ರೆಸ್ ಕ್ವಿಕ್ಲಿ ಇವನ ಮಾತಿಗೆ ಬೆರಗಾಗಿ ಮೋಸಹೋದ ಹೆಂಗಸು. ಇತರ ಗಿರಾಕಿಗಳ ವಿಷಯದಲ್ಲಿ ಅವಳು ಎಷ್ಟೋ ಬುದ್ಧಿವಂತಳಾಗಿದ್ದರೂ ಫಾಲ್ಸ್ಟಾಫ್ನ ಮಾತಿಗೆ ಬೆರಗಾಗಿ ಅವನಿಂದ ಬರಬೇಕಾದ ಹಣವನ್ನು ಸಾಲವಾಗಿ ಬಿಡುತ್ತಾಳೆ. ಅವನಿಗೆ ಬಟ್ಟೆ ಕೊಂಡುಕೊಡುತ್ತಾಳೆ. ಅವಳ ಸರ್ವಸ್ವವನ್ನೂ ನಾಚಿಕೆ ಇಲ್ಲದೆ ಕಸಿದುಕೊಳ್ಳುತ್ತಾನೆ ಫಾಲ್ಸ್ಟಾಫ್. ಅವಳ ಜೊತೆಗೇ ಜಗಳವಾಡುತ್ತಾನೆ. ಅವಳ ಅಂಗಡಿಯಲ್ಲಿ ತನ್ನ ಉಂಗುರ ಕಳುವಾಯಿತೆಂದು ಅಬ್ಬರ ಮಾಡುತ್ತಾನೆ. ಅವಳು ತನ್ನ ಮೇಲೆ ನ್ಯಾಯಾಧೀಶನಿಗೆ ದೂರಿತ್ತಾಗ ಅವಳನ್ನೇ ಹಳಿಯುತ್ತಾನೆ, ಮತ್ತೆ ಅವಳಿಂದಲೇ ಸಾಲ ಪಡೆಯುತ್ತಾನೆ. ಸೈನ್ಯಕ್ಕೆ ಜನರನ್ನು ಆರಿಸಲು ಕಳುಹಿಸಿದರೆ, ಕಟ್ಟುಮಸ್ತಾದವರಿಂದ ಹಣ ತೆಗೆದುಕೊಂಡು ಅವರನ್ನು ಬಿಟ್ಟುಬಿಡುತ್ತಾನೆ. ಕ್ಷಾಮದ ಮೂರ್ತಿಗಳಂತಹ

ಕಡ್ಡಿಯ ಕೈಕಾಲಿನ ಭೂಪರನ್ನು ಆರಿಸುತ್ತಾನೆ. ಸ್ವತಃ ಇವನ ಶೌರ್ಯವೋ_ಬಾಯಿ ಮಾತಿನಲ್ಲಿ. ಗ್ಯಾಡ್ಸ್ಹಿಲ್ನಲ್ಲಿ ಇವನು, ಇವನ ಸ್ನೇಹಿತರು ಕೆಲವರನ್ನು ದರೋಡೆ ಮಾಡುತ್ತಾರೆ. ಅನಂತರ ರಾಜಕುಮಾರ ಮತ್ತು ಪಾಯಿನ್ಸ್ ವೇಷ ಮರೆಸಿಕೊಂಡು ಇವರನ್ನು ಬೆದರಿಸುತ್ತಾರೆ. ಫಾಲ್ಸ್ಟಾಫ್ ಒಂದೆರಡು ಏಟು ಹಾಕಿ ಓಡುತ್ತಾನೆ. ದಯತೋರಿಸಿ ಎಂದು ಬೇಡಿಕೊಂಡು ಕೂಗುತ್ತಾ ಓಡಿಹೋದನಂತೆ! ಈ ವಿಷಯ ಪ್ರಸ್ತಾಪ ಬಂದಾಗ, ತಮ್ಮನ್ನು ಮುತ್ತಿದವರು ರಾಜಕುಮಾರ ಮತ್ತು ಪಾಯಿನ್ಸ್ ಎಂದು ತಿಳಿಯದೆ ಫಾಲ್ಸ್ಟಾಫ್ ಆವರ ಮುಂದೆ ಬಡಾಯಿ ಕೊಚ್ಚುತ್ತಾನೆ. ಬಕ್ರಮ್ ಉಡುಪು ಧರಿಸಿದ್ದವರು ಇಬ್ಬರು ತಮ್ಮ ಕಡೆ ನುಗ್ಗಿದರಂತೆ. ಆ ನಾಲ್ಕು ಜನ ಅವನ ಮೇಲೇ ಬಿದ್ದರಂತೆ. ಆ ಏಳು ಜನರ ಕತ್ತಿಗಳಿಗೂ ಹೆದರದೆ ಅವುಗಳ ಮೊನೆಗಳನ್ನು ಮುರಿದನಂತೆ, ಈ ವೀರ. ಬಕ್ರಮ್ ಉಡುಪಿನಲ್ಲಿದ್ದ ಅ ಒಂಬತ್ತು ಜನ ಹಿಂದಕ್ಕೆ ಸರಿಯಲಾರಂಭಿಸಿದಾಗ ಆ ಹನ್ನೊಂದು ಜನರಲ್ಲಿ ಏಳು ಮಂದಿಯನ್ನು ಈ ಶೂರ ಕತ್ತರಿಸಿದ. ಇನ್ನೂ ಮೂರು ಜನ ಅವನ ಮೇಲೆ ನುಗ್ಗಿದರಂತೆ. ಫಾಲ್ಸ್ಟಾಫ್ ಬಾಯಿ ಬಿಟ್ಟನೆಂದರೆ ಸುಳ್ಳಿನ ಕಂತೆಯೇ. ಯುದ್ಧಭೂಮಿಯಲ್ಲಿ ಡಗ್ಲಸ್ ಎದುರಾದಾಗ ಸತ್ತವನಂತೆ ಉರುಳಿ ಜೀವ ಉಳಿಸಿಕೊಳ್ಳುತ್ತಾನೆ. ಶೂರ ಹಾಟ್ಸ್ಪರನನ್ನು ರಾಜಕುಮಾರ ಯುದ್ಧದಲ್ಲಿ ಕೊಲ್ಲುತ್ತಾನೆ. ರಾಜಕುಮಾರ ಅವನ ವಿಷಯದಲ್ಲಿ ಉದಾರವಾದ ಮಾತುಗಳನ್ನಾಡಿ ಅಲ್ಲಿಯೇ ಸತ್ತವನಂತೆ ಬಿದ್ದಿದ್ದ ಫಾಲ್ಸ್ಟಾಫ್ ಸತ್ತುಹೋಗಿದ್ದಾನೆಂದು ಭಾವಿಸಿ, ಅವಕಾಶವಾದಾಗ ಅವನ ಅಂತ್ಯಕ್ರಿಯೆಗೆ ಏರ್ಪಾಟು ಮಾಡಬೇಕೆಂದು ಕೊಂಡುಹೋಗುತ್ತಾನೆ. ಅವನು ಹೋಗುತ್ತಲೇ ಫಾಲ್ಸ್ಟಾಫ್ ಎದ್ದು, ಹಾಟ್ಸ್ಪರನ ಶವವನ್ನು ನೋಡುತ್ತಾನೆ. ತನ್ನಂತೆಯೇ ಅವನೂ ಸತ್ತಂತೆ ನಟಿಸುತ್ತಿದ್ದನೋ ಎಂದು ಶಂಕಿಸಿ ಅವನನ್ನು ಇರಿಯುತ್ತಾನೆ, ಅವನ ಹೆಣವನ್ನು ಎಳೆದುಕೊಂಡು ಹೋಗುತ್ತಾನೆ. ತಾನೇ ಅವನನ್ನು ಕೊಂದೆನೆಂದು ವಾದಿಸಿ, ರಾಜನಿಂದ ಬಹುಮಾನವನ್ನು ಬೇಡುತ್ತಾನೆ. ಇಂತಹ ನಾಚಿಕೆಗೆಟ್ಟ ಮನುಷ್ಯ ಇವನು.

ಆದರೂ ಫಾಲ್ಸ್ಟಾಫ್ ನಮ್ಮನ್ನು ಆಕರ್ಷಿಸುತ್ತಾನೆ!

4

ಇದಕ್ಕೆ ಒಂದು ಕಾರಣ ಅವನ ಚಾತುರ್ಯ.

ಗುಡ್ಡದಂತಹ ಅವನ ದೇಹಕ್ಕೆ ಚಲನ ಎಂದರೆ ಗಂಡಾತರ. ಆದರೆ ಅವನ ಬುದ್ಧಿ ಮಾತ್ರ ಮಿಂಚಿನಂತೆ ಓಡುತ್ತದೆ. ಅವನ ಮಾತಿನ ಧೋರಣೆ, ನಿರರ್ಗಳ ಸುಳ್ಳಿನ ಪ್ರವಾಹ. ಎಂತಹ ಇಕ್ಕಟ್ಟಿನಲ್ಲಾದರೂ ಪ್ರಸಂಗಾವಧಾನದಿಂದ ನುಸುಳಿಕೊಳ್ಳುವ ಶಕ್ತಿ ಇವು ಅಸಮಾನವಾದುವು-ಅವನ ಬೊಜ್ಜು ಹೊಟ್ಟೆಯ ಗಾತ್ರದಂತೆಯೇ. ಅವನ ಬುದ್ಧಿಯ ಚಕಮಕಿ ಎಷ್ಟೆಂದರೆ ಅವನ ಜೊತೆಗಿದ್ದವರ ಬುದ್ಧಿಯೂ ಹರಿತವಾಗುತ್ತದೆ. ತಾನೇ ಹೇಡಿಯಾದ ಇವನ ಬಾಯಿಯಲ್ಲಿ ಬರುವ ಮಾತು, “ಹೇಡಿಗಳು ಹಾಳಾಗ!” ಎಂದೇ ರಾಜಕುಮಾರನನ್ನು ‘ನೀನು, ಪಾಯಿನ್ಸ್ ಹೇಡಿಗಳಲ್ಲವೇ?’ ಎಂದು ಛೀಮಾರಿ ಹಾಕುತ್ತಾನೆ. “ಏನು, ಬೊಜ್ಜು ಹೊಟ್ಟೆ, ನೀನು ನನ್ನನ್ನು ಹೇಡಿ ಅಂತ ಕರೆದರೆ ಇರಿದು ಬಿಟ್ಟೇನು!” ಎಂದು ರಾಜಕುಮಾರ ಹೇಳಿದರೆ, “ನಾನು ನಿನ್ನನ್ನು ಹೇಡಿ ಅಂತ ಕರೆದೇನೆ! ನಿನ್ನನ್ನು ಹೇಡಿ ಅಂತ ಕರೆಯೋ ಮೊದಲು ನೀನು ನರಕಕ್ಕೆ ಹೋಗೋದನ್ನ ಕಂಡೇನು! ಆದರೂ ನೀನು ಓಡುªಂಷ್ಟು ವೇಗವಾಗಿ ಓಡುವ ಶಕ್ತಿಗೋಸ್ಕರ ಸಾವಿರ ಪೌಂಡು ಕೊಟ್ಟೇನು!” ಎನ್ನುತ್ತಾನೆ. ಗ್ಯಾಡ್ಸ್ಹಿಲ್ನ ಬಳಿ ತನ್ನನ್ನು ನೂರು ಜನ ಮುತ್ತಿದರು. ಐವತ್ತು ಜನರೊಂದಿಗೆ ತಾನು ಕಾದಿದೆ, ಐವತ್ತೆರಡು_ಐವತ್ತಮೂರು ಜನ ತನ್ನ ಮೇಲೆ ಬಿದ್ದರು ಎಂದೆಲ್ಲ ಇವನು ಬಡಾಯಿ ಕೊಚ್ಚಿದ ಮೇಲೆ ರಾಜಕುಮಾರ ಅವರನ್ನು ಬೆದರಿಸಿದವರು ತಾನು ಮತ್ತು ಪಾಯಿನ್ಸ್

ಎಂದು ಹೇಳಿ, ಫಾಲ್ಸ್ಟಾಫ್ ದಯೆ ತೋರಬೇಕೆಂದು ಮೊರೆಯಿಡುತ್ತ ಓಡಿದುದನ್ನು ವರ್ಣಿಸಿ, “ಈ ಸ್ಪಷ್ಟವಾಗಿ ಕಾಣುವ ಅವಮಾನದಿಂದ ಅಡಗಿಕೊಳ್ಳುವುದಕ್ಕೆ ಯಾವ ಉಪಾಯ ಹುಡುಕುತ್ತಿ?” ಎಂದು ಸವಾಲು ಹಾಕುತ್ತಾನೆ. ಫಾಲ್ಸ್ಟಾಫ್ ಸೋತ ಎನ್ನುವಂತಹ ಪ್ರಸಂಗ ಇದು. ಆದರೆ ಇಂತಹ ಇರುಕಿನ ಪ್ರಸಂಗದಿಂದ ನುಣುಚಿಕೊಳ್ಳುವುದೇ ಒಂದು ಆನಂದ ಫಾಲ್ಸ್ಟಾಫ್ನಿಗೆ: “ದೇವರಾಣೆ, ನಿನ್ನ ಗುರುತು ಚೆನ್ನಾಗಿ ಸಿಕ್ಕಿತು ನನಗೆ. ಆದರೆ ಮುಂದೆ ರಾಜನಾಗುವವನನ್ನು ನಾನು ಕೊಲ್ಲುವುದೆ? ನಿನಗೆ ಗೊತ್ತಿದೆ ನಾನು ಹಕುರ್ಯ್ಲಿಸ್ನಂತಹ ಧೀರ ಎನ್ನುವುದು. ಆದರೆ ಹುಟ್ಟು ಬುದ್ಧಿಯೊಂದಿದೆ ನೋಡಿ. ಸಿಂಹ ನಿಜವಾದ ರಾಜಪುತ್ರನನ್ನು ಮುಟ್ಟುವುದೇ ಇಲ್ಲ. ಈ

ಹುಟ್ಟು ಬುದ್ಧಿ ತುಂಬ ಮುಖ್ಯವಾದುದು. ಈ ಹುಟ್ಟು ಬುದ್ಧಿಯಿಂದ ನಾನು ಹೇಡಿಯಾದೆ. ಇದರಿಂದ ನಾನು ಬದುಕಿರುವಷ್ಟು ದಿನವೂ ನಾನು ಶೂರಸಿಂಹ ಎನಿಸಿದುದರಿಂದ, ನೀನು ನಿಜವಾಗಿಯೂ ರಾಜಕುಮಾರನಾದುದರಿಂದ”. ರಾಜಕುಮಾರನಿಗೆ ತಂದೆ ಹೇಳಿ ಕಳುಹಿಸುತ್ತಾನೆ. ಫಾಲ್ಸ್ಟಾಫ್ ರಾಜಕುಮಾರನಿಗೆ ಹೇಳುತ್ತಾನೆ: “ನಿಮ್ಮ ತಂದೆ ನಿನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ, ಉತ್ತರ ನೀನು ಸಿದ್ಧ ಮಾಡಿಕೊ’’ ಎಂದು. ರಾಜಕುಮಾರ, “ನೀನೇ ನನ್ನ ತಂದೆಯ ಸ್ಥಾನದಲ್ಲಿ ನಿಂತು ನನ್ನನ್ನು ಪರೀಕ್ಷೆ ಮಾಡು” ಎನ್ನುತ್ತಾನೆ. ಹ್ಯಾಸ್ಯದ ದೃಷ್ಟಿಯಿಂದ ಇದೊಂದು ಅದ್ಭುತ ದೃಶ್ಯ. “ಶ್ರೀಮಂತರೇ, ಅತ್ತ ಸರಿಯಿರಿ,” ಎನ್ನುತ್ತಾನೆ ಫಾಲ್ಸ್ಟಾಫ್ ರಾಜ. ಈ ನಾಟಕವನ್ನು ನೋಡುತ್ತಿರುವ ಮಿಸ್ಟ್ರೆಸ್ ಕ್ವಿಕ್ಲಿಗೆ ನಗುವನ್ನು ತಡೆಯಲಾರದೆ. ಕಣ್ಣಿನಲ್ಲಿ ನೀರು ತುಂಬುತ್ತದೆ. ಫಾಲ್ಸ್ಟಾಫ್, “ಅಳಬೇಡ, ಪ್ರಿಯ ರಾಣಿ, ಉರುಳುವ ಕಣ್ಣೀರ ಹನಿಗಳು ವ್ಯರ್ಥ” ಎನ್ನುತ್ತಾನೆ. ರಾಜಕುಮಾರ ಸರಿಯಾದ ಸಹವಾಸ ಮಾಡಿಲ್ಲವೆಂದು ಆಕ್ಷೇಪಿಸುತ್ತಾ, “ಆದರೆ ನಿನ್ನೊಡನೆ ಆಗಾಗ ಒಬ್ಬ ಸಜ್ಜನನನ್ನು ಕಂಡಿದ್ದೇನೆ, ಅವನ ಹೆಸರು ಮಾತ್ರ ತಿಳಿಯದು,” ಎನ್ನುತ್ತಾನೆ. “ಹೇಗಿದ್ದಾನೆ ಆತ?” ಎಂದು ರಾಜಕುಮಾರ ಕೇಳುತ್ತಲೆ ತನ್ನನ್ನು ಹೊಗಳಿಕೊಳ್ಳಲು ಈ ಅವಕಾಶವನ್ನು ಉಪಯೋಗಿಸಿಕೊಂಡುಬಿಡುತ್ತಾನೆ; ಆ ಮನುಷ್ಯ ಗಾಂಭೀರ್ಯದ ತೋರಿಕೆಯವನಂತೆ, ದಪ್ಪ ಮನುಷ್ಯನಂತೆ, ನಗೆ ಮುಖದವನು, ಸಂತೋಷವಾಗುವ ಕಣ್ಣಗಳುಳ್ಳವನು, ಐವತ್ತು ವರ್ಷ ಅಥವ ಅರವತ್ತರ ಹತ್ತಿರದವನು. ಅವನ ವಿಷಯ ಫಾಲ್ಸ್ಟಾಫ್_ರಾಜ ಹೇಳುತ್ತಾನೆ: “ಆ ಮನುಷ್ಯನಲ್ಲಿ ಪೋಕರಿತನವಿದ್ದರೆ ನಾನು ಮೋಸಹೋಗಿದ್ದೇನೆ; ಏಕೆಂದರೆ ಅವನ ಮುಖ ಲಕ್ಷಣದಲ್ಲೇ ಒಳ್ಳೆಯತನ ಕಾಣುತ್ತದೆ. ಹಣ್ಣಿನಿಂದ ಮರದ ಯೋಗ್ಯತೆ ತಿಳಿಯುವಂತೆ, ಮರದಿಂದ ಹಣ್ಣಿನ ಯೋಗ್ಯತೆ ತಿಳಿಯಬಹುದಾದರೆ, ದೃಢವಾಗಿ ಹೇಳುತ್ತೇನೆ, ಆ ಫಾಲ್ಸ್ಟಾಫ್ನಲ್ಲಿ ಒಳ್ಳೆಯತನವಿದೆ. ಅವನನ್ನು ಇಟ್ಟುಕೋ, ಉಳಿದವರನ್ನು ಓಡಿಸು.” ರಾಜಕುಮಾರ ತನಗೆ ಒಂದು ಸಾವಿರ ಪೌಂಡು ಸಾಲ ಕೊಡಬೇಕೆಂದು ಫಾಲ್ಸ್ಟಾಫ್ ಹೇಳಿಕೊಂಡಿದ್ದಾನೆ.” ಹೌದೇ? ನಾನು ನಿನಗೆ ಒಂದು ಸಾವಿರ ಪೌಂಡು ಕೊಡಬೇಕೆ?” ಎಂದರೆ, “ಒಂದು ಸಾವಿರ

ಪೌಂಡುಗಳು ಹಾಲ್! ಹತ್ತು ಲಕ್ಷ. ನಿನ್ನ ಪ್ರೀತಿಗೆ ಹತ್ತು ಲಕ್ಷ ಬೆಲೆ. ನಿನ್ನ ಪ್ರೀತಿ ನನಗೆ ಸಲ್ಲಬೇಕು” ಎನ್ನುತ್ತಾನೆ. ಫಾಲ್ಸ್ಟಾಫ್ ದರೋಡೆಯಲ್ಲಿ ಭಾಗವಹಿಸಿದ್ದನೆಂಬ ಮಾತು ಮುಖ್ಯ ನ್ಯಾಯಾಧೀಶನ ಕಿವಿಗೆ ಬಿದ್ದಿದೆ. ಒಮ್ಮೆ ಫಾಲ್ಸ್ಟಾಫ್ ಅವನ ಕಣ್ಣಿಗೆ ಬೀಳುತ್ತಾನೆ. ನ್ಯಾಯಾಧೀಶ ಫಾಲ್ಸ್ಟಾಫನನ್ನು ಕರೆಯಲು ಜವಾನನನ್ನು ಕಳುಹಿಸಿದರೆ, ಫಾಲ್ಸ್ಟಾಫ್ ಕಿವುಡನಂತೆ ನಟಿಸುತ್ತಾನೆ. ನ್ಯಾಯಾಧೀಶನ ಸೇವಕ ಅವನನ್ನು ಮಾತನಾಡಿಸಿದರೆ, “ಏನಿದು? ಇಷ್ಟು ಚಿಕ್ಕವಯಸ್ಸಿನಲ್ಲಿ ತಿರುಪೆ ಎತ್ತುತ್ತೀಯ? ಯುದ್ಧಗಳಾಗುತ್ತಿಲ್ಲವೇ? ಕೆಲಸ ಸಿಕ್ಕುವುದಿಲ್ಲವೆ?” ಎಂದು. ಅವನು ಭಿಕ್ಷುಕನೆಂದು ಭಾವಿಸಿದವನಂತೆತರಾಟೆಗೆ ತೆಗೆದುಕೊಳ್ಳುತ್ತಾನೆ. “ನನ್ನ ವಿಷಯ ನೀವು ತಪ್ಪು ತಿಳಿದಿದ್ದೀರಿ” ಎಂದು ಅತ ಹೇಳಿದರೆ, “ಅದು ಹೇಗಯ್ಯ ? ನೀನು ಯೋಗ್ಯ ಮನುಷ್ಯ ಅಂತ ನಾನು ಹೇಳಿದೆನೆ?” ಎಂದು ಕೇಳುತ್ತಾನೆ. ನ್ಯಾಯಾಧೀಶನೇ ಮಾತನಾಡಲು ಮುಂದಾದಾಗ ಅವನು ಯಾವ ವಿಷಯ ಮಾತನಾಡಬೇಕೆಂದಿದ್ದಾನೆ ಎನ್ನುವುದನ್ನು ಅರಿಯದವನಂತೆ ಲೋಕಾಭಿರಾಮ ಪ್ರಾರಂಭಿಸುತ್ತಾನೆ; “ಓಹೋ ಪ್ರಭುಗಳು! ಪ್ರಭುಗಳು ಓಡಾಡುವುದನ್ನು ನೋಡಿ ನನಗೆ ತುಂಬ ಸಂತೋಷ. ಪ್ರಭುಗಳಿಗೆ ಅರೋಗ್ಯವಿಲ್ಲ ಎಂದು ಕೇಳಿದ್ದೆ; ವೈದ್ಯರನ್ನು ಕೇಳಿಯೇ ಪ್ರಭುಗಳು ಹೊರಕ್ಕೆ ಹೊರಟ್ಟಿದ್ದೀರಿ ಎಂದು ನಂಬಿದ್ದೇನೆ. ಪ್ರಭುಗಳು ಯೌವನವನ್ನು ಪೂರ್ತಿದಾಟಿಲ್ಲ, ಆದರೂ ವಯಸ್ಸಿನ ಸೋಂಕು ತಗುಲಿದೆ ನೋಡಿ. ತಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಅಂತ ತಮ್ಮನ್ನು ಬಹಳ ವಿನಯದಿಂದ ಬೇಡಿಕೊಳ್ಳುತ್ತೇನೆ,” ಎನ್ನುತ್ತಾನೆ. ನ್ಯಾಯಾಧೀಶ, “ನೀನು ಷಾಂಸ್ಬರಿಗೆ ಹೋಗುವ ಮುನ್ನ ನಿನಗೆ ಹೇಳಿ ಕಳುಹಿಸಿದೆ,” ಎಂದರೆ, “ಮಹಾರಾಜರು ವೇಲ್ಸ್ನಿಂದ ಬಹಳ ತೊಂದರೆಪಟ್ಟು ಹಿಂದಿರುಗಿದರು ಅಂತ ಕೇಳಿದೆ,” ಎನ್ನುತ್ತಾನೆ. “ಮಹಾರಾಜರ ವಿಷಯ ನಾನು ಮಾತನಾಡುತ್ತಿಲ್ಲ. ನಾನು ಹೇಳಿಕಳುಹಿಸಿದಾಗ ನೀನು ಬರಲಿಲ್ಲ” ಎಂದು ನ್ಯಾಯಾಧೀಶರು ಹೇಳಿದರೆ, “ಆಲ್ಲದೆ ಮಹಾರಾಜರಿಗೆ ಆ ಬಡ್ಡಿ ಮಗನದು ತೀಕ್ಷ್ಣವಾಯು ಅಂತ ಕೇಳಿದೆ’’ ಎನ್ನುತ್ತಾನೆ. ನ್ಯಾಯಾಧೀಶ ಏನು ಹೇಳಿದರೂ ಇವನು ಅಡ್ಡಾದಿಡ್ಡಿ ಮಾತನಾಡುತ್ತಾನೆ. ಕೊನೆಗೆ ನ್ಯಾಯಾಧೀಶ ಬೇಸರದಿಂದ “ನಿನಗೆ ರೋಗ ಬಂದಂತಿದೆ, ನಾನು ಹೇಳುವುದನ್ನು ನೀನು ಕೇಳುವುದಿಲ್ಲ” ಎಂದರೆ, “ಸರಿಸರಿ, ಪ್ರಭುಗಳೇ, ಸರಿಸರಿ: ಅಂದರೆ ನನಗೆ ಬಂದಿರೋದು ಹೇಳುವುದನ್ನು ಕೇಳದೆ ಇರೊ ರೋಗ, ಗಮನ ಕೊಡದೆ ಇರೋ ರೋಗ,” ಎನ್ನುತ್ತಾನೆ! “ನಿನ್ನ ಜೀವನ ತುಂಬ ನಾಚಿಕೆ ಗೇಡಿತನದ್ದು” ಎಂದು ನ್ಯಾಯಾಧೀಶನೆಂದರೆ, “ನನ್ನ ಬೆಲ್ಟನ್ನು ಧರಿಸುವವನು ಅಷ್ಟಕ್ಕಿಂತ ಕಡಿಮೆಯದರಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ” ಎನ್ನುತ್ತಾನೆ. “ನಿನ್ನ ಆದಾಯ ಕಡಿಮೆ, ದುಂದು ಖರ್ಚು (waste) ಹೆಚ್ಚು” ಎಂದರೆ, ‘waste’ ‘waist’ ಪದಗಳನ್ನು ಅದಲು ಬದಲು ಮಾಡಿ, ನನ್ನ “ಆದಾಯ ಹೆಚ್ಚಾಗಿದ್ದು ನನ್ನ ನಡುವು (waist) ಕಡಿಮೆಯಾಗಿರಬಾರದಾಗಿತ್ತೆ ಎನ್ನಿಸುತ್ತದೆ ನನಗೆ!” ಎನ್ನುತ್ತಾನೆ. “ದೇವರು ರಾಜಕುಮಾರನಿಗೆ ಇನ್ನೂ ಉತ್ತಮ ಗೆಳೆಯನನ್ನು ಕಳಿಸಲಿ!” ಎಂದು ನ್ಯಾಯಾಧೀಶ ಉದ್ಗಾರ ತೆಗೆದರೆ, “ದೇವರು ಗೆಳೆಯನಿಗೆ ಇನ್ನೂ ಉತ್ತಮ ರಾಜಕುಮಾರನನ್ನು ಕಳಿಸಲಿ!” ಎಂದು ಉತ್ತರಿಸುತ್ತಾನೆ. ಇಷ್ಟೆಲ್ಲ ಮಾತಾದ ಮೇಲೆ ನ್ಯಾಯಾಧೀಶ, “ಒಳ್ಳೆಯದು, ಸತ್ಯವಂತನಾಗಿರು, ಸತ್ಯವಂತನಾಗಿರು. ನಿನ್ನ ಪ್ರಯತ್ನವನ್ನು ದೇವರು ಆಶೀರ್ವದಿಸಲಿ” ಎನ್ನುತ್ತ ಮುಂದೆ ಹೆಜ್ಜೆ ಇಟ್ಟರೆ, ಫಾಲ್ಸ್ಟಾಫ್ ಕೇಳುತ್ತಾನೆ: “ನನ್ನ ಸಿದ್ಧತೆಗೋಸ್ಕರ ಪ್ರಭುಗಳು ಸಾವಿರ ಪೌಂಡ್ ಸಾಲ ಕೊಡುತ್ತೀರ?” ಎಂದು! ಇಂತಹ ಭೂಪನನ್ನು ಮೆಚ್ಚದೆ ಇರಲು ಹೇಗೆ ಸಾಧ್ಯ? ಮಿಸ್ಟ್ರೆಸ್ ಕ್ವಿಕ್ಲಿಗೆ ಈತ ಹಲವು ವಿಧಗಳಲ್ಲಿ ಅನ್ಯಾಯ ಮಾಡಿದ್ದಾನೆ. ಅವಳಿಗೆ ಇವನು ಹಣ ಕೊಡಬೇಕಾಗಿದೆ, ಕೊಡುತ್ತೇನೆ, ಕೊಡುತ್ತೇನೆ ಎಂದು ಮಾತುಕೊಟ್ಟು ಅವಳಿಗೆ ಮೋಸ ಮಾಡಿದ್ದಾನೆ. ಅವಳನ್ನು ಮದುವೆಯಾಗುವುದಾಗಿ ಆಸೆ ತೋರಿಸಿ ಎಲ್ಲ ಲಾಭವನ್ನೂ ಪಡೆದುಕೊಂಡಿದ್ದಾನೆ. ಕೊನೆಗೆ ಅವನನ್ನು ದಸ್ತಗಿರಿ ಮಾಡಲು ಆಕೆ ಅಧಿಕಾರಿಗಳನ್ನು ಕರೆಸುತ್ತಾಳೆ. ಆ ಹೊತ್ತಿಗೆ ಅಲ್ಲಿಗೆ ಬಂದ ನ್ಯಾಯಾಧೀಶ ಫಾಲ್ಸ್ಟಾಫನಿಗೆ ಛೀಮಾರಿ ಮಾಡುತ್ತಾನೆ. ಫಾಲ್ಸ್ಟಾಫ್ ಮುಖ್ಯ ನ್ಯಾಯಾಧೀಶನಿಗೆ ಹೇಳುತ್ತಾನೆ: “ಪ್ರಭುಗಳೇ, ಇದೊಂದು ಹುಚ್ಚು ಪ್ರಾಣಿ. ಅವಳ ಹಿರಿಯ ಮಗ ತಮ್ಮ ಹಾಗಿದ್ದಾನೆಂದು ಹೇಳಿಕೊಂಡು ಊರೆಲ್ಲ ತಿರುಗುತ್ತಾಳೆ. ಒಂದು ಕಾಲದಲ್ಲಿ ಚೆನ್ನಾಗಿದ್ದವಳು, ಈಗ ಬಡತನದಿಂದ ಬುದ್ಧಿ ಕೆಟ್ಟಿದ್ದಾಳೆ” ಎಂದು. ನ್ಯಾಯಾಧೀಶ ¸ಂಚಿಷ್ಟವಾಗಿ “ ಆ ಹೆಂಗಸಿನ ಗೋಳನ್ನು ತಪ್ಪಿಸು” ಎಂದು ಹೇಳುತ್ತಾನೆ. ಫಾಲ್ಸ್ಸ್ಟಾಫ್ ಮಿಸ್ಟ್ರೆಸ್ ಕ್ವಿಕ್ಲಿಯನ್ನು ಒಂದು ಕಡೆ ಕರೆದು ಎರಡು ನಿವಿಂಷಾ ಮಾತನಾಡುತ್ತಾನೆ. ಅದೇನು ಅವನ ಮಾತಿನ ಮೋಡಿಯೊ, ಅವನನ್ನು ದಸ್ತಗಿರಿ ಮಾಡಿಸುವುದಿರಲಿ, ತನ್ನ ಸಾಮಾನುಗಳನ್ನು ಅಡವಿಟ್ಟು ಅವನಿಗೆ ಹಣಕೊಡಲು ಒಪ್ಪಿಕೊಂಡುಬಿಡುತ್ತಾಳೆ. ಮತ್ತೆ ಇವನು ಅವಳ ಮದ್ಯದಂಗಡಿಯಲ್ಲೇ ಠಾಣೆ ಹೂಡುತ್ತಾನೆ. ರಾಜಕುಮಾರನನ್ನು ಕುರಿತು ಫಾಲ್ಸ್ಟಾಫ್ ಹಗುರವಾಗಿ ಮಾತನಾಡಿದುದನ್ನು ವೇಷ ಮರೆಸಿ ನಿಂತಿದ್ದ ರಾಜಕುಮಾರನೇ ಕೇಳುತ್ತಾನೆ “ನನ್ನ ವಿಷಯವಾಗಿ ಹೀಗೆ ಮಾತನಾಡುತ್ತೀಯ?” ಎಂದರೆ, “ದುಷ್ಟರ ಮುಂದೆ ನಿನ್ನನ್ನು ತೆಗಳುತ್ತೇನೆ. ದುಷ್ಟರಿಗೆ ನಿನ್ನಲ್ಲಿ ಪ್ರೀತಿ ಹುಟ್ಟದೆ ಇರಲಿ ಅಂತ. ಒಳ್ಳೆಯ ಸ್ನೇಹಿತ, ನಿಜವಾದ ಪ್ರಜೆ ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ,” ಎನ್ನುತ್ತಾನೆ. “ಇದೇನು? ಎಲ್ಲ ಸಣಕಲು ಪ್ರಾಣಿಗಳನ್ನೇ ಸೇರಿಸಿದ್ದೀಯೆ ಸೈನ್ಯಕ್ಕೆ?” ಎಂದು ಆಕ್ಷೇಪಿಸಿದರೆ ಅವನ ಉತ್ತರ ಸಿದ್ಧ : “ನನಗೆ ಮನುಷ್ಯನ ಕೈಕಾಲು, ಮಾಂಸಖಂಡ, ಎತ್ತರ, ದಪ್ಪ, ಧಡೂತಿ ಆಕಾರ ಮುಖ್ಯವೇ? ಅವನ ಧೈರ್ಯ ಮುಖ್ಯ. ಈ ಅರ್ಧ ಮುಖದ ಷ್ಯಾಡೋನನ್ನು ನೋಡಿ; ಶತ್ರುಗಳು ಇವನನ್ನು ಹೊಡೆದುಹಾಕಬೇಕು ಅಂದರೆ ಅವರ ಗುರಿಗೆ ಸಿಕ್ಕುವವನೇ ಇವನು? ಶತ್ರು ಚಾಕುವಿನ ಅಂಚಿಗೆ ಗುರಿಯಿಟ್ಟಷ್ಟೇ ಸಾರ್ಥಕ. ಹಿಮ್ಮೆಟ್ಟ ಬೇಕಾದರೆ..... ಈ ದರ್ಜಿ ಫೀಬ್ಲ್ ಎಷ್ಟು ವೇಗವಾಗಿ ಓಡಿಹೋಗಬಲ್ಲ!”

ಫಾಲ್ಸ್ಟಾಫನ ಕುಶಾಗ್ರ ಬುದ್ಧಿ ಇತರರನ್ನು ಮಂಕುಹಿಡಿಸಲು ಮಾತ್ರವಲ್ಲ, ಅವನನ್ನೇ ಹಾಸ್ಯಮಾಡುವುದಕ್ಕೂ ಸಿದ್ಧವಾಗಿದೆ.

5

ಫಾಲ್ಸ್ಟಾಫ್ನನ್ನು ಕಂಡರೆ ಎಲ್ಲರಿಗೂ ಹಾಸ್ಯ. ಅವನನ್ನು ನೋಡಿದರೆ ಹಾಸ್ಯ ಮಾಡಬೇಕೆನ್ನಿಸುತ್ತದೆ. ಆದುದರಿಂದಲೇ ಅವನು ಹೇಳುವುದು, “I am not only witty in myself, but the cause that wit is in others’’ (ನಾನು ಮಾತಿನಲ್ಲಿ ಚತುರ ಮಾತ್ರನಲ್ಲ, ಇತರರಲ್ಲಿ ಮಾತಿನ ಚಾತುರ್ಯವಿರುವುದಕ್ಕೂ ಕಾರಣ) ಎಂದು. ರಾಜಕುಮಾರನಂತೂ ಅವನನ್ನು ಗೇಲಿ ಮಾಡಿಮಾಡಿ ತನ್ನ ಬುದ್ಧಿಯನ್ನು ಹರಿತಮಾಡಿಕೊಳ್ಳುತ್ತಾನೆ. ಎಷ್ಟೋ ಬಾರಿ ಮೂದಲಿಕೆಗಾಗಿ ಹೊಸಹೊಸ ಉಪಮಾನಗಳನ್ನು ಅರಸುವುದರಲ್ಲೇ ಅವರಿಗೆ ಸ್ಪರ್ಧೆ. ಫಾಲ್ಸ್ಟಾಫ್, ಒಬ್ಬ ವೃದ್ಧ ರಸ್ತೆಯಲ್ಲಿ ತನ್ನನ್ನು ತರಾಟೆಗೆ ತೆಗೆದುಕೊಂಡ, ಬಹಳ ವಿವೇಕದಿಂದಲೇ ಮಾತನಾಡಿದ, ಆದರೆ ತಾನು ಅದಕ್ಕೆ ಲಕ್ಷ್ಯ ಕೊಡಲಿಲ್ಲ ಎಂದರೆ ರಾಜಕುಮಾರ ಉತ್ತರಿಸುತ್ತಾನೆ; “ಸರಿಯಾದ ಕೆಲಸವನ್ನೇ ಮಾಡಿದೆ: ವಿವೇಕ ರಸ್ತೆಗಳಲ್ಲಿ ಕೂಗಿ ಹೇಳುತ್ತದೆ. ಆದರೆ ಯಾರು ಲಕ್ಷ್ಯ ಮಾಡುವುದಿಲ್ಲ” ರಾಜಕುಮಾರ ಅವನನ್ನು wool-sack (ಉಣ್ಣೆಯ ಚೀಲ), bed-presser (ಹಾಸಿಗೆಯನ್ನು ದಮ್ಮಸ್ಸು ಮಾಡುವವನು), huge hill of flesh (ಮಾಂಸದ ದೊಡ್ಡ ಗುಡ್ಡ), trunk of humours (ಚಂಚಲತೆಯ ಪೆಟ್ಟಿಗೆ), reverend vice (ಪೂಜನೀಯ ದುಷ್ಟತನ), grey inequity (ನರೆತ ಕೂದಲಿನ ಅನ್ಯಾಯ), vanity in years (ವಯಸ್ಸಾದ ಒಣ ಜಂಬ) ಎಂದೆಲ್ಲ ಹಾಸ್ಯ ಮಾಡುತ್ತಾನೆ. ಪಾಯಿನ್ಸ್ ಅವನನ್ನು Monsieur Remorse (ಶ್ರೀಮಾನ್ ಪಶ್ಚಾತ್ತಾಪ), Sir John Sack and Sugar (ಮಾನ್ಯ ಜಾನ್ ಮದ್ಯ -ಮತ್ತು ಸಕ್ಕರೆ) ಎಂದು ಗೇಲಿ ಮಾಡುತ್ತಾನೆ. ಆದರೆ ಫಾಲ್ಸ್ಟಾಫ್ ತನ್ನ ವಿಷಯ ತಾನು ಮಾತನಾಡಿಕೊಂಡಾಗ ಇವರೆಲ್ಲರನ್ನೂ ಮೀರಿಸುತ್ತಾನೆ. ತನ್ನ ಗಾತ್ರದ ವಿಷಯ ಯಾವ ಭ್ರಾಂತಿಯೂ �